twitter
    For Quick Alerts
    ALLOW NOTIFICATIONS  
    For Daily Alerts

    ಜಯಂತ ಕಾಯ್ಕಿಣಿ ಅಂದ್ರೆ... ಭಾಗ 2

    By *ಜಯಂತಿ
    |

    ಎಸ್‌ಎಂಎಸ್ ಸಾಹಿತಿ!
    ಜಯಂತ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ದುಬಾರಿ ಗೀತರಚನೆಕಾರ. ಗೀತೆಯೊಂದಕ್ಕೆ ಅವರು ಪಡೆಯುವ ಸಂಭಾವನೆ ಮೂವತ್ತು ಸಾವಿರ ರೂಪಾಯಿಗಳ ಆಜುಬಾಜಿನಲ್ಲಿದೆ. ಇದು ಸಂತೋಷ ಪಡುವ ವಿಚಾರವೇ. ಎರಡು ವರ್ಷಗಳ ಅವಧಿಯಲ್ಲಿ ಸುಮಾರು ಇನ್ನೂರು ಗೀತೆಗಳನ್ನು ಬರೆದ ಸವ್ಯಸಾಚಿ ಅವರು. ತಮ್ಮ ಸಿನಿಮಾಕ್ಕೆ ಕಾಯ್ಕಿಣಿ ಒಂದಾದರೂ ಹಾಡು ಬರೆದರೆ ಚೆನ್ನ ಎಂದು ನಿರ್ಮಾಪಕರು ಬಯಸುವ ಮಟ್ಟಿಗೆ ಜಯಂತ್ ಚಾರ್ಮ್ ಬೆಳೆದಿದೆ.

    ಗೀತರಚನೆಕಾರನೊಬ್ಬ ತಾರಾಪಟ್ಟ ಪಡೆಯುವುದು ಆರೋಗ್ಯಕರ ಬೆಳವಣಿಗೆಯೇ. ಆದರೆ, ವಿಪರೀತ ಅವಕಾಶಗಳನ್ನು ಒಪ್ಪಿಕೊಂಡು ಕಾಯ್ಕಿಣಿ ಶಿಸ್ತು ತಪ್ಪುತ್ತಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಈಗ ಸುಳಿದಾಡುತ್ತಿದೆ. ಸ್ಟುಡಿಯೊ ಬುಕ್ ಮಾಡಿಕೊಂಡು, ಹಾಡುಗಾರರನ್ನು ಕರೆಸಿಕೊಂಡು ಕಾಯ್ಕಿಣಿ ಅವರ ಸಾಹಿತ್ಯಕ್ಕೆ ನಿರ್ಮಾಪಕರು ಕಾದ ಉದಾಹರಣೆಗಳೂ ಇವೆಯಂತೆ. ಕಾಯ್ಕಿಣಿ ಎಸ್‌ಎಂಎಸ್‌ಗಳಲ್ಲೇ ಗೀತಸಾಹಿತ್ಯ ಒದಗಿಸುತ್ತಿದ್ದಾರೆ ಎನ್ನುವ ಮಾತುಗಳೂ ಇವೆ! ಇದು ನಿಜವಾದರೆ, ಕಾಯ್ಕಿಣಿ ಅವರ ವಿಶೇಷಣಗಳ ಪಟ್ಟಿಯಲ್ಲಿ 'ಎಸ್‌ಎಂಎಸ್ ಸಾಹಿತಿ" ಎನ್ನುವ ಪುಚ್ಚವನ್ನೂ ಹಚ್ಚಬಹುದು.

    ಮೊನ್ನೆ ಹೀಗಾಯಿತು. ಕಾಯ್ಕಿಣಿ ಅವರ ತಾಯಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ. ಇತ್ತ ನಿರ್ಮಾಪಕರೊಬ್ಬರು ಸ್ಟುಡಿಯೊ ಬುಕ್ ಮಾಡಿಕೊಂಡು, ಮೈಕ್ ಮುಂದೆ ಹಾಡುಗಾರರನ್ನು ನಿಲ್ಲಿಸಿಕೊಂಡಿದ್ದಾರೆ. ಫೋನ್ ಮಾಡಿದರೆ ಆಸ್ಪತ್ರೆ ವಾಸನೆ. ತುರ್ತಿನ ವಿಷಯ ಹೇಳಲಾಗದ ನಿರ್ಮಾಪಕರದು ಧರ್ಮಸಂಕಟ. ಕವಿಯಲ್ಲವಾ? ನಿರ್ಮಾಪಕರ ಒದ್ದಾಟ ಕಾಯ್ಕಿಣಿಗೆ ಅರ್ಥವಾಯಿತು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಅವರು ನಿಂತಲ್ಲೇ ಹಾಡು ಬರೆದುಕೊಟ್ಟರಂತೆ. ಒಮ್ಮೆ ಅಮ್ಮನತ್ತ ಕಣ್ಣು. ಮತ್ತೆ ಹಾಡಿನತ್ತ ಮನಸ್ಸು. ಹಾಗೆ ಬರೆದ ಒಂದೋದೇ ಒಂದು ಸಾಲು ಎಸ್‌ಎಂಎಸ್ ಮೂಲಕ ಸ್ಟುಡಿಯೋಗೆ ರವಾನೆ. ಕಾಯ್ಕಿಣಿಯವರ ಆ ತಲ್ಲಣದ ಸಾಹಿತ್ಯ ಸೃಷ್ಟಿ ಚಿತ್ರವೊಂದರ ಕಥೆಗೆ ಪ್ರೇರಣೆ ಆಗುವಂತಿದೆ ಅಲ್ಲವಾ? ಈ ಬದ್ಧತೆಯ ಬಗ್ಗೆ ಪ್ರಶ್ನೆಯಿಲ್ಲ. ಆದರೆ ಇದು ಅನಿವಾರ್ಯವಾ? ಪ್ರಶ್ನೆ ಚಿತ್ರರಂಗದ ಬಗೆಗೂ ಇದೆ. ಉದ್ಯಮ ಕಾಯ್ಕಿಣಿ ಅವರನ್ನು ವಿಪರೀತ ನೆಚ್ಚಿಕೊಂಡಿದೆಯಾ?

    ಸಾಹಿತ್ಯ ಎಸ್‌ಎಂಎಸ್ ರೂಪಿಯೂ ಆಗಬಲ್ಲದಾ ಎನ್ನುವುದು ಬರಹಕ್ಕೆ ಸಂಬಂಧಿಸಿದ ನೈತಿಕ ಪ್ರಶ್ನೆ. ಕುಮಾರವ್ಯಾಸ ಬರೆಯುವಾಗ ಸ್ನಾನ ಮಾಡಿ ಕೂರುತ್ತಿದ್ದನಂತೆ. ಮೈ ತೇವ ಒಣಗುವವರೆಗಷ್ಟೇ ಬರವಣಿಗೆ. ಆ ಧ್ಯಾನ ಈಗ ವಿಪರೀತವಾಗಿ ಕಾಣಬಹುದು. ಆದರೆ ಬರವಣಿಗೆಗೊಂದು ಏಕಾಂತ, ಶ್ರದ್ಧೆ ಬೇಕಲ್ಲವಾ? ಅವಸರ ಅಡುಗೆಯ ಬಗ್ಗೆ ಮೂಗು ಮುರಿಯುವವರೇ ಅಂಥ ಅಡುಗೆಯ ಪಾಕ ಸಿದ್ಧಪಡಿಸುವ ಅನಿವಾರ್ಯತೆಗೆ ಒಳಗಾಗಬಾರದಲ್ಲವಾ?

    ವರುಷ ರಜೆ?
    ವಿಪರೀತ ಒತ್ತಡದಿಂದ ಕಾಯ್ಕಿಣಿ ಬೇಸತ್ತಿದ್ದಾರೆ. ಅವರು ಒಂದು ವರ್ಷ ಯಾವ ಚಿತ್ರಗಳಿಗೂ ಹಾಡು ಬರೆಯುವುದಿಲ್ಲ. ಇಂಥ ಊಹಾಪೋಹ ಇತ್ತೀಚೆಗೆ ಚಾಲ್ತಿಯಲ್ಲಿದ್ದವು. ಸೃಜನಶೀಲ ಲೇಖಕರೊಬ್ಬರಿಗೆ ಇಂಥ ರಜೆ ಅಗತ್ಯ ಎನ್ನುವ ಮೆಚ್ಚುಗೆಯ ಮಾತುಗಳೂ ಕೇಳಿಸಿದ್ದವು. ಆದರೆ, ಈ ಮಾತುಗಳೆಲ್ಲ ಸುಳ್ಳೆನ್ನುವಂತೆ ಕಾಯ್ಕಿಣಿ ಮೊಬೈಲ್ ಕೈಗೆತ್ತಿಕೊಂಡಿದ್ದಾರೆ. ಯೋಗರಾಜಭಟ್ಟರ 'ಮನಸಾರೆ" ಚಿತ್ರಕ್ಕೆ ಅವರದ್ದು ಮನಸ್ಫೂರ್ತಿ ಸಾಹಿತ್ಯ.

    ಸುಖಾಸುಮ್ಮನೆ ಹೊಗಳುವುದು ಜಯಂತ್ ರೂಢಿ »

    Wednesday, July 1, 2009, 18:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X