»   » ರಿಯಾಲಿಟಿ ಶೋಗಳಿಗೆ ಜೋತುಬಿದ್ದ ಗುರುಕಿರಣ್

ರಿಯಾಲಿಟಿ ಶೋಗಳಿಗೆ ಜೋತುಬಿದ್ದ ಗುರುಕಿರಣ್

Subscribe to Filmibeat Kannada
Gurukiran wants to do more reality shows
ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಗುರುಕಿರಣ್ ದೂರದರ್ಶನದಲ್ಲಿ ಮತ್ತಷ್ಟು ರಿಯಾಲಿಟ್ ಶೋಗಳನ್ನು ನಿರ್ವಹಿಸಲು ಮುಂದಾಗಿದ್ದಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಾನ್ಫಿಡೆಂಟ್ ಸಿಂಗರ್' ಕಾರ್ಯಕ್ರಮ ತಮ್ಮ್ಮನ್ನು ಬಹಳಷ್ಟು ಉತ್ತೇಜಿಸಿದೆ ಎನ್ನ್ನುತ್ತಾರೆ ಗುರುಕಿರಣ್.

''ಆ ಕಾರ್ಯಕ್ರಮ ನನ್ನನ್ನು ಅಷ್ಟು ಜನಪ್ರಿಯಗೊಳಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಕಾನ್ಫಿಡೆಂಟ್ ಸಿಂಗರ್ ಕಾರ್ಯಕ್ರಮ ದೊಡ್ಡಮಟ್ಟದಲ್ಲಿ ಯಶಸ್ವಿಯಾಗಿದೆ. ಟಿಆರ್ ಪಿ ರೇಟಿಂಗ್ ನಲ್ಲೂ ಮುಂದಿದೆ. ಈ ಕಾರ್ಯಕ್ರಮ ಮತ್ತಷ್ಟು ಕಾರ್ಯಕ್ರಮಗಳಿಗೆ ಪ್ರೇರಣೆಯಾಗಿದೆ ''ಎಂದು ಗುರುಕಿರಣ್ ಅಶಾಭಾವ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಗುರುಕಿರಣ್ ಅವರು ಸುವರ್ಣ ವಾಹಿನಿಯ ಸಂಗೀತ ಮತ್ತು ಡ್ಯಾನ್ಸ್ ರಿಯಾಲಿಟಿ ಶೋನ ನಿರೂಪಕ ಮತ್ತು ತೀರ್ಪುಗಾರರಾಗಿ ಮುಂದುವರಿಯುತ್ತಿದ್ದಾರೆ.ಗುರು ಕಿರಣ ಸಂಗೀತ ನಿರ್ದೇಶನದ 'ತೀರ್ಥ' ಚಿತ್ರ ಬಿಡುಗಡೆಯಾಗಬೇಕಿದೆ. ಸಾಧುಕೋಕಿಲ ನಿರ್ದೇಶಿಸಿರುವ ತೀರ್ಥ ಚಿತ್ರದಲ್ಲಿ ಸುದೀಪ್ ಮತ್ತು ಸಲೋನಿ ಮುಖ್ಯ ಪಾತ್ರಧಾರಿಗಳು. ತಾಕತ್ತು ಮತ್ತು ಗುಲಾಮ ಚಿತ್ರಗಳಿಗೂ ಅವರು ಸಂಗೀತ ನಿರ್ದೇಶಿಸುತ್ತಿದ್ದಾರೆ.

'ನನ್ನ ಸಂಗೀತ ಸಂಯೋಜನೆ ಯಾವತ್ತು ಅಸಲಿಯಾಗಿರಬೇಕು. ನಾನು ಯಾವುದೇ ಕಾರಣಕ್ಕೂ ಟ್ಯೂನ್ ಗಳನ್ನು ಕದಿಯುವ ಕೆಲಸ ಕೈ ಹಾಕುವುದಿಲ್ಲ.ರಿಮೇಕ್ ಚಿತ್ರಗಳಲ್ಲೂ ಅಷ್ಟೆ ನನ್ನದೇ ಆದ ಅಸಲಿ ಟ್ಯೂನ್ ಇರಬೇಕು.ಒಂದು ವೇಳೆ ಕನ್ನಡೇತರಚಿತ್ರದ ಟ್ಯೂನ್ ಗಳೇ ಇರಬೇಕು ಎಂದು ನಿರ್ದೇಶಕರು ಪಟ್ಟು ಹಿಡಿದರೆ ಅದಕ್ಕೂ ನಾನು ಸಿದ್ಧ.ಆದರೆ ಆ ಒಂದು ಕ್ರೆಡಿಟ್ ನಾನು ಪಡೆಯುದಿಲ್ಲ 'ಎಂಬುದು ಗುರುಕಿರಣ್ ಸಿದ್ಧಾಂತ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada