ಮತ್ತೆ ಇನ್‌ಸ್ಟಾಗ್ರಾಂಗೆ ಮರಳಿದ ಪ್ರಿಯಾ ಪ್ರಕಾಶ್: ಖಾತೆ ಡಿಲೀಟ್ ಮಾಡಿದಕ್ಕೆ ಕಾರಣ ಹೇಳಿದ ಕಣ್ಸನ್ನೆ ಸುಂದರಿ

ಪ್ರಿಯಾ ಪ್ರಕಾಶ್ ವಾರಿಯರ್, ಕಣ್ಸನ್ನೆ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆದ ನಟಿ. ಕೇವಲ ಒಂದು ದೃಶ್ಯದಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಪ್ರಿಯಾ ವಾರಿಯರ್, ಸಾಮಾಜಿಕ ಜಾಲತಾಣದಲ್ಲಿಯೂ ಸಹ ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಮಾಡುತ್ತಿದ್ದಂತೆ, ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮಂಟ್ ಗಳನ್ನು ಗಿಟ್ಟಿಕೊಳ್ಳುತ್ತಿದ್ದ ಪ್ರಿಯಾ, ದಿಢೀರನೆ ಇನ್‌ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದ ನಟಿ ಸಾಮಾಜಿಕ ಜಾಲತಾಣದಿಂದನೇ ಮಾಯವಾಗಿದ್ದು ಅಭಿಮಾನಿಗಳಿಗೆ ಭಾರಿ ಬೇಸರ ತಂದಿತ್ತು. ಆದರೀಗ ಪ್ರಿಯಾ ವಾರಿಯರ್ ಮತ್ತೆ ಇನ್‌ಸ್ಟಾಗ್ರಾಂ ಖಾತೆಯನ್ನು ಆಕ್ಟೀವ್ ಮಾಡಿದ್ದಾರೆ. ಅಲ್ಲದೆ ಇನ್‌ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಿದ್ದಕ್ಕೆ ಕಾರಣ ನೀಡಿದ್ದಾರೆ. ಮುಂದೆ ಓದಿ..

ಇನ್‌ಸ್ಟಾಗ್ರಾಂ ನಲ್ಲಿ 72 ಲಕ್ಷ ಹಿಂಬಾಲಕರಿದ್ದಾರೆ

ಇನ್‌ಸ್ಟಾಗ್ರಾಂ ನಲ್ಲಿ 72 ಲಕ್ಷ ಹಿಂಬಾಲಕರಿದ್ದಾರೆ

ಪ್ರಿಯಾ ವಾರಿಯರ್ ಇನ್ಸ್ಟಾಗ್ರಾಮ್ ಖಾತೆಯನ್ನು 72 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಇನ್ಸ್ಟಾ ಫಾಲೋವರ್ಸ್ ವಿಚಾರದಲ್ಲೂ ಅನೇಕ ನಟಿಯರನ್ನು ಹಿಂದಿಕ್ಕಿ ದಾಖಲೆ ನಿರ್ಮಿಸಿದ್ದರು. ಹೀಗಿದ್ದರೂ ಸಹ ಕಳೆದ ಎರಡು ವಾರದ ಹಿಂದೆ ಪ್ರಿಯಾ ವಾರಿಯರ್ ತಮ್ಮ ಇನ್‌ಸ್ಟಾಗ್ರಾಂ ಖಾತೆ ಬಂದ್ ಮಾಡಿದ್ದರು.

ಮತ್ತೆ ವಾಪಸ್ ಆಗಿ ಕಾರಣ ಹೇಳಿದ ಪ್ರಿಯಾ

ಮತ್ತೆ ವಾಪಸ್ ಆಗಿ ಕಾರಣ ಹೇಳಿದ ಪ್ರಿಯಾ

ಸದ್ಯ ಮತ್ತೆ ಇನ್ಸ್ಟಾಗ್ರಾಮ್ ಖಾತೆಯನ್ನು ಆಕ್ವೀಟ್ ಮಾಡಿದ್ದಾರೆ. ಡಿಲೀಟ್ ಮಾಡಿದಕ್ಕೆ ಕಾರಣ ನೀಡಿದ್ದಾರೆ. ಮನಸ್ಸಿನ ನೆಮ್ಮದಿಗಾಗಿ ಪ್ರಿಯಾ ಇನ್ಸ್ಟಾಗ್ರಾಮ್ ಅನ್ನು ಡಿಲೀಟ್ ಮಾಡಿದ್ದಾರಂತೆ. "ತುಂಬಾ ಜನ ಕೇಳುತ್ತಿದ್ದಾರೆ. ನಾನು ಬ್ರೇಕ್ ತೆಗೆದುಕೊಳ್ಳುವ ಉದ್ದೇಶದಿಂದ ಇನ್ಸ್ಟಾಗ್ರಾಮ್ ನಿಂದ ದೂರ ಉಳಿದಿದ್ದೆ. ಲಾಕ್ ಡೌನ್ ನಲ್ಲಿ ಯಾವಾಗಲು ಸಾಮಾಜಿಕ ಜಾಲತಾಣ ಬಳಸುತ್ತಿರುತ್ತಾರೆ. ಆದರೆ ನಾನು ಮನಸ್ಸಿನ ನೆಮ್ಮದಿಗಾಗಿ ಈ ನಿರ್ಧಾರ ಮಾಡಿದೆ. ನಿಜಕ್ಕು ನಾನು ಕಳೆದ ಎರಡು ವಾರದಿಂದ ನೆಮ್ಮದಿಯಾಗಿದ್ದೆ. ಆದರೆ ಪುಟ್ಟ ಬ್ರೇಕ್ ಅಷ್ಟೆ ಪಡೆದ. ಕಾರಣ ಕಲಾವಿದರು ಶಾಶ್ವತವಾಗಿ ಸಾಮಾಜಿಕ ಜಾಲತಾಣದಿಂದ ದೂರ ಉಳಿಯಲು ಸಾಧ್ಯವಿಲ್ಲ ಎಂದು ಮತ್ತೆ ಮರಳಿದ್ದೀನಿ" ಎಂದಿದ್ದಾರೆ.

ಟ್ರೋಲ್ ಗಳು ಮನಸ್ಸಿಗೆ ನೋವಾಗುತ್ತೆ

ಟ್ರೋಲ್ ಗಳು ಮನಸ್ಸಿಗೆ ನೋವಾಗುತ್ತೆ

"ಈ ಎರಡು ವಾರಗಳು ತುಂಬಾ ಎಂಜಾಯ್ ಮಾಡಿದೆ. ತುಂಬಾ ನೆಮ್ಮದಿಯಾಗಿದ್ದೆ ಮತ್ತು ತುಂಬಾ ಸಂತೋಷವಾಗಿದ್ದೆ. ಮನಸ್ಸಿನ ನೆಮ್ಮದಿಗಾಗಿ ಮಾತ್ರ ನಾನು ಹೀಗೆ ಮಾಡಿದೆ. ಮತ್ತೇನು ಇಲ್ಲ. ಆದರೆ ಅನೇಕರು ಸಾಕಷ್ಟು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ, ಟ್ರೋಲ್ ಗಳನ್ನು ಮಾಡಿದ್ದಾರೆ. ಆದರೆ ಈ ಟ್ರೋಲ್ ಎಲ್ಲ ನನಗೆ ಹೊಸದೇನಲ್ಲ. ಆದರೆ ಕೆಲವು ಟ್ರೋಲ್ ಗಳು ತುಂಬಾ ನೋವಾಗುತ್ತೆ. ಆದರೆ ಇದೆಲ್ಲ ನನ್ನನ್ನು ಮತ್ತಷ್ಟು ಗಟ್ಟಿಗೊಳಿಸುತ್ತೆ" ಎಂದು ಹೇಳಿದ್ದಾರೆ.

ಒಂದೇ ದಿನದಲ್ಲಿ ಹೆಚ್ಚು ಹಿಂಬಾಲಕರನ್ನು ಪಡೆದಾಕೆ

ಒಂದೇ ದಿನದಲ್ಲಿ ಹೆಚ್ಚು ಹಿಂಬಾಲಕರನ್ನು ಪಡೆದಾಕೆ

ಪ್ರಿಯಾ ಪ್ರಕಾಶ್ ವಾರಿಯರ್, ರಾತ್ರೋ ರಾತ್ರಿ ಖ್ಯಾತಿ ಗಳಿಸುತ್ತಿದ್ದಂತೆ ಆಕೆಯ ಯಾರು ಎನ್ನುವ ಕುತೂಹಲ ಎಲ್ಲರಲ್ಲಿಯೂ ಮೂಡಿಸತ್ತು. ಇನ್ಸ್ಟಾಗ್ರಾಮ್ ಖಾತೆ ತೆರೆಯುತ್ತಿದ್ದಂತೆ ಒಂದೇ ದಿನದಲ್ಲಿ ಸುಮಾರು ಆರು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಪಡೆದಿದ್ದರು. ಹೀಗೆ ಒಂದೇ ದಿನದಲ್ಲಿ ಇಷ್ಟೊಂದು ಫಾಲೋವರ್ಸ್ ಗಳನ್ನು ಪಡೆದ ಮೂರನೇ ವ್ಯಕ್ತಿ ಪ್ರಿಯಾ ಎಂಬ ದಾಖಲೆ ಇವರ ಹೆಸರಿಗಿತ್ತು. ಅಲ್ಲದೆ ಪ್ರಿಯಾ ಒಂದು ಪೋಸ್ಟ್ ಗೆ ಇನ್ಸ್ಟಾಗ್ರಾಮ್ ಲಕ್ಷಗಟ್ಟಲೆ ಹಣ ನೀಡುತ್ತೆ.

More from Filmibeat

English summary
Wink girl Priya Prakash Varrier back on instagram after 2 weeks. She says I wanted break from social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X