twitter
    Kannada»Movies»I Love You»Critics Review

    ವಿಮರ್ಶಕರ ವಿಮರ್ಶೆ

    • ''ಲವರ್ ಗಿಂತ ಹೆಂಡತಿ ಮುಖ್ಯ.. ನಾವು ಪ್ರೀತಿಸೋ ಲವರ್ ಗೆ ಐ ಲವ್ ಯೂ ಹೇಳುವ ಬದಲು, ನಮ್ಮನ್ನು ಪ್ರೀತಿಸೋ ಹೆಂಡತಿಗೆ ಐ ಲವ್ ಯೂ ಹೇಳಬೇಕು'' ಇದು ಐ ಲವ್ ಯೂ ಸಿನಿಮಾದಲ್ಲಿ ಸಿಗುವ ಸಂದೇಶ. ಈ ಸಂದೇಶವೆನೋ ಉತ್ತಮವಾಗಿದೆ. ಆದರೆ, ಈ ಒಂದು ಮೇಸೆಜ್ ಕೇಳಲು 2 ಗಂಟೆ 2 ನಿಮಿಷ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಕಷ್ಟಪಟ್ಟ ಕೂರಬೇಕು.ಎ + ಉಪೇಂದ್ರ = ಐ ಲವ್ ಯೂ ಎಂದು' ಪೋಸ್ಟರ್ ನಲ್ಲಿ ನಿರ್ದೇಶಕ ಚಂದ್ರು ಹಾಕಿದ್ದರು. ಅದೇ ರೀತಿಯೇ ಸಿನಿಮಾ 'ಎ' ಮತ್ತು 'ಉಪೇಂದ್ರ' ಸಿನಿಮಾಗಳ ಮಿಶ್ರಣ. ಸಿನಿಮಾ ನೋಡುತ್ತಿದ್ದರೆ, ಉಪೇಂದ್ರ ಅವರ ಹಿಂದಿನ ಸಿನಿಮಾಗಳು ಬಂದು ಹೋಗುತ್ತದೆ. ಉಪ್ಪಿಯ ಹಳೆಯ ಚಿತ್ರಗಳ ಕಥೆಯನ್ನು ಮಿಕ್ಸ್ ಮಾಡಿ, ಅವರಿಗೇ ಕಥೆ ಹೇಳಿ, ಸಿನಿಮಾ ಮಾಡುವುದರಲ್ಲಿ ಚಂದ್ರು ಯಶಸ್ವಿಯಾಗಿದ್ದಾರೆ.

      'ಐ ಲವ್ ಯೂ' ಸಿನಿಮಾ ನೋಡಿ ಬಂದ ಮೇಲೆ ' ಇದು ಯಾವ ಕಾಲದ ಸಿನಿಮಾ..' ಎನ್ನುವ ಅನುಮಾನ ಬರುತ್ತದೆ. ಉಪೇಂದ್ರ ಅವರ ಹಿಂದಿನ ಸಿನಿಮಾಗಳ ಮಿಶ್ರಣ, ಹಳೆ ಶೈಲಿಯ ಫೈಟ್, ಮೋಸ ಮಾಡುವ ಹುಡುಗಿ, ಲವ್ ಗಿಂತ ಲೈಫ್ ಹೆಚ್ಚು ಎನ್ನುವ ಹುಡುಗ.. ಇದೆಲ್ಲ ಎಲ್ಲರೂ ಒಂದಲ್ಲ ಒಂದು ಸಿನಿಮಾದಲ್ಲಿ ನೋಡಿಕೊಂಡು ಬಂದಿದ್ದೇವೆ. ಸೋ, ಮತ್ತೆ ಇಲ್ಲಿ ಯಾಕೆ ನೋಡಬೇಕು ಹೇಳಿ. ಒಂದು ಸಾಲಿನಲ್ಲಿ ಹೇಳಬೇಕು ಅಂದರೆ ''ಸಿನಿಮಾದ ವಿಶೇಷ.. ಒಂದೇ ಒಂದು ಸಂದೇಶ''.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X