For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ನೋಡಿ ಪ್ರಭಾವಿತಗೊಂಡು ಗಂಡನ ಹಿಗ್ಗಾ-ಮುಗ್ಗಾ ಥಳಿಸಿದ ಪತ್ನಿ: ದೂರು ದಾಖಲು

  |

  ಸಿನಿಮಾ ಅತ್ಯಂತ ಪ್ರಭಾವಶಾಲಿ ಮಾಧ್ಯಮ ಎಂಬುದರಲ್ಲಿ ಅನುಮಾನವಿಲ್ಲ. ಸಿನಿಮಾಗಳನ್ನು ಜನರ ಅಭಿಪ್ರಾಯ ತಿದ್ದಲು ಬಳಸಿದ ಉದಾಹರಣೆ ಸಾಕಷ್ಟಿದೆ.

  ಸಿನಿಮಾ ನೋಡಿ ಜೀವನಶೈಲಿ ಬದಲಾಯಿಸಿಕೊಂಡ ಸಾವಿರಾರು ಉದಾಹರಣೆಗಳು ಭಾರತದಲ್ಲೇ ಸಿಗುತ್ತವೆ. 'ಬಂಗಾರದ ಮನುಷ್ಯ' ಸಿನಿಮಾ ನೋಡಿ ರೈತರಾದ ಯುವಕರು, 'ಗಂಧದ ಗುಡಿ' ಸಿನಿಮಾ ನೋಡಿ ಫಾರೆಸ್ಟ್ ಆಫೀಸರ್ ಕೆಲಸಕ್ಕೆ ಸೇರಿದವರು. ಹೀಗೆ ಉತ್ತಮ ಬದಲಾವಣೆಗಳ ಜೊತೆಗೆ ಕೆಟ್ಟ ಪ್ರಭಾವವನ್ನೂ ಸಿನಿಮಾಗಳು ಬೀರಿವೆ.

   'ಕಾಂತಾರ' ಯಶಸ್ಸಿನ ಬಳಿಕ ತೆರೆಮೇಲೆ ಮೂಡಲಿದೆ ಕೊರಗಜ್ಜನ ಮಹಿಮೆ? ಸಿನಿಮಾ ಮಾಡ್ತಿರೋದ್ಯಾರು? 'ಕಾಂತಾರ' ಯಶಸ್ಸಿನ ಬಳಿಕ ತೆರೆಮೇಲೆ ಮೂಡಲಿದೆ ಕೊರಗಜ್ಜನ ಮಹಿಮೆ? ಸಿನಿಮಾ ಮಾಡ್ತಿರೋದ್ಯಾರು?

  ಸಿನಿಮಾದಿಂದ ಸ್ಪೂರ್ತಿ ಪಡೆದು ಕೊಲೆ ಮಾಡಿದ ಪ್ರಕರಣಗಳು, ರೌಡಿಸಂಗೆ ಇಳಿದ ಪ್ರಕರಣಗಳು ಆಗಾಗ್ಗೆ ವರದಿ ಆಗುತ್ತಲೇ ಇರುತ್ತವೆ. ಇದೀಗ ಕೇರಳದಲ್ಲಿ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಸಿನಿಮಾ ನೋಡಿ ಪ್ರೇರಣೆಗೊಂಡು ಪತ್ನಿಯೊಬ್ಬಾಕೆ ತನ್ನ ಪತಿಯನ್ನೇ ಹಿಗ್ಗಾ-ಮುಗ್ಗ ಥಳಿಸಿದ್ದಾಳೆ!

  'ಜಯ ಜಯ ಜಯ ಹೇ' ಹೆಸರಿನ ಮಲಯಾಳಂ ಸಿನಿಮಾವೊಂದು ಇತ್ತೀಚೆಗೆ ಬಿಡುಗಡೆ ಆಗಿದೆ. ಕಡಿಮೆ ಬಜೆಟ್‌ನ ಈ ಸಿನಿಮಾ ಕೇರಳ ಮಾತ್ರವೇ ಅಲ್ಲದೆ, ಬೆಂಗಳೂರು, ಹೈದರಾಬಾದ್‌ನಲ್ಲಿಯೂ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಮಹಿಳಾಪರ ದನಿಯುಳ್ಳ ಈ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಜೋರು ಚರ್ಚೆಗಳು ನಡೆಯುತ್ತಿವೆ.

  ಸಿನಿಮಾ ನೋಡಿ ಪತಿಯನ್ನು ಹೊಡೆದ ಪತ್ನಿ!

  ಸಿನಿಮಾ ನೋಡಿ ಪತಿಯನ್ನು ಹೊಡೆದ ಪತ್ನಿ!

  ಈ ಸಿನಿಮಾದ ನಾಯಕ ನಟ, ಬಾಸಿಲ್ ಜೋಸೆಫ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತಮ್ಮ ಸಿನಿಮಾ ನೋಡಿ, ಮಹಿಳೆಯೊಬ್ಬಾಕೆ ತನ್ನ ಪತಿಯ ಮೇಲೆ ಹಲ್ಲೆ ಮಾಡಿದ ಘಟನೆಯ ಬಗ್ಗೆ ಹೇಳಿದ್ದಾರೆ. ''ನಾನು ವ್ಯಕ್ತಿಯ ಹೆಸರು ಹೇಳಲಾರೆ, ಆದರೆ 'ಜಯ ಜಯ ಜಯ ಹೇ' ಸಿನಿಮಾ ನೋಡಿದ ಮಹಿಳೆಯೊಬ್ಬಾಕೆ ತನ್ನ ಪತಿಯನ್ನು ಹಿಗ್ಗಾ ಮುಗ್ಗ ಥಳಿಸಿರುವ ಘಟನೆ ನಡೆದಿದೆ. ಆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ'' ಎಂದಿದ್ದಾರೆ.

  'ಕರಾಟೆ ಕ್ಲಾಸ್‌ಗೆ ಸೇರಿಸಿದ್ದೇವೆಂದು ಹೇಳುತ್ತಿದ್ದಾರೆ'

  'ಕರಾಟೆ ಕ್ಲಾಸ್‌ಗೆ ಸೇರಿಸಿದ್ದೇವೆಂದು ಹೇಳುತ್ತಿದ್ದಾರೆ'

  ಅದೇ ಸಂದರ್ಶನದಲ್ಲಿ ಮುಂದುವರೆದು ಮಾತನಾಡಿರುವ ಬಾಸಿಲ್, ''ಜಯ ಜಯ ಜಯ ಹೇ, ಹಿಂದಿಯ 'ಡಾರ್ಲಿಂಗ್ಸ್' ರೀತಿಯ ಕಮರ್ಷಿಯಲ್ ಸಿನಿಮಾಗಳ ಶಕ್ತಿಯೆಂದರೆ ಅವು ವ್ಯಂಗ್ಯವಾಗಿ ನಿಜವನ್ನು ಪ್ರಸ್ತುತಿ ಪಡಿಸುತ್ತವೆ. ಇವು ಪ್ರೇಕ್ಷಕರ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ. ನನಗೆ ಹಲವು ಕರೆಗಳು ಬರುತ್ತವೆ, ಎಷ್ಟೋ ಮಂದಿ ಪೋಷಕರು ಕರೆ ಮಾಡಿ, ಮಗಳನ್ನು ಈಗಾಗಲೇ ಕರಾಟೆ ಕ್ಲಾಸ್‌ಗೆ ಸೇರಿಸಿದ್ದೇವೆ ಎಂದು ಹೇಳುತ್ತಾರೆ. ಈಗಿನ ಪೀಳಿಗೆಯ ಹೆಣ್ಣು ಮಕ್ಕಳಿಗೆ ಇದು ಅವಶ್ಯಕ ಸಹ'' ಎಂದಿದ್ದಾರೆ.

  'ಡ್ಯಾನ್ಸ್ ಮಾಡುತ್ತಾ ಸಿನಿಮಾ ನೋಡುತ್ತಿದ್ದಾರೆ ಮಹಿಳೆಯರು'

  'ಡ್ಯಾನ್ಸ್ ಮಾಡುತ್ತಾ ಸಿನಿಮಾ ನೋಡುತ್ತಿದ್ದಾರೆ ಮಹಿಳೆಯರು'

  ''ನನಗೆ ಸಾಕಷ್ಟು ಮಹಿಳೆಯರ ಕರೆಗಳು ಬರುತ್ತವೆ. ಸಿನಿಮಾ ನೋಡುತ್ತಿದ್ದರೆ ನನ್ನದೇ ಕತೆ ಎನಿಸುತ್ತದೆ ಎಂದು ಹೇಳುತ್ತಾರೆ. ಸಿನಿಮಾ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳಿಗೆ ನಾನು ಭೇಟಿ ನೀಡಿದಾಗ ನನಗೇ ಆಶ್ಚರ್ಯವಾಗುತ್ತದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಿನಿಮಾಕ್ಕೆ ಬರುತ್ತಿದ್ದಾರೆ. ಸಿನಿಮಾ ನೋಡುವಾಗ ಹಾಡು-ಡ್ಯಾನ್ಸ್ ಮಾಡುತ್ತಾ ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದಾರೆ'' ಎಂದಿದ್ದಾರೆ ಬಾಸಿಲ್.

  ವಿಪಿನ್ ದಾಸ್ ನಿರ್ದೇಶನ ಮಾಡಿರುವ ಸಿನಿಮಾ

  ವಿಪಿನ್ ದಾಸ್ ನಿರ್ದೇಶನ ಮಾಡಿರುವ ಸಿನಿಮಾ

  'ಜಯ ಜಯ ಜಯ ಹೇ' ಸಿನಿಮಾವನ್ನು ವಿಪಿನ್ ದಾಸ್ ನಿರ್ದೇಶನ ಮಾಡಿದ್ದಾರೆ. ದರ್ಶನಾ ರಾಜೇಂದ್ರ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ನಾಯಕ ನಟ ಬಾಸಿಲ್ ಜನಪ್ರಿಯ ನಿರ್ದೇಶಕರೂ ಆಗಿದ್ದು, 'ಮಿನಲ್ ಮುರಲಿ', 'ಗೋಧಾ', 'ಕುಂಜಿರಮಯನಂ' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. 'ಜಯ ಜಯ ಜಯ ಹೇ' ಸಿನಿಮಾವು ಮಹಿಳೆಯ ಮೇಲಿನ ಗೃಹಹಿಂಸೆಯ ವಿರುದ್ಧವಾದ ಕತೆಯನ್ನು ಹೊಂದಿದ್ದು, ಹಾಸ್ಯದ ಧಾಟಿಯಲ್ಲಿ ಕತೆಯನ್ನು ಪ್ರಸ್ತುತಪಡಿಸುತ್ತಿದೆ. ಕೇವಲ 5 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿರುವ ಈ ಸಿನಿಮಾ ಈಗಾಗಲೇ 50 ಕೋಟಿ ಹಣ ಗಳಿಸಿದೆ. ಇನ್ನೂ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ.

  English summary
  A Wife in Kerala beaten her husband after watching Malayalam movie Jaya Jaya Jaya hey said movie hero Basil Joseph.
  Tuesday, November 22, 2022, 21:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X