twitter

    ಯಜಮಾನ ಕಥೆ

    ಈ ಚಿತ್ರದ ಕಥೆ ಹುಲಿದುರ್ಗ ಎಂಬ ಊರಿನಲ್ಲಿ ನಡೆಯುತ್ತದೆ.ಕೃಷ್ಣ (ದರ್ಶನ್) ಎಲ್ಲರಿಗೂ ಸಹಾಯ ಮಾಡುತ್ತ ಊರಿನ ನೆಚ್ಚಿನ ರೈತಪರ ವ್ಯಕ್ತಿಯಾಗಿ ಬದುಕುತ್ತಿರುತ್ತಾನೆ.ಹುಲಿದುರ್ಗ'ದಲ್ಲಿ ರೈತರು ತಾವೇ ಬೆಳೆ ಬೆಳೆದು ಎಣ್ಣೆ ತಯಾರಿಸುತ್ತಿರುತ್ತಾರೆ.ಊರಿನ ನಾಯಕ ಹುಲಿಯ (ದೇವರಾಜ್) ಎಣ್ಣೆ ಸಂಘದ ಅಧ್ಯಕ್ಷ.  ಚಿತ್ರವಿಶೇಷತೆಗಳು 

    ಖ್ಯಾತ ಅಂತರಾಷ್ಟ್ರೀಯ ಉದ್ಯಮಿ ದೇವಿ ಶೆಟ್ಟಿ ಇಲ್ಲಿಯೂ ತನ್ನ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸಲು ಮುಂದಾಗುತ್ತಾನೆ.ತನ್ನ ಗೋಲ್ಡನ್ ಈಗಲ್  ಕಂಪನಿ ಮೂಲಕ ರೈತರ ಎಣ್ಣೆಯನ್ನು ಕೊಂಡುಕೊಳ್ಳಲು ಬರುತ್ತಾನೆ.ಇದನ್ನು ಕೃಷ್ಣ (ದರ್ಶನ್) ವಿರೋಧ ಮಾಡುತ್ತಾನೆ.

    ತನ್ನ ಉದ್ಯಮಕ್ಕೆ ಯಾರೇ ಎದುರಾದರೂ ಕರುಣೆಯಿಲ್ಲದೇ ಮಟ್ಟಹಾಕುವ ದೇವಿ ಪ್ರಸಾದ ಮತ್ತು ತನ್ನ ಜನತೆಗಾಗಿ ಪ್ರಾಣ ಬೇಕಾದರೂ ಕೊಡುವ ಕೃಷ್ಣ.ಈ ಕಷ್ಟದಿಂದ ಕೃಷ್ಣ ಹೇಗೆ ಮೇಲೆ ಬರುತ್ತಾನೆ ಮತ್ತು ದೇವಿ ಶೆಟ್ಟಿಯನ್ನು ಹೇಗೆ ಮಟ್ಟ ಹಾಕುತ್ತಾನೆ ಎಂಬುದು ಚಿತ್ರದ ಒನ್‌ಲೈನ್ ಕಥೆ.

    ಪೊನ್ ಕುಮಾರನ್ ಮತ್ತು ವಿ ಹರಿಕೃಷ್ಣ ನಿರ್ದೇಶಿಸಿರುವ `ಯಜಮಾನ' ಚಾಲೆಂಜಿಂಗ್ ಸ್ಟಾರ್ ದರ್ಶನ್‌ರವರ 51 ನೇ ಚಿತ್ರ.ಮಾರ್ಚ 1,2019 ರಂದು ಚಿತ್ರ ವಿಶ್ವಾದ್ಯಂತ ಸುಮಾರು 850 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

    ಚಿತ್ರವಿಶೇಷತೆಗಳು

    1.ಚಿತ್ರದ ಟ್ರೇಲರ್‌ನ್ನು ಫೆಬ್ರವರಿ 10 ರ ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಯಿತು.ಚಿತ್ರದ ಟ್ರೇಲರ್ ಸತತವಾಗಿ ಆರು ದಿನಗಳ ಕಾಲ ಟ್ರೆಂಡಿಗ್‌ನಲ್ಲಿತ್ತು. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ಟ್ರೇಲರ್‌ನ್ನು ಯ್ಯೂಟ್ಯೂಬ್ ತನ್ನ ಅಧಿಕೃತ ಟ್ಟಿಟರ್ ಖಾತೆಯಿಂದ ಟ್ಟೀಟ್ ಮಾಡಿತು.

    2. ಈ ಚಿತ್ರ ದರ್ಶನ್‌ರ 51 ನೇ ಚಿತ್ರವಾದರೂ, 50 ನೇ ಚಿತ್ರವಾಗಿ ತೆರೆಕಾಣುತ್ತಿದೆ.

    3. ಯಜಮಾನ ಚಿತ್ರದ ಮೊದಲ ಹಾಡು `ಶಿವನಂದಿ' ಸಂಕ್ರಾತಿ ಪ್ರಯುಕ್ತ ಜನೇವರಿ 15 ರಂದು ಬಿಡುಗಡೆಯಾಯಿತು.ಈ ಹಾಡು ಯ್ಯೂಟ್ಯೂಬ್‌ನಲ್ಲಿ ಅತಿವೇಗವಾಗಿ ಒಂದು ಲಕ್ಷ,ಎರಡು ಲಕ್ಷ,ಮೂರು ಲಕ್ಷ,ನಾಲ್ಕು ಲಕ್ಷ ವೀಕ್ಷಣೆ ಪಡೆದ ಕನ್ನಡದ ಹಾಡಾಗಿ ದಾಖಲಾಗಿದೆ.ಚಿತ್ರದ ಎರಡನೇ ಹಾಡು `ಬಸಣ್ಣಿ ಬಾ' ಜನೇವರಿ 26 ರಂದು ಬಿಡುಗಡೆಯಾಯಿತು. ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯವಿದೆ. ದರ್ಶನ್‌ಗಾಗಿ  ಯೋಗರಾಜ್ ಭಟ್ ಬರೆದ ಎಲ್ಲ ಹಾಡುಗಳು ಕೇಳುಗರ ಮೆಚ್ಚುಗೆ ಪಡೆದಿವೆ. ಪ್ರಿನ್ಸ್ ಚಿತ್ರದಲ್ಲಿ ಮೊದಲಬಾರಿ ಯೋಗರಾಜ್ ಭಟ್ ದರ್ಶನಗಾಗಿ `ಈ ಸಂಜೆ' ಹಾಡನ್ನು ಬರೆದಿದ್ದರು.

    4. ಯಜಮಾನ ಚಿತ್ರದ ಟೈಟಲ್ ಹಾಡು ಫೆಬ್ರವರಿ 5 ರಂದು ಬಿಡುಗಡೆಯಾಯಿತು.ಈ ಹಾಡನ್ನು ಖ್ಯಾತ ನಿರ್ದೇಶಕ ಸಂತೋಷ್ ಆನಂದರಾಮ್ ಬರೆದಿದ್ದಾರೆ. ಸಂತೋಷ್ ಈ ಮೊದಲು 2012 ರಲ್ಲಿ ತೆರೆಕಂಡ ದರ್ಶನ್‌ರ `ಚಿಂಗಾರಿ' ಚಿತ್ರಕ್ಕೆ ಸಹ ಬರಹಗಾರರಾಗಿ ಡೈಲಾಗ್ಸ್ ಬರೆದಿದ್ದರು.

    5. ಯಜಮಾನ ಚಿತ್ರಕ್ಕೆ ಪೊನ್ ಕುಮಾರನ್ ಮೂಲತಃ ನಿರ್ದೇಶಕರಾಗಿದ್ದರೂ ಚಿತ್ರದ ಬಹುತೇಕ ಭಾಗವನ್ನು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಚಿತ್ರಿಸಿದ್ದಾರೆ. ದರ್ಶನ್ ಮತ್ತು ಹರಿಕೃಷ್ಣರ 12 ವರ್ಷಗಳ ಸ್ನೇಹದ ಫಲವಾಗಿ ದರ್ಶನ್‌ರ ಇಮೇಜಿಗೆ ಸರಿಹೊಂದುವ ಕೆಲವು ದೃಶ್ಯಗಳನ್ನು ಹರಿಕೃಷ್ಣ ವಿಶೇಷ ಕಾಳಜಿಯಿಂದ ಚಿತ್ರಿಸಿದ್ದಾರೆ. ಹರಿಕೃಷ್ಣ ತಮ್ಮ ಮ್ಯೂಸಿಕ್ ಕಂಪನಿ ಹೆಸರನ್ನು ದರ್ಶನ್ ಗೌರವಾರ್ಥ `ಡಿ- ಬೀಟ್ಸ್' ಎಂದು ಹೆಸರಿಟ್ಟಿರುವುದನ್ನು ಸ್ಮರಿಸಬಹುದು.

    6. ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿರುವ ತಾನ್ಯಾ ಹೋಪ್ ಲಂಡನ್ನಿನಲ್ಲಿ ಅಂತರಾಷ್ಟ್ರೀಯ ಸಂಬಂಧಗಳ ಮೇಲೆ ಪದವಿ ಮುಗಿಸಿರುವುದು ವಿಶೇಷ. ಚಿತ್ರ ಬಿಡುಗಡೆ ಮುನ್ನ ನೀಡುವ ಸಂದರ್ಶನಗಳಲ್ಲಿ ದರ್ಶನ್ `ತಾನ್ಯಾರ ಚಿತ್ರಗಳ ಬಗ್ಗೆ ಇರುವ ಬದ್ಧತೆಯನ್ನು ಹೊಗಳಿದ್ದು' ವಿಶೇಷ

    7. ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ನಿರ್ಮಾಣದಲ್ಲಿ ಇನ್ನೊಂದು ಚಿತ್ರದಲ್ಲಿ ನಟಿಸುವುದಾಗಿ ದರ್ಶನ್ ಧೃಡಪಡಿಸಿದ್ದಾರೆ.

    8. ಆಂದ್ರಪ್ರದೇಶದಲ್ಲಿ ಕನ್ನಡ ಚಿತ್ರಗಳು ಕೇವಲ ಹೈದರಾಬಾದಿನ ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರ ತೆರೆಕಾಣುತ್ತವೆ. ಆದರೆ ಇದೇ ಮೊದಲ ಬಾರಿಗೆ ಯಜಮಾನ ಚಿತ್ರ ಆಂಧ್ರದ ಬೇರೆ ಜಿಲ್ಲೆಯಾದ ಅನಂತಪುರದಲ್ಲಿ ಮೊದಲ ದಿನವೇ ಪ್ರದರ್ಶನ ಕಾಣಿಲಿದೆ.

    9. ಈ ಚಿತ್ರದಲ್ಲಿ ತಮಿಳುನಾಡಿನ ಜಲ್ಲಿಕಟ್ಟುವಿನಲ್ಲಿ ಪಾಲ್ಗೊಗಳ್ಳುವ ಹತ್ತು ಗೂಳಿಗಳನ್ನು ಬಳಸಲಾಗಿದೆ. ಇವುಗಳನ್ನು ದಿಂಡಿಗಲ್‌ನಿಂದ ಸಾಗಾಣಿಕೆ ಮಾಡಿ ಚಿತ್ರೀಕರಣ ಮಾಡಲು ಚಿತ್ರತಂಡ ಹರಸಾಹಸ ಪಟ್ಟಿತ್ತು, RTO ಮತ್ತು ಪ್ರಾಣಿ ದಯಾಸಂಘಗಳ ಪರವಾನಗಿ ಪಡೆದು ಐದು ವಾಹನಗಳಲ್ಲಿ 30 ಜನರೊಂದಿಗೆ ಸಾಗಿಸಲಾಯಿತು. ಒದೊಂದು ಗೂಳಿಗೆ ಒಂದು ದಿನಕ್ಕೆ ಹತ್ತು ಸಾವಿರ ರೂಪಾಯಿ ಬಾಡಿಗೆ ಕಟ್ಟಲಾಯಿತು.

     

    10. ಈ ಚಿತ್ರದಲ್ಲಿ ದರ್ಶನ್‌ರ ಫಾರ್ಮ್ ಹೌಸ್‌ನಲ್ಲಿರುವ `ಭೀಮ' ಎಂಬ ಹಸವನ್ನು ಕೂಡ ಬಳಸಿಕೊಳ್ಳಲಾಗಿದೆ.

    **Note:Hey! Would you like to share the story of the movie ಯಜಮಾನ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X