twitter
    For Quick Alerts
    ALLOW NOTIFICATIONS  
    For Daily Alerts

    ಮಾಮರವೆಲ್ಲೋ ಕೋಗಿಲೆ ಎಲ್ಲೋ

    By Rajendra
    |

    ಯುಗಾದಿ ಬಂತೆಂದರೆ ಸಾಕು ಕನ್ನಡದಲ್ಲಿ ಸಾಕಷ್ಟು ಗೀತೆಗಳು ನೆನಪಾಗುತ್ತವೆ. ಅವುಗಳಲ್ಲಿ ಯುಗ ಯುಗಾದಿ ಕಳೆದರು (ಕುಲವಧು), ವಸಂತ ಬರೆದನು ಒಲವಿನ ಓಲೆ (ಬೆಸುಗೆ)...ಮುಂತಾದವನ್ನು ಹೆಸರಿಸಬಹುದು.ಅಂತಹದ್ದೇ ಗೀತೆ ಇಲ್ಲಿದೆ ಓದಿ. ಸರಳ ಸಾಹಿತ್ಯದ ಮೂಲಕ ವಿರಳ ಗೀತೆಗಳನ್ನು ಕೊಟ್ಟ ಚಿ ಉದಯಶಂಕರ್ ರಚಿಸಿದ ಗೀತೆ ಇದು. ವಿಚಾರಗಳು ಎಷ್ಟೇ ಗಹನವಾಗಿರಲಿ ಚಿ ಉದಯಶಂಕರ್ ಅವರ ಲೇಖನಿಯಲ್ಲಿ ಅವು ಸರಳವಾಗಿ ಅರಳುತ್ತಿದ್ದವು. ಈ ಗೀತೆ 1975ರಲ್ಲಿ ತೆರೆಕಂಡ 'ದೇವರಗುಡಿ' ಚಿತ್ರದ್ದು. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಕಂಠಸಿರಿ ಕೇಳುಗರನ್ನು ಎಲ್ಲೋ ಕರೆದೊಯ್ಯುತ್ತದೆ. ರಾಜನ್ ನಾಗೇಂದ್ರ ಜೋಡಿಯ ಸಂಗೀತ ಮೋಡಿಗೆ ಕಿವಿಗಳು ಕಾತರಿಸುತ್ತವೆ. ಯುಗಾದಿ ಹಬ್ಬದ ಶುಭಾಶಯಗಳೊಂದಿಗೆ...

    ಮಾಮರವೆಲ್ಲೋ ಕೋಗಿಲೆ ಎಲ್ಲೋ
    ಏನೀ ಸ್ನೇಹ ಸಂಬಂಧ
    ಎಲ್ಲಿಯದೋ ಈ ಅನುಬಂಧ..

    ಸೂರ್ಯನು ಎಲ್ಲೋ ತಾವರೆ ಎಲ್ಲೋ
    ಕಾಣಲು ಕಾತರ ಕಾರಣವೇನೋ
    ಚಂದಿರನೆಲ್ಲೋ ನೈದಿಲೆ ಎಲ್ಲೋ
    ನೋಡಲು ಅರಳುವ ಸಡಗರವೇನೋ
    ಎಲ್ಲೇ ಇರಲೀ ಹೇಗೇ ಇರಲೀ
    ಕಾಣುವ ಆಸೆ ಏತಕೋ ಏನೋ....(ಪಲ್ಲವಿ)

    ಹುಣ್ಣಿಮೆಯಲ್ಲಿ ತಣ್ಣನೆ ಗಾಳೀ
    ಬೀಸಲು ನಿನ್ನಾ ನೆನಪಾಗುವುದು
    ದಿನರಾತ್ರಿಯಲೀ ಏಕಾಂತದಲೀ
    ಏಕೋ ಏನೋ ನೋವಾಗುವುದು
    ಬಯಕೆಯು ತುಂಬಿ ಆಸೆಯ ತುಂಬೀ
    ಎದೆಯನು ಕೊರೆದೂ ಕಾಡುವುದೇನೋ...(ಪಲ್ಲವಿ)

    ;

    English summary
    Here is the evergreen lyrics by Chi Udayashankar in the film Devara Gudi. Rajan-Nagendra music and S. P. Balasubramaniam voice cheers the audience. Every Kannadiga would love this song on Ugadi. We bring you the song in Kannada. May you have a happy and prosperous Ugadi.
    Wednesday, April 6, 2011, 17:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X