U And I (2024)
Release date
05 Apr 2024
genre
U And I ಕಥೆ
'UI' ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಮೂಲಕ ಉಪ್ಪಿ 2 ಚಿತ್ರದ ನಂತರ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ 'UI' ಚಿತ್ರಕ್ಕಿದ್ದು, ಜಿ. ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ಭಂಡವಾಳ ಹೂಡಿದ್ದಾರೆ.
ಟೀಸರ್: ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ 2023ರ ಸೆಪ್ಟಂಬರ್ 18ರಂದು 'UI' ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. ಟೀಸರ್ನಲ್ಲಿ ಕತ್ತಲೆ ಎಲ್ಲಾ ಕಡೆ ಕತ್ತಲೆ.. ಯಾವ ತರ ಜಾಗ ಇದು.. ನೀರಿನ ಸದ್ದು ಕೇಳಿಸ್ತಾ ಇದೆ. ಈ ಕತ್ತಲೆಯಿಂದ ಹೇಗೆ ತಪ್ಪಿಸಿಕೊಳ್ಳಿ.. ಬೆಳಕು ಕಂಡ್ರೆ, ಶಬ್ಧ ಕೇಳಿಸಿದ್ರೆ ಹೊಡೆದು ಹಾಕ್ತಾರೆ.. ಇಲ್ಲಿಂದೆ ಹೇಗೆ ಎಸ್ಕೇಪ್ ಆಗೋದು. ಕಾಮ್ ಆಗಿ ಯೋಚನೆ ಮಾಡು.. ಕಾಂನ್ಸಟ್ರೇಟ್" ಹೀಗೆ ಉಪೇಂದ್ರ ಡೈಲಾಗ್ ಮಾತ್ರ ಇದೆ. ಬರೀ ಬಿಜಿಎಂ ಹಾಗೂ ಡೈಲಾಗ್ ಮಾತ್ರ ಇದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.
ಬಿಡುಗಡೆ: ಉಪೇಂದ್ರ ಅವರ ಬಹನಿರೀಕ್ಷಿತ ಯುಐ ಸಿನಿಮಾ 2024ರಲ್ಲಿ ಬಿಡುಗಡೆಯಾಗಲಿದೆ
**Note:Hey! Would you like to share the story of the movie U And I with us? Please send it to us ([email protected]).