ಗೀತು ಮೋಹನ್ ದಾಸ್‌ದು ಬರೀ ಬೂಟಾಟಿಕೆ; 'ಟಾಕ್ಸಿಕ್' ಬಗ್ಗೆ ಮಲಯಾಳಂ ನಿರ್ದೇಶಕ ವ್ಯಂಗ್ಯ

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ರಾಕಿಭಾಯ್ ಸ್ಟೈಲಿಶ್ ಅವತಾರ ನೋಡ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಸಣ್ಣ ಝಲಕ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಬಹಳ ಸ್ಟೈಲಿಶ್ ಹಾಗೂ ಬೋಲ್ಡ್ ಆಗಿರುವ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

'ಟಾಕ್ಸಿಕ್' ಟೀಸರ್ ಬಗ್ಗೆ ಮಲಯಾಳಂ ಸಿನಿಮಾ ನಿರ್ದೇಶಕ ನಿತಿನ್ ರೆಂಜಿ ಪಣಿಕ್ಕರ್ ಅಸಮಾಧಾನ ಹೊರ ಹಾಕಿದ್ದಾರೆ. ಅದಕ್ಕೆ ಕಾರಣ ನಿರ್ದೇಶಕಿ ಗೀತು ಮೋಹನ್ ದಾಸ್ ಹಳೇ ಹೇಳಿಕೆ. ನಿತಿನ್ ನಿರ್ದೇಶನದ 'ಕಸಾಬ' ಎಂಬ ಸಿನಿಮಾ 2016ರಲ್ಲಿ ಬಿಡುಗಡೆ ಆಗಿತ್ತು. ಆದರೆ ಚಿತ್ರದ ಒಂದು ಡೈಲಾಗ್ ವಿವಾದ ಸೃಷ್ಟಿಸಿತ್ತು. ಆಗ ನಟಿ ಪಾರ್ವತಿ ಮೆನನ್ ಸೇರಿ ಕೆಲವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಗೀತು ಮೋಹನ್ ದಾಸ್ ಕೂಡ ಇದಕ್ಕೆ ಬೆಂಬಲ ಸೂಚಿಸಿದ್ದರು. ಅದೇ ಗೀತು ಈಗ 'ಟಾಕ್ಸಿಕ್' ಚಿತ್ರದಲ್ಲಿ ತೋರಿಸಿರುವುದು ಏನು? ಎಂದು ನಿತಿನ್ ಪ್ರಶ್ನಿಸಿದ್ದಾರೆ.

Yash s Taxic teaser kasaba director Nithin calls out Geethu Mohandas for her hypocrisy

9 ವರ್ಷಗಳ ಹಿಂದೆ ನಟಿ ಪಾರ್ವತಿ ಮನನ್ ಚಿತ್ರೋತ್ಸವವೊಂದರಲ್ಲಿ ಭಾಗಿ ಆಗಿದ್ದರು. ಆಗ ಮಮ್ಮುಟಿ ನಟನೆಯ 'ಕಸಬಾ' ಚಿತ್ರದ ಸಂಭಾಷಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಚಿತ್ರದಲ್ಲಿ ಮಮ್ಮುಟಿ ಪಾತ್ರ ಮಾತನಾಡುವ ಒಂದು ಡೈಲಾಗ್ ಮಹಿಳೆಯರನ್ನು ಅವಹೇಳನ ಮಾಡುವಂತಿದೆ ಎಂದಿದ್ದರು. ಆದರೆ ಪಾರ್ವತಿ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಆಕೆಯ ಮೇಲೆ ಅತ್ಯಾಚಾ*, ಆಸಿಡ್ ದಾಳಿ ಮಾಡುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದ. ಈ ಬಗ್ಗೆ ಆಕೆ ದೂರು ನೀಡಿದ್ದರು. ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದರು.

ಅಂದು ಗೀತು ಮೋಹನ್ ದಾಸ್ ಕೂಡ ನಟಿ ಪಾರ್ವತಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. 'ಕಸಬಾ' ಚಿತ್ರದಲ್ಲಿದ್ದ ಸ್ತ್ರೀ ದ್ವೇಷದ ಸಂಭಾಷಣೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇಂತಹ ಸಂಭಾಷಣೆಯನ್ನು ಸೆಲೆಬ್ರೇಟ್ ಮಾಡಬಾರದು, ಅದು ಪ್ರಗತಿಯ ಸಂಕೇತ ಅಲ್ಲ ಎಂದಿದ್ದರು. ಅಂದು ಆ ರೀತಿ ಮಾತನಾಡಿದ್ದ ಗೀತು ಈಗ 'ಟಾಕ್ಸಿಕ್' ಚಿತ್ರದಲ್ಲಿ ಏನು ಹೇಳಲು ಹೊರಟಿದ್ದಾರೆ. ಸ್ತ್ರೀಯರ ಜೊತೆ ನಾಯಕ ಸರಸ ಆಡುವಂತಹ ಸನ್ನಿವೇಶ 'ಟಾಕ್ಸಿಕ್' ಚಿತ್ರದಲ್ಲಿದೆ. ಹೇಳುವುದು ಒಂದು, ಮಾಡುವುದು ಒಂದು, ಈ ಬೂಟಾಟಿಕೆ ಯಾಕೆ ಎನ್ನುವಂತೆ ನಿತಿನ್ ಪ್ರಶ್ನಿಸಿದ್ದಾರೆ.

ನಿತಿನ್ ಇನ್‌ಸ್ಟಾಗ್ರಾಮ್‌ನಲ್ಲಿ 'ಟಾಕ್ಸಿಕ್' ಟೀಸರ್ ಬಗ್ಗೆ ಪೋಸ್ಟ್ ಮಾಡಿದ್ದಾರೆ. "ಗೀತು ಮೋಹನ್‌ ದಾಸ್ ಅವರದ್ದು ಬರೀ ಬೂಟಾಟಿಕೆ. ಮಲಯಾಳಂ ಬಿಟ್ಟು ಬೇರೆ ಭಾಷೆಯ ಸಿನಿಮಾ ಮಾಡುವಾಗ ಈ ಹಿಂದೆ ತಾನು ವಿರೋಧಿಸಿದ್ದನ್ನು ಹೇಗೆ ಮರೆತುಬಿಡುತ್ತಾರೆ? ಮಾಡೋದು ಅನಾಚಾರ ಮನೆಮುಂದೆ ಬೃಂದಾವನ ಎನ್ನುವಂತೆ ನಿರ್ದೇಶಕಿ ಗೀತು ಬಗ್ಗೆ ವ್ಯಂಗ್ಯವಾಗಿ ನಿತಿನ್ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ.

'ಟಾಕ್ಸಿಕ್' ಸಿನಿಮಾ ಟೀಸರ್ ಬಗ್ಗೆ ಅಭಿಮಾನಿಗಳು ಮೆಚ್ಚಿಕೊಂಡರೂ ಕೆಲವರು ಯಾವುದೋ ಜಾಹೀರಾತು ನೋಡಿದಂತೆ ಇದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 'KGF' ಸರಣಿ ಬಳಿಕ ರಾಕಿಂಗ್ ಸ್ಟಾರ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡಲು ಸಾಕಷ್ಟು ಜನ ಮುಂದೆ ಬಂದಿದ್ದರು. ಆದರೆ ಎಲ್ಲರನ್ನು ಬಿಟ್ಟು ಗೀತು ಮೋಹನ್‌ದಾಸ್ ಹೇಳಿದ ಕತೆ ಮೆಚ್ಚಿ ಸಿನಿಮಾ ಮಾಡಲು ರಾಕಿಭಾಯ್ ಮನಸ್ಸು ಮಾಡಿದ್ದರು.

ಒಂದು ವರ್ಷದ ಕಾಲ ಪ್ರೀ ಪ್ರೊಡಕ್ಷನ್ ವರ್ಕ್ ಮುಗಿಸಿ ಕಳೆದ ವರ್ಷ ಆಗಸ್ಟ್ 8ರಂದು 'ಟಾಕ್ಸಿಕ್' ಸಿನಿಮಾ ಸೆಟ್ಟೇರಿತ್ತು. ಮೊದಲಿಗೆ ಬೆಂಗಳೂರಿನಲ್ಲೇ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ಮಾಡಲಾಗಿತ್ತು. ಬಳಿಕ ಮುಂಬೈನಲ್ಲಿ ಒಂದು ಶೆಡ್ಯೂಲ್ ಮುಗಿಸಲಾಗಿದೆ. ನಯನತಾರ, ಕಿಯಾರಾ ಅಡ್ವಾನಿ ಸೇರಿದಂತೆ ದೊಡ್ಡ ತಾರಾಗಣ ಈ ಅದ್ಧೂರಿ ಚಿತ್ರದಲ್ಲಿದೆ.

More from Filmibeat

English summary
Director Nithin Renji Panicker takes a dig at Geethu Mohandas after watching the 'Toxic' glimpse;
Read more about: toxic yash malayalam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X