twitter

    ತಿಥಿ ಕಥೆ


    "ತಿಥಿ" ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ  ಹೊಸ ಮುಖಗಳು ಅನಾವರಣಗೊಂಡಿವೆ.  ಇನ್ನು ಈ ಚಿತ್ರಕ್ಕೆ ಪಿ ವಾಸು ಅವರು ಅಕ್ಷನ್ ಕಟ್ ಹೇಳಿದ್ದಾರೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ  ಸುರೇಶ ನಿರ್ಮಾಣದಲ್ಲಿ ತಿಥಿ ಸಿನಿಮಾ ಮೂಡಿಬಂದಿದೆ.

    ಚಿತ್ರದ ಕಥೆ :

    ಯಂಗ್ ಡೈರೆಕ್ಟರ್ ರಾಮ್ ರೆಡ್ಡಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 'ತಿಥಿ' ಸಿನಿಮಾದಲ್ಲಿ ಸೆಂಚುರಿ ಗೌಡನ ಸಾವಿಗೆ ಮನೆಯವರು ಸೇರಿದಂತೆ ಊರಿನವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕೊಂಚ ಹಾಸ್ಯ ಮಿಶ್ರಿತವಾಗಿ ಹೆಣೆದು ಸಿನಿಮಾ ಮಾಡಲಾಗಿದೆ. ಒಂದು ಸಾವಿನ ಸುತ್ತ ನಡೆಯುವ ಚಿತ್ರ ಇದಾಗಿದ್ದು, ಆಸ್ತಿ ಮಾರಾಟಕ್ಕೆ ಯಾವ ರೀತಿ ಎಲ್ಲಾ ಸರ್ಕಸ್‌ ಮಾಡುತ್ತಾರೆ ಅನ್ನೋದನ್ನ ತೆರೆಯ ಮೇಲೆ ಮನೋಜ್ಞವಾಗಿ ತೋರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

    ಅಂದಹಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು, ಪುನೀತ್ ಅವರು ಕೂಡ ಈ ಸಿನಿಮಾ ನೋಡಿ ನಕ್ಕು-ನಕ್ಕು ಸಖತ್ ಎಂಜಾಯ್ ಮಾಡಿದ್ದು ಮಾತ್ರವಲ್ಲದೇ, ನಿರ್ದೇಶಕರ ಪ್ರಯತ್ನವನ್ನು ಮನಸಾರೆ ಹೊಗಳಿದ್ದಾರೆ.

    ಪ್ರಶಸ್ತಿ :

    ‘ತಿಥಿ’ ಪ್ರದರ್ಶನ ಕಾಣುವ ಮೊದಲೇ  ಪ್ರತಿಷ್ಠಿತ ‘ಲೊಕಾರ್ನೊ ಅಂತರರಾಷ್ಟ್ರೀಯ ಚಿತ್ರೋತ್ಸವ’ದಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ  ಈ ಚಿತ್ರದ್ದು. ರಾಷ್ಟ್ರಪ್ರಶಸ್ತಿ ಸೇರಿದಂತೆ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಸುಮಾರು 8 ವರ್ಷಗಳ ನಂತರ ಈ ಚಿತ್ರೋತ್ಸವಕ್ಕೆ ಆಯ್ಕೆಯಾದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆ 'ತಿಥಿ' ಚಿತ್ರಕ್ಕೆ ಸಲ್ಲುತ್ತದೆ. ಮಾತ್ರವಲ್ಲದೇ ಈ ಸಿನಿಮಾದಲ್ಲಿ ಯಾವುದೇ ವೃತ್ತಿಪರ ಕಲಾವಿದರು ನಟಿಸಿಲ್ಲ ಅನ್ನೋದು ಈ ಚಿತ್ರದ ವಿಶೇಷ.
    **Note:Hey! Would you like to share the story of the movie ತಿಥಿ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X