ಕಬ್ಜ ಕಥೆ

    ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬರಲಿರುವ ಕಬ್ಜ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಲಿದ್ದಾರೆ. ಚಿತ್ರವನ್ನು ಕನ್ನಡ ಮಾತ್ರವಲ್ಲದೇ ತೆಲಗು,ತಮಿಳು, ಮಲಯಾಳಂ,ಮರಾಠಿ, ಬಂಗಾಲಿ ಮತ್ತು ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.ಲಾಂಗ್ ಹಿಡಿಯಲಿರುವ ರಿಯಲ್ ಸ್ಟಾರ್. ಚಿತ್ರದಲ್ಲಿ ಉಪೇಂದ್ರ ಲಾಂಗ್ ಹಿಡಿದು ಮತ್ತೊಂದು ಭೂಗತ ಲೋಕದ ಕಥೆಯನ್ನು ಅನಾವರಣ ಮಾಡುವ ನಿರೀಕ್ಷೆಯಿದೆ.

    ಚಿತ್ರದ ಮೊದಲ ಹಂತದ ಶೂಟಿಂಗ್ ನಲವತ್ತು ದಿನಗಳ ಕಾಲ ಜರುಗಿತು. ಈ ಭಾಗದ ಚಿತ್ರೀಕರಣದಲ್ಲಿ ಕೆಜಿಎಫ್ ಖ್ಯಾತಿ (ಆ್ಂಡ್ರೂ ಪಾತ್ರಧಾರಿ) ಖಳ ಬಿ.ಎಸ್.ಅವಿನಾಶ್ ಭಾಗವಹಿಸಿದ್ದರು. ಚಿತ್ರದ ಎರಡನೇ ಭಾಗದ ಚಿತ್ರೀಕರಣಕ್ಕಾಗಿ ಹದಿನೆಂಟು ಸೆಟ್ ಗಳನ್ನು ಹಾಕಿರುವ ಚಿತ್ರತಂಡ ಬೆಂಗಳೂರು ಮತ್ತು ಸಂಡೂರುಗಳಲ್ಲಿ 35 ದಿನಗಳ ಚಿತ್ರೀಕರಣ ಮಾಡಲಿದೆ. ಈ ಭಾಗಗಳಲ್ಲಿ ನವೀನ್ (ನಿರ್ಮಾಪಕ ಮತ್ತು ಜಾಕಿ ಭಾವನಾ ಪತಿ), ಕೋಟಾ ಶ್ರೀನಿವಾಸರಾವ್, ಕಬೀರ್ ದುಹಾನ್ ಸಿಂಗ್, ಸುಬ್ಬರಾಜು ಮುಂತಾದವರು ಭಾಗವಹಿಸಲಿದ್ದಾರೆ.

    **Note:Hey! Would you like to share the story of the movie ಕಬ್ಜ with us? Please send it to us (popcorn@oneindia.co.in).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X