ವಿಮರ್ಶಕರ ವಿಮರ್ಶೆ

  • ಐದು ಗೆಳೆಯರು ಪ್ರವಾಸ ಹೋಗುತ್ತಾರೆ. ಆ ಪ್ರವಾಸದಲ್ಲಿ ಭಯಾನಕ ಘಟನೆಗಳು ನಡೆಯುತ್ತವೆ. ಆ ಘಟನೆಗಳ ಹಿಂದಿನ ಚಿತ್ರಕಥೆಯೇ 'ಚಿತ್ರಕಥಾ' ಸಿನಿಮಾ. ಕಥೆಯ ಒನ್ ಲೈನ್ ಕೇಳಿದರೆ, ಈ ರೀತಿಯ ಸಿನಿಮಾ ಈಗಾಗಲೇ ಬಹಳ ಬಂದಿವೆ ಎನಿಸಿದರೂ, ಇದು ಕೊಂಚ ಬೇರೆ ರೀತಿ ಇದೆ. ಥ್ರಿಲ್ಲರ್ ಜಾನರ್ ನಲ್ಲಿ ಬಂದಿರುವ ಈ ಸಿನಿಮಾ ನೋಡಲು ಬೇಸರ ಆಗಲ್ಲ. ಹೊಸಬರ ಈ ಪ್ರಯತ್ನ ಚೆನ್ನಾಗಿದೆ.

   ಸಿನಿಮಾದ ಕೆಲವು ಅಂಶಗಳು ಇಷ್ಟ ಆದ್ರೆ, ಇನ್ನು ಕೆಲವು ಅಂಶಗಳು ಇನ್ನಷ್ಟು ಚೆನ್ನಾಗಿ ಮಾಡಬೇಕಿತ್ತು ಎಂಬ ಭಾವ ಮೂಡಿಸುತ್ತದೆ. ಕಥೆ, ಅದಕ್ಕೆ ಬೆರೆತ ಹಾಸ್ಯ, ಸೆಕೆಂಡ್ ಹಾಫ್ ಟ್ವಿಸ್ಟ್, ಅಘೋರಿ ಪಾತ್ರ ಎಲ್ಲವೂ ಚಿತ್ರದ ಹೈಲೈಟ್ ಆಗಿದೆ. ಆದರೆ, ಈ ಥ್ರಿಲ್ಲರ್ ಸಿನಿಮಾಗೆ ಇನ್ನಷ್ಟು ಟ್ವಿಸ್ಟ್ ಟರ್ನ್, ಚುರುಕಾದ ಚಿತ್ರಕಥೆಯ ಅಗತ್ಯ ಇತ್ತು. ಸಿನಿಮಾದ ಕೆಲ ದೃಶ್ಯಗಳಿಗೆ ಕಡಿವಾಣ ಹಾಕಬಹುದಿತ್ತು.'ಚಿತ್ರಕಥಾ' ಚಿತ್ರವನ್ನು ಕಥೆಯ ಕಾರಣಕ್ಕೆ ಎಲ್ಲರೂ ನೋಡಬಹುದು. ಬೇರೆ ರೀತಿಯ ಪ್ರಯತ್ನ ಇಲ್ಲಿ ಕಾಣುತ್ತದೆ. ಹೊಸಬರು ಸೇರಿ ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ. ಫ್ಯಾಮಿಲಿ ಸಮೇತ ಆರಾಮಾಗಿ ಚಿತ್ರಮಂದಿರದಲ್ಲಿ ಕೂರಬಹುದು. ಥ್ರಿಲ್ಲರ್ ಸಿನಿಮಾ ಇಷ್ಟ ಪಡುವವರು ಮಿಸ್ ಮಾಡಬೇಡಿ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X