twitter

    ಕವಚ ಕಥೆ

    ಶಿವ ರಾಜಕುಮಾರ್  ಮತ್ತು  ಇಶಾ ಕೊಪ್ಪಿಕರ್  ಮುಖ್ಯ ತಾರಾಗಣದಲ್ಲಿರುವ ಕವಚ  ಚಿತ್ರವನ್ನು  ಜಿ ವಿ ಆರ್  ನಿರ್ದೇಶಿಸಿದ್ದಾರೆ .ಸತ್ಯನಾರಾಯಣ ಅವರು  ಬಂಡವಾಳ ಹೂಡಿದ್ದು , ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ.
     ಚಿತ್ರಕಥೆ

    ಜಯರಾಮ (ಶಿವರಾಜ್ ಕುಮಾರ್) ಒಬ್ಬ ಅಂಧ ಹುಡುಗ. ತಂಗಿ ಮದುವೆಗೆ ಹಣ ಹೊಂದಿಸಲು ಸಾಕಷ್ಟು ಕಷ್ಟ ಪಡುತ್ತಿರುತ್ತಾನೆ. ಬೆಂಗಳೂರಿನ ಅಪಾರ್ಟ್ ಮೆಂಟಿನಲ್ಲಿ ಕೆಲಸ ಮಾಡುವ ಜಯರಾಮ ಅದೇ ಅಪಾರ್ಟ್ ಮೆಂಟಿನ ಒಬ್ಬ ಜಡ್ಜ್ ಪ್ರಾಣಕ್ಕೆ ಆಪತ್ತು ಬಂದಾಗ ಕಾಪಾಡಲು ಮುಂದಾಗುತ್ತಾನೆ. ಜಡ್ಜ್ ಮಗಳಿಗೆ 'ಕವಚ' ರೀತಿ ಇರುತ್ತಾನೆ.

     

    ಜಯರಾಮ ಅಂಧನಾಗಿದ್ದರೂ ವಿಶೇಷ ಗ್ರಹಣ ಶಕ್ತಿ ಹೊಂದಿರುತ್ತಾನೆ. ವಾಸನೆ, ಶಬ್ಧದ ಮೂಲಕ ಎದುರುಗಡೆ ಇರುವ ವ್ಯಕ್ತಿಯನ್ನು ಗುರುತಿಸುತ್ತಾನೆ. ಹೀಗಿರುವಾಗ, ಜಯರಾಮ ಹೇಗೆ ಒಬ್ಬ ಸೀರಿಯಲ್ ಕಿಲ್ಲರ್ ನಿಂದ ಜಡ್ಜ್ ಮಗಳನ್ನು ಕಾಪಾಡುತ್ತಾನೆ ಎನ್ನುವುದೇ ಚಿತ್ರದ ಕಥೆ.ಚಿತ್ರಕ್ಕೆ ಅನಂತನಾಗ್ ಹಿನ್ನಲೆ ಧ್ವನಿ ನೀಡಿದ್ದಾರೆ. ಚಿತ್ರದ ಪ್ರಮುಖ ಅಂಶಗಳನ್ನು ಮತ್ತು ಕ್ಲೈಮಾಕ್ಸ್ ನ್ನು ಅನಂತ್ ಧ್ವನಿಯಲ್ಲಿ ಕೇಳಬಹುದು.

    ಈ ಚಿತ್ರವು ಮಲಯಾಳಂ ಸೂಪರ್ ಹಿಟ್  ಚಿತ್ರ `ಒಪ್ಪಂ' ದ ಅಧಿಕೃತ ರೀಮೇಕ್ ಆಗಿದೆ.ಮೂಲ ಚಿತ್ರದಲ್ಲಿ ಮೋಹನಲಾಲ್ ನಟಿಸಿದ್ದಾರೆ.  

    MOVIE TRIVIA 
    1. ಶಿವರಾಜ್ ಕುಮಾರ್ ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಅಂಧನ ಪಾತ್ರ ಮಾಡುತ್ತಿದ್ದಾರೆ.ಶಿವರಾಜ್ ಕುಮಾರ್ 14 ವರ್ಷದ ಬಳಿಕ ರಿಮೇಕ್ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ.
     
    2. ಚಿತ್ರದ ಟೀಸರ್ ನ್ನು ಬೆಂಗಳೂರಿನ ಜಿ ಪಿ ನಗರದ ರಮಣ ಮಹರ್ಷಿ ಅಂಧ ಶಾಲೆಯಲ್ಲಿ ಅನಾವರಣ ಮಾಡಲಾಗಿದೆ. ಶಿವಣ್ಣ ತಮ್ಮ ಶಾಲೆಗೆ ಬಂದಿದ್ದು, ಅಲ್ಲಿನ ಅಂಧ ಮಕ್ಕಳಿಗೆ ಬಹಳ ಖುಷಿ ನೀಡಿತ್ತು. ಶಿವರಾಜ್ ಕುಮಾರ್ ಅವರಿಗೆ ಅವರ ನಟನೆಯ 'ವಜ್ರಕಾಯ' ಸಿನಿಮಾದ 'ಉಸಿರೇ ಉಸಿರೇ...' ಹಾಡು ಹಾಡುವ ಮೂಲಕ ಶುಭಾಶಯ ತಿಳಿಸಿದರು. ಮಕ್ಕಳ ಹಾಡು ಶಿವಣ್ಣನಿಗೆ ಸಂತೋಷ ನೀಡಿತು.

     
    3. ಕವಚ ಚಿತ್ರದ ಆಡಿಯೋ ಹಕ್ಕುಗಳನ್ನು ಜೀ ಮ್ಯೂಸಿಕ್ ಕಂಪನಿ 43 ಲಕ್ಷಕ್ಕೆ ಪಡೆದಿದೆ.
     
    4. ಚಿತ್ರದ `ರೆಕ್ಕೆಯ ಕುದುರೆ ಏರಿ' ಗೀತೆಯನ್ನು 2019, ಮಾರ್ಚ್ 15 ರಂದು ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು.
     
    **Note:Hey! Would you like to share the story of the movie ಕವಚ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X