twitter
    Kannada»Movies»KGF: Chapter 1»Movie Trivia

    ಕೆಜಿಎಫ್ ವಿಶೇಷತೆಗಳು

    1. ಚಿತ್ರದ ಮೊದಲ ಟೀಸರ್‌ನ್ನು 2018, ಜನೇವರಿ 8 ರಂದು ಯಶ್ ಜನ್ಮದಿನದ ಅಂಗವಾಗಿ ಬಿಡುಗಡೆ ಮಾಡಲಾಯಿತು.
    2.ಚಿತ್ರದ ಬಹುತೇಕ ಭಾಗ ಕೋಲಾರದ ಕೆ.ಜೆ.ಎಫ್‌ ಮತ್ತು ಮುಂಬೈನಲ್ಲಿ ಚಿತ್ರೀಕರಣಗೊಂಡಿದ್ದರೂ,ಕೆಲ ಭಾಗವನ್ನು ಬೆಂಗಳೂರು,ಮೈಸೂರು,ಕೊಲ್ಕತ್ತಾ ಮತ್ತು ಕಾಶ್ಮೀರದ ಲಡಾಕ್ ನಲ್ಲಿ ಚಿತ್ರೀಕರಿಸಲಾಗಿದೆ.
    3.ಕೆ.ಜಿ.ಎಫ್ ಚಿತ್ರ ಸುಮಾರು 50% ಚಿತ್ರೀಕರಣವಾದಾಗ ಅಂದರೆ 2017, ಜೂನ್ ತಿಂಗಳಿನಲ್ಲಿ ಭಯಂಕರ ಬಿರುಗಾಳಿ- ಮಳೆಗೆ ದುಬಾರಿ ವೆಚ್ಚದ ಚಿತ್ರೀಕರಣದ ಸೆಟ್ ಹಾಳಾಯಿತು. ಮತ್ತೇ ಕೆಲ ದಿನಗಳ ನಂತರ ಸೆಟ್ ರೆಡಿ ಮಾಡಲಾಯಿತು.
    4.ಚಿತ್ರದ ಟ್ರೈಲರ್‌ನ್ನು ನವೆಂಬರ್ 9,2018ರಂದು ಆದ್ಧೂರಿ ಸಮಾರಂಭದ ಮೂಲಕ ಕನ್ನಡ,ತೆಲುಗು,ತಮಿಳು,ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲಾಯಿತು. 
    5.ಕೆ.ಜಿ.ಎಫ್ ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬಂದಿತು. ಡಿಸೆಂಬರ್ 21 2018 ರಂದು ಮೊದಲನೇ ಭಾಗ ಅಂದರೆ ಕೆ.ಜಿ.ಎಫ್ chapter 1 ರೀಲಿಸ್ ಆಯಿತು, ಎರಡನೇ ಭಾಗ 2020 ರಲ್ಲಿ ರೀಲಿಸ್ ಆಗಲಿದೆ.
    6.80 ಕೋಟಿಗೂ ಹೆಚ್ಚು ವೆಚ್ಚದಲ್ಲಿ ತಯಾರಾದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಕೆ.ಜಿ.ಎಫ್ ಪಾತ್ರವಾಗಿದೆ.
    7.ಈ ಚಿತ್ರಕ್ಕಾಗಿ ಸುಮಾರು 600 ಜನ ಸಿಬ್ಬಂದಿ ಮೂರು ವರ್ಷಗಳಿಗೂ ಹೆಚ್ಚು ಕೆಲಸ ಮಾಡಿದ್ದಾರೆ.
    8.ಯಶ್‌ಗೆ ಇದು 20th ನೇ ಚಿತ್ರ, ನಾಯಕಿ ಶ್ರೀನಿಧಿಗೆ ಮೊದಲನೇ ಚಿತ್ರ. ನಿರ್ದೇಶಕ ಪ್ರಶಾಂತ್ ನೀಲ್‌ಗೆ ಎರಡನೇ ಚಿತ್ರ. ಅದ್ಧೂರಿ ಚಿತ್ರಗಳ ನಿರ್ಮಾಣದಲ್ಲಿ ಹೆಸರು ವಾಸಿಯಾಗಿರುವ ಹೊಂಬಾಳೆ ಫಿಲಂಸ್‌ಗೆ ಇದು ನಾಲ್ಕನೇ ಚಿತ್ರ. ಇದಕ್ಕೂ ಮೊದಲು `ನಿನ್ನಿಂದಲೇ',`ಮಾಸ್ಟರ್ ಪೀಸ್',`ರಾಜಕುಮಾರ' ಚಿತ್ರಗಳನ್ನು ನಿರ್ಮಿಸಿತ್ತು.
    9.ಕೆ.ಜಿ.ಎಫ್ ಸುಮಾರು 2000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಚಿತ್ರ. ಚಿತ್ರ ಬಿಡುಗಡೆ ಮುನ್ನಾ ದಿನವೇ ಡಿಸೆಂಬರ್ 20 ರಂದು ಅಮೇರಿಕಾದ 60 ಚಿತ್ರಮಂದಿರಗಳಲ್ಲಿ ಪ್ರೀಮಿಯರ್ ಶೋ ನೆಡೆಯಿತು.
    10.ಬಲ್ಲಮೂಲಗಳ ಪ್ರಕಾರ ಕೆ.ಜಿ.ಎಫ್‌ದ ಆಡಿಯೋ ಹಕ್ಕು ಅಂದಾಜು 3.2 ಕೋಟಿಗೆ ಲಹರಿ ಮ್ಯೂಸಿಕ್ ಸಂಸ್ಥೆಯ ಪಾಲಾಗಿದೆ.
    11. 2018 ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಆರ್.ಆರ್.ಆರ್ ಸಿನಿಮಾದ ಕಥೆಯ ಚರ್ಚೆಗಾಗಿ ರಾಜಮೌಳಿ ಬೆಂಗಳೂರಿಗೆ ಬಂದಿದ್ದರು. ಆ ವೇಳೆ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಅದೇ ಹೋಟೆಲ್ ನಲ್ಲಿ ಯಶ್ ಕೂಡ ಇದ್ದರು. ರಾಜಮೌಳಿ ತಂಗಿದ್ದ ವಿಷ್ಯ ತಿಳಿದ ಯಶ್ ಮತ್ತು ಕೆಜಿಎಫ್ ಚಿತ್ರತಂಡ, ರಾಜಮೌಳಿಯನ್ನ ಭೇಟಿ ಮಾಡಿ ಎರಡು ನಿಮಿಷ ಕಾಲಾವಕಾಶ ಕೇಳಿದ್ರಂತೆ. ನಂತರ ಕೆಜಿಎಫ್ ಸಿನಿಮಾ ವಿಶ್ಯೂಲ್ಸ್ ತೋರಿಸಿದರಂತೆ.
    ಕೆಜಿಎಫ್ ಸಿನಿಮಾದ ಮೂರು ನಿಮಿಷದ ಮೇಕಿಂಗ್ ವಿಡಿಯೋ ರಾಜಮೌಳಿ ನೋಡಿದ್ರಂತೆ. ಈ ಮೇಕಿಂಗ್ ನೋಡಿ ಒಂದು ಕ್ಷಣ ರಾಜಮೌಳಿ ಅಚ್ಚರಿಯಾದರಂತೆ. ಯಾಕಂದ್ರೆ, ವಿಶ್ಯೂಲ್ಸ್ ಅಷ್ಟು ಫ್ರೆಶ್ ಆಗಿತ್ತು. ಒರಿಜಿನಾಲಿಟಿ, ಕ್ವಾಲಿಟಿ ಅಷ್ಟು ರೋಚಕವಾಗಿತ್ತು. ಈ ಸಿನಿಮಾ ಹಿಂದೆ ಮೂರು ವರ್ಷದ ಎಫರ್ಟ್ ಇದೆ ಎಂದು ತಿಳಿದಾಗ ತುಂಬಾ ಖುಷಿ ಪಟ್ಟರಂತೆ. ನಂತರ ನಿರ್ದೇಶಕರು ಇದನ್ನ ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕೆಂದುಕೊಂಡಿದ್ದೀವಿ ಎಂದು ಹೇಳಿದ್ರಂತೆ. ಆಗ ರಾಜಮೌಳಿ ಈ ಸಿನಿಮಾವನ್ನ ದೇಶದಾದ್ಯಂತ ತೆಗೆದುಕೊಂಡು ಹೋಲು ಸಾಧ್ಯಾನಾ ಅಂತ ಯೋಚನೆ ಮಾಡಿದ್ರಂತೆ.
    'ಕೆಜಿಎಫ್' ದೃಶ್ಯ ನೋಡಿ ಇದು ಇಡೀ ಇಂಡಿಯಾದ ಸಿನಿಮಾ ಆಗುತ್ತೆ ಎಂದು ನಿರ್ಧರಿಸಿದ ರಾಜಮೌಳಿ ಬಾಲಿವುಡ್ ನ ಖ್ಯಾತ ನಿರ್ಮಾಪಕ ಅನಿಲ್ ತಡಾನಿ ಗೆ ಹಾಗೂ ಟಾಲಿವುಡ್ ನಿರ್ಮಾಪಕ ಸಾಯಿ ಮತ್ತು ಶೋಬು ಅವರಿಗೆ ಪೋನ್ ಮಾಡಿ ಕನ್ನಡದಲ್ಲಿ ಕೆಜಿಎಫ್ ಅಂತ ಒಂದು ಸಿನಿಮಾ ಇದೆ. ಒಮ್ಮೆ ನೋಡಿ, ಇದನ್ನ ಏನಾದರೂ ಮಾಡಬಹುದಾ ಎಂದು ಮನವಿ ಮಾಡಿದ್ದರಂತೆ. ಅದರ ಪರಿಣಾಮ ಕೆಜಿಎಫ್ ಸಿನಿಮಾ ಇಡಿ ಇಂಡಿಯಾ ಚಿತ್ರವಾಗಿ ಆಗಿ ನಿಂತಿದೆ.

    12. 1970 ರಲ್ಲಿ ತೆರೆಕಂಡ ಡಾ.ರಾಜ್ ಕುಮಾರ್ ಅಭಿನಯದ ಸೂಪರ್ ಡ್ಯೂಪರ್ ಹಿಟ್ 'ಪರೋಪಕಾರಿ' ಚಿತ್ರದ 'ಜೋಕೆ ನಾನು ಬಳ್ಳಿಯ ಮಿಂಚು...' ಹಾಡನ್ನ 'ಕೆ.ಜಿ.ಎಫ್' ಸಿನಿಮಾದಲ್ಲಿ ಬಳಸಲಾಗಿತ್ತು. ಈ ಹಾಡಿಗೆ ತಮನ್ನಾ ಹೆಜ್ಜೆ ಹಾಕಿದ್ದರು. ಐದು ಭಾಷೆಯಲ್ಲಿ ಈ ಸಿನಿಮಾ ಬರ್ತಿದ್ದ ಕಾರಣ ಬಹುಶಃ ಅದೇ ಹಾಡನ್ನ ಉಳಿಸಿಕೊಂಡಿದ್ದರು.ಆದರೆ ಹಿಂದಿ ವಿತರಕರು ಅಲ್ಲಿಯ ನೇಟಿವಿಟಿಗೆ ತಕ್ಕಂತೆ ಹೊಸ ಹಾಡನ್ನು ಹೊಸ ನಟಿಯೊಂದಿಗೆ ಶೂಟ್ ಮಾಡಲು ನಿರ್ಧರಿಸಿ, 1989ರಲ್ಲಿ ತೆರೆಕಂಡಿದ್ದ ತ್ರಿದೇವ್ ಚಿತ್ರದ 'ಗಲಿ ಗಲಿ ಮೇ...' ಹಾಡನ್ನ ರಿ-ಕ್ರಿಯೇಟ್ ಮಾಡಿದರು.ಅಲ್ಲಿ ತಮನ್ನಾ ಬದಲು ಬಾಲಿವುಡ್ ಖ್ಯಾತ ನಟಿ ಮೌನಿ ರಾಯ್ ಹೆಜ್ಜೆ ಹಾಕಿದರು.ಡಿಸೆಂಬರ್ 7 ಮತ್ತು 8 ಎರಡು ದಿನಗಳ ಕಾಲ ಮುಂಬೈನಲ್ಲಿ ಹಾಡನ್ನು ಶೂಟ್ ಮಾಡಲಾಯಿತು.

    13.ಕೆಜಿಎಫ್ ಚಿತ್ರದ ಡಿಜಿಟಲ್ ಹಕ್ಕನ್ನು ಅಮೇಜಾನ್ ಪ್ರೈಮ್ ಖರೀದಿಸಿದ್ದು ಕನ್ನಡ,ತಮಿಳು,ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸೇರಿ ಸುಮಾರು 18 ಕೋಟಿಗೆ ಖರೀದಿಸಿದೆ. ಚಿತ್ರವನ್ನು ಪ್ರೈಮ್ ವಿಡಿಯೋದಲ್ಲಿ ಫೆಬ್ರವರಿ 5,2019 ರಂದು ಪ್ರಸಾರ ಮಾಡಲಾಯಿತು. 
    14.ಬಿಡುಗಡೆಯಾದ ಐದು ದಿನಗಳಲ್ಲಿಯೇ ನೂರು ಕೋಟಿ ಗಳಿಸಿದ ಕೆಜಿಎಫ್ ,ಕನ್ನಡದ ಮೊದಲ ನೂರು ಕೋಟಿ ಮತ್ತು ಇನ್ನೂರು ಕೋಟಿ ಗಳಿಕೆ ಕಂಡ ಸಿನಿಮಾ ಎಂಬ ದಾಖಲೆ ಬರೆಯಿತು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X