ಧ್ವನಿಸುರುಳಿ ವಿಮರ್ಶೆ - ಪುನೀತ್ ಅಭಿನಯದ ಅಣ್ಣಾಬಾಂಡ್

By * ಬಾಲರಾಜ್ ತಂತ್ರಿ

Music review Anna Bond
ಬ್ಯಾನರ್: ಪೂರ್ಣಿಮಾ ಎಂಟರ್ಪ್ರೈಸಸ್
ನಿರ್ದೇಶಕರು: ಸೂರಿ
ಸಂಗೀತ: ವಿ ಹರಿಕೃಷ್ಣ
ನಿರ್ಮಾಪಕರು: ಪಾರ್ವತಮ್ಮ ರಾಜಕುಮಾರ್

1. ಬೋಣಿ ಆಗದ ಹೃದಯಾನ
ಸಾಹಿತ್ಯ: ಯೋಗರಾಜ್ ಭಟ್
ಹಾಡಿರುವವರು: ಟಿಪ್ಪು

ಇಂಗ್ಲಿಷ್ ಸಾಹಿತ್ಯದೊಂದಿಗೆ ಆರಂಭವಾಗುವ ಫಾಸ್ಟ್ ಮತ್ತು ಸ್ಲೋ ಬಿಟ್ ನಲ್ಲಿ ಸಾಗುವ ಹಾಡು. ಹಾಡಿನ ಸಾಹಿತ್ಯ ಡಿಫರೆಂಟ್ ಆಗಿದ್ದು, ಸಾಹಿತ್ಯಕ್ಕಾಗಿ ಹಾಡನ್ನು ಮತ್ತೆ ಮತ್ತೆ ಕೇಳುವಂತಿದೆ. ಭಟ್ರು ಬರೆದ ಈ ಹಾಡಿನ ಕೆಲವೊಂದು ಸಾಹಿತ್ಯದ ಸ್ಯಾಂಪಲ್ . ಬೋಣಿ ಆಗದ ಹೃದಯಾನ ಹೂವಿನ ಅಂಗಡೀಲಿ ಮಾರ್ಕೊಂಡು ಕಸ್ಟಮರ್ ಹುಡ್ಕುವ ಕ್ಯಾಮೆ ಬೇಕಿತ್ತಾ.. ಆಪ್ಪಿತಪ್ಪಿ ಇವಳು ನನ್ನನ್ನು ಅಪ್ಪಿಕೊಂಡಾಗ ಒಳ್ಳೆಯವನಾಗಿ ಉಳಕೊಳ್ಳುವ ಕ್ಯಾಮೆ ಬೇಕಿತ್ತಾ.. ಹೆಣ್ಣು ಮಕ್ಕಳು ಕುಡಿಸೋದೊಕ್ಕೆ ವರ್ಲ್ಡ್ ಫೇಮಸ್..ವೈನ್ ಸ್ಟಾರ್ ಮುಂದೆ ನಡ್ಕೊಂಡು ಹೋದ್ರೆ ಹಿಡ್ಕೋತಾರೆ ಬೀಟ್ ಪೂಲೀಸ್ರು...

2. ಏನೆಂದು ಹೆಸರಿಡಲಿ..
ಸಾಹಿತ್ಯ: ಜಯಂತ್ ಕಾಯ್ಕಿಣಿ
ಹಾಡಿರುವವರು: ಸೋನು ನಿಗಮ್, ಶ್ರೇಯಾ ಘೋಷಾಲ್

ಮೆಲೋಡಿಯಸ್ ಟ್ರ್ಯಾಕ್ ನಲ್ಲಿ ಸಾಗುವ ಡುಯೆಟ್ ಹಾಡು. ಕಿವಿಗೆ ಇಂಪು, ಮನಸಿಗೆ ಮುದ ನೀಡುವ ಕಾಯ್ಕಿಣಿ ಸಾಹೇಬ್ರ ಉತ್ತಮ ಸಾಹಿತ್ಯದ ಪ್ರೇಮ ಕವಿತೆ. ಏನೆಂದು ಹೆಸರಿಡಲಿ..ಈ ಚಂದ ಅನುಭವಕ್ಕೆ ಈಗಂತೂ ಹೃದಯದಲ್ಲಿ ನಿನದೇನೆ ಚಟುವಟಿಕೆ.. ಈ ಮೋಹದ ರೂವಾರಿ ನೀನೆ, ಇನ್ನೇತಕೆ ಬೇಜಾರು ನಾನಿಲ್ಲವೇ.

3. ತುಂಬಾ ನೋಡಬೇಡಿ.. ಲವ್ ಆಯ್ತದೆ..
ಸಾಹಿತ್ಯ: ಯೋಗರಾಜ್ ಭಟ್
ಹಾಡಿರುವವರು: ವಿ ಹರಿಕೃಷ್ಣ

ಈಗಾಗಲೇ ಕ್ರೇಜ್ ಹುಟ್ಟಿಸಿರುವ ಹಾಡಿದು. ಫಾಸ್ಟ್ ಟ್ರ್ಯಾಕ್ ನಲ್ಲಿ ಸಾಗುವ ಅದೇನೋ ಟಪ್ಪಾಗೊಂಚಿ ಹಾಡಾಂತರಲ್ಲಾ ಆ ಸಂಗೀತವಿರುವ ಹಾಡು. ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಸೆಂಟರ್ ನಲ್ಲಿ ಹೆಣ್ಣು, ಹೊನ್ನು, ಮಣ್ಣು ಯಾಕಲೇ..ಯಾಕಲೇ.. ಎನ್ನುವ ಟಿಪಿಕಲ್ ಭಟ್ರ ಸಾಹಿತ್ಯದ ಹಾಡು..

4. ಕಾಣದಂತೆ ಮಾಯವಾದನು..
ಸಾಹಿತ್ಯ: ಚಿ. ಉದಯಶಂಕರ್
ಹಾಡಿರುವವರು: ಪುನೀತ್ ರಾಜಕುಮಾರ್

1982ರಲ್ಲಿ ಬಿಡುಗಡೆಗೊಂಡ ಡಾ. ರಾಜ್, ಅಂಬಿಕಾ ಅಭಿನಯದ ಸೂಪರ್ ಹಿಟ್ ಚಲಿಸುವ ಮೋಡಗಳು ಚಿತ್ರದ ಜನಪ್ರಿಯ ಗೀತೆ. ಹಾಗಾಗಿ ಹಾಡಿನ ಸಾಹಿತ್ಯದ ಮತ್ತೆ ವಿಶೇಷವಾಗಿ ಹೇಳಬೇಕಾಗಿಲ್ಲ. ಮೂಲ ಸಾಹಿತ್ಯವನ್ನು ಯಥಾವತ್ತಾಗಿ ಉಳಿಸಿಕೊಳ್ಳಲಾಗಿದೆ. ಹಾಡಿನ ಮೊದಲ ಸಾಲಿನ ಮ್ಯೂಸಿಕ್ ಬೀಟ್ ಸಕತ್ತಾಗಿದೆ. ಹಾಡಿನ ಪಲ್ಲವಿ ಮಧ್ಯೆ ಬರುವ ಕೋರಸ್ ಮತ್ತು ಟ್ಯೂನ್ ಗಳು ಕೂಡಾ.

5. ಹಿ ಈಸ್ ಅಣ್ಣಾಬಾಂಡ್
ಸಾಹಿತ್ಯ: ಯೋಗರಾಜ್ ಭಟ್
ಹಾಡಿರುವವರು: ರಂಜಿತ್, ನವೀನ, ರಮ್ಯಾ

ಅಚ್ಚಾ ಕನ್ನಡದ ಕೂಸು ನಾನು ಅಣ್ಣಾಬಾಂಡ್, ಜೇಮ್ಸ್ ಬಾಂಡ್ ಗು ನಾನು ಅಣ್ಣಾಬಾಂಡ್, ಸೂರ್ಯನಿಗೆ ಅಲ್ಲಾ ನಾನು ಅಣ್ಣಾಬಾಂಡ್ ಹೀಗೆ ಸಾಗುವ ಹಾಡಿನ ಸಾಹಿತ್ಯ ಸಾಗುತ್ತೆ. ಹಾಡಿನ ಟ್ಯೂನ್ ಕೆಲವೊಂದು ಕಡೆ ಜಾಕಿ ಚಿತ್ರದ ಟೈಟಲ್ ಹಾಡಿನ ಟ್ಯೂನ್ ಕೇಳಿದ ಭಾಸವಾಗುತ್ತೆ.

ಆಲ್ಬಮ್ ನ ಎಲ್ಲಾ ಹಾಡುಗಳು ಒಂದಕ್ಕೊಂದು ಸೂಪರ್ ಅನ್ನಬಹುದು. ಆಲ್ಬಮ್ ಖರೀದಿಸಿದರೆ ಕೊಟ್ಟ ದುಡ್ಡಿಗೆ ಮೋಸವಿಲ್ಲ ಅನ್ನೋದು ಕೂಡಾ ನಮ್ಮ ಅಭಿಪ್ರಾಯ. ಇನ್ನು ಅವರವರ ಹಾವಕ್ಕೆ ಅವರವರ ಭಾವಕ್ಕೆ ಬಿಟ್ಟ ವಿಚಾರ. ಜೈ ಮಾಕಾಳಮ್ಮ

More from Filmibeat

English summary
Kannada music review of much awaited Anna Bond. Album has 5 songs. Puneeth Rajkumar in the lead role, Soori has directed this movie. Music given by V Harikrishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X