twitter
    Kannada»Movies»Dear Comrade»Critics Review

    ವಿಮರ್ಶಕರ ವಿಮರ್ಶೆ

    • ನಮ್ಮ ಮನೆಯಲ್ಲಿನ ಹೆಣ್ಣುಮಕ್ಕಳು, ನಾವು ಪ್ರೀತಿಸುವ ಹುಡುಗಿ, ನಮ್ಮ ಸ್ನೇಹಿತೆ ಹೀಗೆ ಪ್ರತಿ ಮಹಿಳೆಯ ದುಃಖದ ವಿರುದ್ಧ ಹೋರಾಟ ಮಾಡಬೇಕು. ಅವನೇ ಕಾಮ್ರೇಡ್. ಈ ವಿಷಯಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾವೇ 'ಡಿಯರ್ ಕಾಮ್ರೇಡ್'. ಬಾಬಿ ಹಾಗೂ ಲಿಲ್ಲಿ ಇಬ್ಬರ ಭಾವನಾತ್ಮಕ ಪ್ರೇಮ ಕಥೆಯೇ ಈ ಸಿನಿಮಾ.
      ಇಡೀ ಸಿನಿಮಾ ಚೆನ್ನಾಗಿದೆ. ಆದರೆ, ಸಿನಿಮಾದ ಅವಧಿ ಚಿತ್ರದ ಮೈನಸ್ ಪಾಯಿಂಟ್ ಗಳಲ್ಲಿ ಒಂದು. ಸಿನಿಮಾದ ಅವಧಿ ಹೆಚ್ಚು ಇರುವ ಕಾರಣ ಕೆಲವು ದೃಶ್ಯಗಳು ಬೋರ್ ಆಗಲು ಶುರು ಆಗುತ್ತದೆ. ಸೆಂಟಿಮೆಂಟ್ ದೃಶ್ಯಗಳು ತುಂಬನೇ ಹೆಚ್ಚಿದೆ. ವಿಜಯ್ ದೇವರಕೊಂಡಗೆ ಡಬ್ ನೀಡಿದ ಧ್ವನಿ ಇಷ್ಟ ಆಗುವುದಿಲ್ಲ. ಈ ರೀತಿ ಕೆಲವೊಂದು ತಪ್ಪುಗಳನ್ನು ಬಿಟ್ಟು ನೋಡಿದರೆ, ಸಿನಿಮಾ ಸೂಪರ್ ಎನ್ನಬಹುದು.
      'ಡಿಯರ್ ಕಾಮ್ರೇಡ್' ಒಂದು ಎಮೋಷನಲ್ ಲವ್ ಸ್ಟೋರಿ. ಒಂದು ಒಳ್ಳೆಯ ಪ್ರೇಮಕಥೆಯ ಜೊತೆಗೆ, ಒಂದು ಒಳ್ಳೆಯ ಸಂದೇಶ ಹೇಳಿದ್ದಾರೆ. ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳದೆ ಸಿನಿಮಾ ನೋಡಿದರೆ, ಇಷ್ಟ ಆಗುತ್ತದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅಭಿಮಾನಿಗಳು ಸಿನಿಮಾನಾ ಮಿಸ್ ಮಾಡಿಕೊಳ್ಳಬೇಡಿ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X