ಭೈರವ ಗೀತ (2018)(A)
ಭೈರವ ಗೀತ ಕಥೆ
ಭೈರವ ಗೀತ ಬಂಡಾಯ ಪ್ರೇಮ ಚಿತ್ರವಾಗಿದ್ದು ಡಾಲಿ ಧನಂಜಯ್ ಮತ್ತು ಐರಾ ಮೋರ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸಿದ್ದಾರ್ಥ ನಿರ್ದೇಶಿಸಿದ್ದರೆ,ರಾಮ್ ಗೋಪಾಲ್ ವರ್ಮಾ ಮತ್ತು ಭಾಸ್ಕರ್ ರಾಶಿ ನಿರ್ಮಿಸಿದ್ದಾರೆ.ಹಿಂಸಾಚಾರ ಪೀಡಿತ ವರ್ಗದಲ್ಲಿ ಪ್ರೀತಿ ಕಥೆ ಹೇಳುವ ಚಿತ್ರ ಭೈರವ ಗೀತ. ದಬ್ಬಾಳಿಕೆ ಮಾಡುವ ಭೂ ಮಾಲೀಕನ ಮಗಳ ಪಾತ್ರದಲ್ಲಿ ಇರಾ ಕಾಣಿಸಿಕೊಳ್ಳುತ್ತಿದ್ದಾರೆ.ಇದು 'ಉಳ್ಳವರ ವಿರುದ್ಧ ಇಲ್ಲದವರು ಮಾಡುವ ಹೋರಾಟದ ಕಥೆ'. ಆ ಕಾಲದಲ್ಲಿ ಇದ್ದ ಜೀತ ಪದ್ಧತಿ ಈಗಲೂ ಜೀವಂತವಾಗಿದೆಯೇ ತಿಳಿದಿಲ್ಲ. ಆದರೆ, ಸಿನಿಮಾದ ಕಥೆ ನಿಂತಿರುವುದು ಈ ವಿಷಯದ ಮೇಲೆ. ಶಂಕ್ರಪ್ಪನ ಜೊತೆಗೆ ಗುಲಾಮನ ರೀತಿ ಕೆಲಸ ಮಾಡುವ ಭೈರವ (ಧನಂಜಯ್) ಹೇಗೆ ಅವನ ವಿರುದ್ಧ ಹೋರಾಟ ಮಾಡುತ್ತಾನೆ.
ಕಥೆ
ತಂದೆಯ ನಂತರ ಭೈರವ (ಧನಂಜಯ್) ಕೂಡ ಶಂಕ್ರಪ್ಪ ಎಂಬ ಸಾಹುಕಾರನ ಜೊತೆಗೆ ಕೆಲಸ ಮಾಡುತ್ತಿರುತ್ತಾನೆ. ಮನೆಯ ಸಣ್ಣ ಪುಟ್ಟ ಕೆಲಸದಿಂದ ಹಿಡಿದು ಕೊಲೆಯ ಎಂಬ ಕ್ರೂರ ಕಾರ್ಯದವರೆಗೆ ಎಲ್ಲದರಲ್ಲಿ ಭೈರವ ಎತ್ತಿದ ಕೈ. ಹೀಗಿದ್ದ ಭೈರವ ಒಂದು ಸಮಯಕ್ಕೆ ಶಂಕ್ರಪ್ಪ ವಿರುದ್ಧ ನಿಲ್ಲುತ್ತಾನೆ. ಅದು ಯಾಕೆ?, ಹೇಗೆ?, ಕೊನೆಗೆ ಅಧಿಕಾರಶಾಹಿಗಳನ್ನ ಭೈರವ ಗೆಲ್ಲುತ್ತಾನಾ ಎಂಬುದೇ ಚಿತ್ರಕಥೆ.