twitter

    ಭರಾಟೆ ಕಥೆ

    ಶ್ರೀಮುರಳಿ ಮತ್ತು  ಶ್ರೀಲೀಲಾ ಮುಖ್ಯ ತಾರಾಗಣದಲ್ಲಿರುವ ಭರಾಟೆ ಚಿತ್ರವು ಸಾಹಸಪ್ರಧಾನ ಕೌಟುಂಬಿಕ ಮನರಂಜನಾತ್ಮಕ ಚಿತ್ರವಾಗಿದ್ದು , ಬಹದ್ದೂರ್ ಚೇತನ್ ನಿರ್ದೇಶಿಸಿದ್ದಾರೆ.ಮುರಳಿಯವರ ಸ್ನೇಹಿತ ಸುಪ್ರೀತ್ ಬಂಡವಾಳ ಹೂಡಿದ್ದಾರೆ. ಚಿತ್ರದ ಎಲ್ಲಾ ಕಲಾವಿದರು

    ಸಿನಿಮಾದಲ್ಲೊಬ್ಬ ರಾಜಸ್ತಾನ್ ಗೈಡ್, ಆತನೇ ನಾಯಕ. ಅವನ ಹೆಸರು ಜಗನ್ ಲೋಹನ್ ರತ್ನಾಕರ (ಶ್ರೀ ಮುರಳಿ). ಆತನಿಗೆ ಹೊಡೆದು ಗಾಯ ಮಾಡುವುದು ಗೊತ್ತು, ಅದಕ್ಕೆ ಆಯುರ್ವೇದ ಚಿಕಿತ್ಸೆ ನೀಡುವುದು ಗೊತ್ತು. ಪ್ರವಾಸಿಗರಿಗೆ ರಾಜಸ್ತಾನ ಸುತ್ತಿಸುವ ಈತನಿಗೆ ಪ್ರವಾಸಕ್ಕೆ ಬಂದ ಹುಡುಗಿ ರಾಧ (ಶ್ರೀ ಲೀಲಾ) ಮೇಲೆ ಲವ್ ಆಗುತ್ತದೆ. ಇದೇ ವೇಳೆಗೆ ರಾಜಸ್ತಾನದ ಹುಡುಗ ಉತ್ತರ ಕರ್ನಾಟಕಕ್ಕೆ ಹೋಗಬೇಕಾದ ಸಂದರ್ಭ ಬರುತ್ತದೆ.
    ಬಲ್ಲಾಳ.. ಪಲ್ಲವ.. ನಾಯಕ.. ಈ ಮೂರು ಕುಟುಂಬಗಳ ಆಳ್ವಿಕೆ ಜೋರಾಗಿ ಇರುತ್ತದೆ. ಉತ್ತರ ಕರ್ನಾಟಕಕ್ಕೆ ಬರುವ ನಾಯಕ ಈ ಮೂರು ಮನೆತನಗಳ ವಿರುದ್ಧ 'ಯುದ್ಧ' ಮಾಡಬೇಕಾಗುತ್ತದೆ. ಅದು ಯಾಕೆ...?, ಹಾಗಾದರೆ ನಾಯಕನ ಹಿನ್ನಲೆ ಏನು..?, ಈ ಯುದ್ಧದಲ್ಲಿ ಗೆಲ್ಲುವವರು ಯಾರು..? ಎನ್ನುವುದು ಚಿತ್ರದ ಮುಂದಿನ ಕಥೆ.

    ಚಿತ್ರ ವಿಶೇಷತೆಗಳು

    1. ಬೆಂಗಳೂರಿನ ಅತ್ತಿಗುಪ್ಪೆಯಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ 2018 ಜೂನ್ 25ರ ಬೆಳಿಗ್ಗೆ 5 ಗಂಟೆಗೆ ಚಿತ್ರತಂಡ ಸ್ಕ್ರಿಪ್ಟ್ ಪೂಜೆ ಮಾಡಿತು.
    2. ಸಾಮಾನ್ಯವಾಗಿ ಹಾಡುಗಳ ಚಿತ್ರೀಕರಣ ಹಾಗೂ ದೃಶ್ಯ ಗಳ ಚಿತ್ರೀಕರಣಕ್ಕೆ ಬೇರೆ ಊರುಗಳಿಗೆ ಹೋದಾಗ ಚಿತ್ರದ ಫೋಟೋ ಶೂಟ್ ಮಾಡಿಸುತ್ತಾರೆ. ಆದರೆ ಇದೇ ಮೊದಲ ಬಾರಿಗೆ 'ಭರಾಟೆ' ಚಿತ್ರತಂಡ ಫೋಟೋ ಶೂಟ್ ಗಾಗಿಯೇ ರಾಜಸ್ಥಾನಕ್ಕೆ ಹೋಗಿ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದಿದೆ.
    3. ಬಲ್ಲ ಮೂಲಗಳ ಪ್ರಕಾರ ಭರಾಟೆ ಚಿತ್ರದಲ್ಲಿ 10 ಪ್ರಮುಖ ಖಳನಾಯಕರು ಅಭನಯಿಸಿದ್ದಾರೆ.ಚಿತ್ರದ ಪ್ರಮುಖ ಸಾಹಸ ಸನ್ನಿವೇಶಗಳನ್ನು ಬೆಂಗಳೂರಿನ ನೆಲಮಂಗಲ ಹತ್ತಿರ ಚಿತ್ರೀಕರಣ ಮಾಡಲಾಗಿದೆ.

    4. ಭರಾಟೆ ಚಿತ್ರ ಬಹುಪಾಲು ರಾಜಸ್ಥಾನದಲ್ಲಿ ಚಿತ್ರೀಕರಣ ಆಗುತ್ತಿರುವುದರಿಂದ ಹಿಂದಿ ಮತ್ತು ಭೋಜಪುರಿ ಭಾಷೆಗಳಲ್ಲಿ ಚಿತ್ರದ ಡಬ್ಬಿಂಗ್ ರೈಟ್ಸಗಾಗಿ ತುಂಬಾ ಡಿಮ್ಯಾಂಡ ಸೃಷ್ಟಿಯಾಗಿದೆ.
    5. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಬಿಡುವಿದ್ದಾಗ ರಾಜಸ್ಥಾನದಲ್ಲಿ ಕೋಟೆಯ ಬೀದಿಯ ನೆರಳಿನಲ್ಲಿ ಮುರಳಿ ಮಲಗಿ ವಿಶ್ರಾಂತಿ ಪಡೆಯುವ ಪೋಟೋ ವೈರಲ್ ಆಗಿತ್ತು. ಇದನ್ನು ಕಂಡು ಮುರಳಿ ಪತ್ನಿ ವಿದ್ಯಾಶ್ರೀಯವರು ಸೋಷಿಯಲ್ ಮಿಡೀಯಾದಲ್ಲಿ ಕೆಳಗಿನಂತೆ ಬರೆದುಕೊಂಡಿದ್ದರು.
    "ಯಾವತ್ತಿಗೂ ಇಂದಿನ ದಿನ ಹೇಗಿತ್ತು ಎಂದರೆ ಚೆನ್ನಾಗಿತ್ತು ಎನ್ನುವುದನ್ನು ಮಾತ್ರ ಹೇಳುತ್ತಿದ್ದರು. ಎಂದಿಗೂ ಯಾವುದರ ಬಗ್ಗೆಯೂ ದೂರು ಹೇಳಿಲ್ಲ. ಆದರೆ ಈ ಫೋಟೋಗಳು ನಿಮ್ಮ ಬಗ್ಗೆ ಹೇಳುತ್ತಿವೆ, ನಮಗಾಗಿ ಇಷ್ಟೆಲ್ಲಾ ಶ್ರಮ ಪಡುತ್ತಿರುವ ನಿಮ್ಮ ಬಗ್ಗೆ ಹೆಮ್ಮೆ ಆಗುತ್ತಿದೆ".

    6. ಈ ಚಿತ್ರದ ಬಿಡುವಿನ ವೇಳೆಯಲ್ಲಿ ಬೆಂಗಳೂರಿನಲ್ಲಿದ್ದ ಮುರಳಿ `ಸದಾ ನಿಮ್ಮೊಂದಿಗೆ' ಕಿರುತೆರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಸಹಾಯಕ್ಕಾಗಿ ರಸ್ತೆ ಪಕ್ಕದಲ್ಲಿ ನಿಂತು ಕಬ್ಬಿನ ಹಾಲು ಮಾರಿದ್ದರು.
    7.ಚಿತ್ರದ ಟೀಸರ್ ನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿಸೆಂಬರ್ 17,2018 ರಂದು ಶ್ರೀಮುರಳಿ ಜನ್ಮದಿನ ಪ್ರಯುಕ್ತ ಬಿಡುಗಡೆ ಮಾಡಿದರು. ಈ ಚಿತ್ರದ ಟೀಸರ್ ಜೊತೆಗೆ ದರ್ಶನ್ ಮುರಳಿಯವರ ಮುಂದಿನ ಚಿತ್ರ `ಮದಗಜ' ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿದರು.
    8.'ಭರಾಟೆ' ಚಿತ್ರದಲ್ಲಿ ಸಾಯಿ ಕುಮಾರ್, ರವಿಶಂಕರ್ ಮತ್ತು ಅಯ್ಯಪ್ಪ.ಪಿ.ಶರ್ಮ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಅಣ್ಣಮ್ಮಂದಿರನ್ನ ಒಂದೇ ಸಿನಿಮಾದಲ್ಲಿ ಒಟ್ಟುಗೂಡಿಸುತ್ತಿರುವ ಖ್ಯಾತಿ 'ಭರಾಟೆ' ಚಿತ್ರತಂಡದ ಪಾಲಾಗಿದೆ.
    9. ಚಿತ್ರದಲ್ಲಿರುವ ಪ್ರಮುಖ 40 ಕಲಾವಿದರಲ್ಲಿ 17 ಪಾತ್ರಗಳು ನೆಗೆಟಿವ್ ಶೇಡ್ ನಲ್ಲಿ ನಟಿಸಿದ್ದಾರೆ.

    **Note:Hey! Would you like to share the story of the movie ಭರಾಟೆ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X