For Quick Alerts
  ALLOW NOTIFICATIONS  
  For Daily Alerts

  ಪ್ರಕೃತಿ ಸೌಂದರ್ಯ.. ಕಣ್ಸನ್ನೆ ಹುಡುಗಿ ಸೌಂದರ್ಯ: ಯಾವುದನ್ನು ನೋಡುವುದೋ ಎಂದು ಪಡ್ಡೆ ಹುಡುಗರು ಫುಲ್ ಕನ್ಫ್ಯೂಸ್!

  |

  ಕೇರಳ ಕುಟ್ಟಿ ಪ್ರಿಯಾ ಪ್ರಕಾಶ್ ವಾರಿಯರ್ ಫಾರಿನ್ ಟ್ರಿಪ್ ಇನ್ನು ಮುಗಿದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಫೋಟೊ ಶೇರ್ ಮಾಡಿ ಕಣ್ಸನ್ನೆ ಹುಡುಗಿ ಪಡ್ಡೆ ಹುಡುಗರ ಎದೆಗೆ ಕಿಚ್ಚು ಹಚ್ಚುತ್ತಿದ್ದಾಳೆ. ಸದ್ಯ ಥಾಯ್ಲೆಂಡ್‌ನಲ್ಲಿ ಬೀಡುಬಿಟ್ಟಿರುವ ಚೆಲುವೆ ದೋಣಿ ಏರಿ ಸಾಗರದಲ್ಲಿ ವಿಹರಿಸುತ್ತಿದ್ದಾಳೆ. ಬಿಕಿನಿ ತೊಟ್ಟು ನೀರಿನಲ್ಲಿ ಮಿಂದೆದ್ದಿದ್ದಾಳೆ. ಆ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.

  'ಒರು ಆಡಾರ್ ಲವ್' ಚಿತ್ರದಲ್ಲಿ ಕಣ್ಸನ್ನೆ ಮೂಲಕ ರಾತ್ರೋರಾತ್ರಿ ಸೆನ್ಸೇಷನ್ ಕ್ರಿಯೇಟರ್ ಮಾಡಿದ ಚೆಲುವೆ ಈಕೆ. ಮುಂದೆ ಕನ್ನಡ, ಹಿಂದಿ, ತಮಿಳು ಸಿನಿಮಾಗಳಲ್ಲೂ ಪ್ರಿಯಾ ನಟಿಸಿ ಪ್ರೇಕ್ಷಕರ ಮನಗೆಲ್ಲುವ ಪ್ರಯತ್ನ ಮಾಡಿದಳು. ಆದರೆ ಆಕೆಯ ಪ್ರಯತ್ನಕ್ಕೆ ಅಷ್ಟಾಗಿ ಸಕ್ಸಸ್ ಸಿಗಲಿಲ್ಲ. ಇವತ್ತಿಗೂ ಪ್ರಿಯಾ ಪ್ರಕಾಶ್ ವಾರಿಯರ್ ಅಂದಾಕ್ಷಣ ನೆನಪಾಗುವುದು ಕಣ್ಣ ಹುಬ್ಬುಗಳನ್ನೇ ಬಾಣದಂತೆ ಬಾಗಿಸಿ ಬಳುಕಿಸಿ ಪಡ್ಡೆಗಳ ಎದೆಗೆ ಕಣ್ಣಲ್ಲೇ ಹೂಬಾಟ ಬಿಟ್ಟ ದೃಶ್ಯ. ಸದ್ಯ ಈ ಮಲಯಾಳಿ ಚೆಲುವೆ ಬ್ಯಾಂಕಾಕ್, ಥಾಯ್ಲೆಂಡ್‌ನಲ್ಲಿ ಮೋಜು ಮಸ್ತಿ ಮಾಡ್ತಿದ್ದಾಳೆ.

  ಸ್ವಿಮ್ಮಿಂಗ್ ಪೋಲ್‌ನಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಹಾಟ್ ಟ್ರೀಟ್!ಸ್ವಿಮ್ಮಿಂಗ್ ಪೋಲ್‌ನಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಹಾಟ್ ಟ್ರೀಟ್!

  ಪ್ರಿಯಾ ವಾರಿಯರ್ ನಟನೆಯ 'ಒರು ಆಡಾರ್ ಲವ್' ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿತ್ತು. ಇನ್ನು ಕೆ. ಮಂಜು ಪುತ್ರ ಶ್ರೇಯಸ್ ಮಂಜು ನಟನೆಯ 'ವಿಷ್ಣುಪ್ರಿಯ' ಚಿತ್ರದಲ್ಲೂ ಕಣ್ಸನ್ನೆ ಹುಡುಗಿ ನಟಿಸಿದ್ದಾಳೆ. ಮುಂದಿನ ವರ್ಷ ವ್ಯಾಲೆಂಟೈನ್ಸ್‌ ಡೇ ಸಂಭ್ರಮದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.

   ಪ್ರಿಯಾ ವಾರಿಯರ್ ಕ್ಲಿವೇಜ್ ಶೋ

  ಪ್ರಿಯಾ ವಾರಿಯರ್ ಕ್ಲಿವೇಜ್ ಶೋ

  ಸದ್ಯ ಪ್ರಿಯಾ ಥಾಯ್ಲೆಂಡ್‌ನ ಫೀ ಫೀ ಐಸ್‌ಲ್ಯಾಂಡ್‌ನಲ್ಲಿ ಸುತ್ತಾಡಿರುವ ಫೋಟೊಗಳನ್ನು ಶೇರ್ ಮಾಡಿದ್ದಾಳೆ. ಅದರು ಬಿಕಿನಿ ತೊಟ್ಟು ಬೋಟ್ ಏರಿ ಪ್ರಕೃತಿ ಸೌಂದರ್ಯ ಸವಿದಿರುವ ಫೋಟೊವೊಂದು ವೈರಲ್ ಆಗಿದೆ. ಕಣ್ಸನ್ನೆ ಹುಡುಗಿ ಸುಂದರ ದ್ವೀಪದ ನಿಸರ್ಗ ಸೌಂದರ್ಯಕ್ಕೆ ಮರುಳಾದರೇ ಪಡ್ಡೆ ಹುಡುಗರು ಆಕೆಯ ಅಂದ ಚೆಂದ ಕಂಡು ಸುಸ್ತಾಗಿದ್ದಾರೆ. ಇನ್ನು ಬರೀ ಬೋಟ್ ಏರಿ ಸುಸ್ತಾಡಿರೋದಷ್ಟೆ ಅಲ್ಲ, ನೀರಿನಲ್ಲಿ ಈಜಾಡಿ ಪ್ರಿಯಾ ಎಂಜಾಯ್ ಮಾಡಿದ್ದಾಳೆ.

   ಬಿಕಿನಿ ತೊಟ್ಟು ಬೀಚ್‌ಗಳಲ್ಲಿ ಸುತ್ತಾಟ

  ಬಿಕಿನಿ ತೊಟ್ಟು ಬೀಚ್‌ಗಳಲ್ಲಿ ಸುತ್ತಾಟ

  ಕಳೆದೊಂದು ವಾರದಿಂದ ಪ್ರಿಯಾ ಬ್ಯಾಂಕಾಕ್ ಹಾಗೂ ಥಾಯ್ಲೆಂಡ್‌ ಪ್ರವಾಸದಲ್ಲಿದ್ದಾಳೆ. ಬೀಚ್‌ ನೋಡಿ ಬಿಕಿನಿ ಟಾಪ್, ಶಾರ್ಟ್ಸ್ ತೊಟ್ಟು ಅಡ್ಡಾಡಿದ್ದಾಳೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ಶೇರ್ ಮಾಡುತ್ತಲೇ ಇದ್ದಾಳೆ. ಇಲ್ಲಿನ ರೆಸಾರ್ಟ್‌ಗಳಲ್ಲಿ ಸ್ಟೇ ಆಗಿದ್ದು, ಪ್ರವಾಸಿ ತಾಣಗಳಿಗೆ ಭೇಟಿ ಕೊಡುತ್ತಿದ್ದಾಳೆ. ಬೀಚ್ ಕಂಡೊಡನೆ ಖುಷಿಯಾಗಿ ನೀರಲ್ಲಿ ಆಟ ಆಡುತ್ತಿದ್ದಾಳೆ. ಪ್ರಿಯಾ ಹಾಟ್ ಟ್ರೀಟ್‌ಗೆ ಪಡ್ಡೆ ಹುಡುಗಳು ಫಿದಾ ಆಗೋಗಿದ್ದಾರೆ.

   ಹುಲಿ ಜೊತೆ ಕಣ್ಸನ್ನೆ ಹುಡುಗಿ ಪೋಸ್

  ಹುಲಿ ಜೊತೆ ಕಣ್ಸನ್ನೆ ಹುಡುಗಿ ಪೋಸ್

  ಥಾಯ್ಲೆಂಡ್‌ಗೆ ಪ್ರವಾಸಕ್ಕೆ ಹೋಗುವ ಬಹುತೇಕರು ಪುಕೆಟ್‌ ಟೈಗರ್ ಪಾರ್ಕ್‌ಗೆ ಭೇಟಿ ಕೊಡುತ್ತಾರೆ. ಪ್ರಿಯಾ ಕೂಡ ಪಾರ್ಕ್‌ನಲ್ಲಿ ಹುಲಿಗಳನ್ನು ಕಂಡು ಖುಷಿಯಾಗಿದ್ದಾಳೆ. ಮೊದಲಿಗೆ ಹುಲಿ ಬಳಿ ಹೋಗಲು ಬೈ ಬಿದ್ದರು ನಂತರ ಧೈರ್ಯ ಮಾಡಿ ಹುಲಿ ಜೊತೆ ಪೋಸ್ ಕೊಟ್ಟು ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾಳೆ. ಕೊನೆವರೆಗೂ ಹುಲಿ ಹಿಂದೆ ಇದ್ದ ಚೆಲುವೆ ಕೊನೆಗೂ ಮುಂದೆ ಹೋಗಿ ನಿಲ್ಲುವ ಧೈರ್ಯ ಮಾತ್ರ ಮಾಡಲೇಯಿಲ್ಲ. ನೀವೇನಾದರೂ ಥಾಯ್ಲೆಂಡ್‌ಗೆ ಬಂದರೆ ಟೈಗರ್‌ ಪಾರ್ಕ್‌ಗೆ ಭೇಟಿ ಕೊಡಿ ಎಂದು ಬರೆದುಕೊಂಡಿದ್ದಾಳೆ.

   ಮಲಯಾಳಂ, ಹಿಂದಿ ಚಿತ್ರಗಳಲ್ಲಿ ನಟನೆ

  ಮಲಯಾಳಂ, ಹಿಂದಿ ಚಿತ್ರಗಳಲ್ಲಿ ನಟನೆ

  ಕಣ್ಸನ್ನೆ ಹುಡುಗಿ ಬಗ್ಗೆ ಮೊದಲು ಇದ್ದ ಕ್ರೇಜ್ ಈಗ ಇಲ್ಲ. ಆದರೂ ಸಾಲು ಸಾಲು ಸಿನಿಮಾಗಳಲ್ಲಿ ಈ ಕೇರಳ ಕುಟ್ಟಿ ನಟಿಸ್ತಿದ್ದಾಳೆ. ಕನ್ನಡದ 'ವಿಷ್ಣುಪ್ರಿಯ' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇನ್ನು ಹಿಂದಿಯ ಶ್ರೀದೇವಿ ಬಂಗ್ಲೋ, ಥ್ರೀ ಮಂಕೀಸ್, ಲವ್ ಹ್ಯಾಕರ್ಸ್ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗ್ತಿದೆ. ಮಲಯಾಳಂನಲ್ಲಿ 3 ಸಿನಿಮಾಗಳಲ್ಲಿ ಕಣ್ಸನ್ನೆ ಹುಡುಗಿ ನಟಿಸ್ತಿದ್ದಾಳೆ. ಇನ್ನು ಇನ್‌ಸ್ಟಾಗ್ರಾಂನಲ್ಲಿ 7.3 ಮಿಲಿಯನ್ ಫಾಲೋವರ್ಸ್ ಇದ್ದಾರೆ.

  ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ಎಲ್ಲೋದ್ರು? ಏನ್ ಮಾಡ್ತಿದ್ದಾರೆ?ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ಎಲ್ಲೋದ್ರು? ಏನ್ ಮಾಡ್ತಿದ್ದಾರೆ?

  English summary
  Wink girl Priya Prakash Varrier 2looks sizzling in bikini as she enjoys beach Vacations in Thailand. Know More.
  Friday, October 7, 2022, 9:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X