twitter
    For Quick Alerts
    ALLOW NOTIFICATIONS  
    For Daily Alerts

    ಉಪೇಂದ್ರ ಗಾಡ್ ಫಾದರ್ ಚಿತ್ರಕ್ಕೆ ರೆಹಮಾನ್ ಸಂಗೀತ

    By Rajendra
    |

    ಇದೇ ಮೊದಲ ಬಾರಿಗೆ ಕನ್ನಡಕ್ಕೆ ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅಡಿಯಿಡುತ್ತಿದ್ದಾರೆ. ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ 'ಗಾಡ್ ಫಾದರ್' ಚಿತ್ರಕ್ಕೆ ರೆಹಮಾನ್ ಸ್ವರ ಸಂಯೋಜನೆ ಮಾಡಲಿದ್ದಾರೆ. ನಿರ್ದೇಶಕನಾಗಿ ಬದಲಾದಛಾಯಾಗ್ರಾಹಕ ಪಿ ಸಿ ಶ್ರೀರಾಮ್ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.

    ತಮಿಳಿನ ಯಶಸ್ವಿ ಚಿತ್ರ 'ವರಲಾರು' ಚಿತ್ರದ ರೀಮೇಕ್ 'ಗಾಡ್ ಫಾದರ್'. ಮೂಲ ಚಿತ್ರವನ್ನು ಕೆ ಎಸ್ ರವಿಕುಮಾರ್ ನಿರ್ದೇಶಿಸಿದ್ದರು. ಮೂಲ ಚಿತ್ರಕ್ಕೂ ರೆಹಮಾನ್ ಅವರೇ ಸಂಗೀತ ಸಂಯೋಜಿಸಿದ್ದರು. ಈಗ ಕನ್ನಡದ ಅವತರಣಿಕೆಗೂ ರೆಹಮಾನ್ ಅವರೇ ಸಂಗೀತ ನಿರ್ದೇಶಿಸಲಿದ್ದಾರೆ. ಈ ವಿಷಯವನ್ನು ಸ್ವತಃ ರೆಹಮಾನ್ ಅವರೇ ಶ್ರೀರಾಮ್ ಅವರಿಗೆ ಇ-ಮೇಲ್ ಮೂಲಕ ಖಚಿತಪಡಿಸಿದ್ದಾರೆ.

    ವಿಶೇಷ ಎಂದರೆ ಇಲ್ಲಿ ಮೂಲ ಚಿತ್ರದ ಟ್ಯೂನ್ಸ್‌ಗೆ ಬದಲಾಗಿ ಹೊಸ ಟ್ಯೂನ್ಸ್ ಸಂಯೋಜಿಸಲಿದ್ದಾರೆ.ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಎಲ್ಲವನ್ನೂ ಹೊಸದಾಗಿ ಸಂಯೋಜಿಸಲಿದ್ದಾರೆ. ಮೂಲ ಚಿತ್ರದಲ್ಲಿ ಒಟ್ಟು ಒಂಭತ್ತು ಹಾಡುಗಳಿದ್ದವು. 'ವರಲಾರು' ಚಿತ್ರದ ಛಾಯಾಗ್ರಾಹಕರಾಗಿ ಪಿ ಸಿ ಶ್ರೀರಾಮ್ ಕೆಲಸ ಮಾಡಿದ್ದರು.

    ಗಾಯಕ/ಗಾಯಕಿಯರನ್ನು ಆಯ್ಕೆ ಮಾಡುವ ಅವಕಾಶವನ್ನು ರೆಹಮಾನ್ ಅವರಿಗೆ ಬಿಡಲಾಗಿದೆ. ಆಡಿಯೋ ರೈಟ್ಸ್ ಗಾಗಿ ಈಗಾಗಲೆ ಆನಂದ್ ಆಡಿಯೋ ಒಪ್ಪಂದ ಪತ್ರಗಳಿಗೆ ಸಹಿಹಾಕಿದೆ ಎಂದು ಚಿತ್ರದ ನಿರ್ಮಾಪಕ ಕೆ ಮಂಜು ಸ್ಪಷ್ಟಪಡಿಸಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು ಸೌಂದರ್ಯ ಜಯಮಾಲಾ ಆಯ್ಕೆ ಖಚಿತವಾಗಿದೆ. ಸಿಮ್ರಾನ್ ಹಾಗೂ ಭೂಮಿಕಾ ಅವರನ್ನು ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ.

    English summary
    Oscar Award winner and prestigious Grammy award winning music composer AR Rahman is all set to debut in Kannada. Rahman will score the music for the Upendra starrer film ‘God Father’. PC Sriram is the director and Soundarya, daughter of Dr.Jayamala is the heroine.
    Monday, May 28, 2012, 12:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X