Kannada»Movies»Ondalla Eradalla»Critics Review

  ವಿಮರ್ಶಕರ ವಿಮರ್ಶೆ

  • ಸೈದ್ಧಾಂತಿಕ ನೆಲೆಗಟ್ಟಿನಲ್ಲಿ, ಜಾತಿ-ಧರ್ಮದ ಹೆಸರಿನಲ್ಲಿ ದಿನನಿತ್ಯ ಬಡಿದಾಡಿಕೊಳ್ಳುವವರು ತಪ್ಪದೇ ನೋಡಲೇಬೇಕಾದ ಸಿನಿಮಾ ಇದು. ಯಾಕಂದ್ರೆ, ಜಾತಿ-ಧರ್ಮಗಳಿಗೂ ಮೀರಿದ ಮಾನವೀಯತೆ, ಸಹಬಾಳ್ವೆಯ ಪಾಠವನ್ನ 'ಒಂದಲ್ಲಾ ಎರಡಲ್ಲಾ' ಚಿತ್ರ ಕಲಿಸುತ್ತದೆ. ಪ್ರಸ್ತುತ ಸಮಾಜಕ್ಕೆ ಇಂತಹ ಒಂದು ಸಿನಿಮಾ ಬೇಕಿತ್ತು. ಸ್ವಾರ್ಥ, ದುರಾಸೆಗಿಂತ ಪರರ ನೋವಿಗೆ ಸ್ಪಂದಿಸುವ ಗುಣ ಮನುಷ್ಯನಲ್ಲಿ ಅತ್ಯಗತ್ಯ ಎಂಬುದನ್ನ ಸಾಂಕೇತಿಕವಾಗಿ ನಿರ್ದೇಶಕ ಡಿ.ಸತ್ಯಪ್ರಕಾಶ್ ತೆರೆಮೇಲೆ ತಂದಿರುವ ರೀತಿಯೇ ಅದ್ಭುತ. 'ಒಂದಲ್ಲಾ ಎರಡಲ್ಲಾ' ಚಿತ್ರದಲ್ಲಿ ಮನರಂಜನೆ ಜೊತೆಗೆ ಭಾವುಕತೆ ಹಾಸು ಹೊಕ್ಕಾಗಿದೆ. ಪ್ರಾಣಿ ಪ್ರಿಯರ ಮನ ಗೆಲ್ಲುವ ಈ ಸಿನಿಮಾಗೆ ಕ್ಲಾಸ್ ಹಾಗೂ ಮಾಸ್ ಪ್ರೇಕ್ಷಕರನ್ನು ಸೆಳೆಯುವ ಶಕ್ತಿ ಇದೆ. ಇಡೀ ಕುಟುಂಬ ಕೂತು 'ಒಂದಲ್ಲಾ ಎರಡಲ್ಲಾ' ಎಷ್ಟು ಬಾರಿ ಬೇಕಾದರೂ ನೋಡಬಹುದಾದ ಚಿತ್ರ ಇದು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X