twitter
    Kannada»Movies»Amar»Critics Review

    ವಿಮರ್ಶಕರ ವಿಮರ್ಶೆ

    • ನಿರ್ದೇಶಕ ನಾಗಶೇಖರ್ ಲವ್ ಸ್ಟೋರಿ ಮಾಡುವುದರಲ್ಲಿ ಎತ್ತಿದ ಕೈ ಎಂದು ಈಗಾಗಲೇ ತೋರಿಸಿದ್ದಾರೆ. ಅದೇ ರೀತಿ ಇಲ್ಲಿಯೂ ಒಂದು ಸುಂದರ ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಹೇಳಿದ್ದಾರೆ. ಅಪ್ಪನಂತೆ ಗತ್ತು ತೋರಿಸುತ್ತ, ಡೈಲಾಗ್, ಫೈಟ್ ಜೊತೆಗೆ ಲವರ್ ಬಾಯ್ ಆಗಿ ಅಭಿ ಆಗಮನ ಆಗಿದೆ.

      'ಅಮರ್' ಒಂದು ಪಕ್ಕಾ ಲವ್ ಸ್ಟೋರಿ ಸಿನಿಮಾ. ಅಮರ್ (ಅಭಿಷೇಕ್) ಮತ್ತು ಬಾರ್ಬಿ (ತಾನ್ಯಾ) ಇಬ್ಬರ ನಡುವೆ ಮೊದಲು ವಿರಸ ಬಳಿಕ ಪ್ರೀತಿ ಅರಳುತ್ತದೆ. ಮದುವೆ ಆಗುವ ಸಮಯದಲ್ಲಿ ಬಾರ್ಬಿ ಯನ್ನು ಅಮರ್ ಬಿಟ್ಟು ಹೋಗುತ್ತಾನೆ. ಪ್ರೀತಿಸಿದ್ದ ಹುಡುಗಿಯನ್ನು ಕೈ ಹಿಡಿದು ಕಾಪಾಡಬೇಕಿದ್ದ ಅಮರ್ ಏಕೆ ಅರ್ಧದಲ್ಲಿ ಬಿಟ್ಟು ಹೋಗುತ್ತಾನೆ?, ಕೊನೆಗೆ ಈ ಜೋಡಿ ಒಂದಾಗುತ್ತದೆಯೇ ಎನ್ನುವುದೇ ಸಿನಿಮಾ.

      ಸಿನಿಮಾದ ಕೊನೆಯ ದೃಶ್ಯವನ್ನು ಮಿಸ್ ಮಾಡದೆ ನೋಡಿ ಯಾಕೆಂದರೆ, ಅದು ಅಂಬರೀಶ್ ನಟನೆಯ ಕೊನೆಯ ದೃಶ್ಯ. ಅಂಬರೀಶ್ ಕೊನೆಯ ಆಸೆ, ಮಗನ ಮೊದಲ ಹೆಜ್ಜೆಯಾಗಿರೋ 'ಅಮರ್' ಒಂದು ಅಂದದ ಪ್ರೇಮ ಕಥೆ. ಅಭಿಷೇಕ್ ಸ್ಟೈಲ್ ನಲ್ಲಿಯೇ ಹೇಳಬೇಕು ಅಂದರೆ, ಇದು 'ಲವ್ ಸ್ಟೋರಿ ತರ ಅಲ್ಲ.. ಲವ್ ಸ್ಟೋರಿನೇ..'
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X