'ಕೊಲಾವರಿ ಡಿ' ಹಾಡಿಗೆ ಜಾಡಿಸಿದ ಜಾವೇದ್ ಅಖ್ತರ್

By Rajendra

Javed Akhtar
ಧನುಷ್ ಬರೆದು ಸ್ವತಃ ಹಾಡಿರುವ "ಕೊಲಾವರಿ ಡಿ" ಎಂಬ ಹಾಡು ಈಗಾಗಲೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆಲವರು ಈ ಹಾಡಿನ ಬಗ್ಗೆ ಮೆಚ್ಚುಗೆ ಸೂಚಿಸಿದರೆ. ಇನ್ನೂ ಕೆಲವರು ಪರ್ವಾಗಿಲ್ಲ ಎಂದಿದ್ದಾರೆ. ಹಿಂದಿ ಗೀತ ಸಾಹಿತಿ ಜಾವೇದ್ ಅಖ್ತರ್ ಅವರಂತೂ ಬೇಜಾರಾಗಿ ಈ ಹಾಡಿನ ಬಗ್ಗೆ ಮಾತನಾಡದಿರುವುದೇ ಲೇಸು ಎಂದಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ಗೀತಸಾಹಿತಿಯಾಗಿ ಅತ್ಯುತ್ತಮ ಹಾಡುಗಳನ್ನು ಕೊಟ್ಟಿರುವ ಜಾವೇದ್, ಕೊಲಾವರಿ ಡಿ ಹಾಡು ಜನರ ಭಾವನೆಗಳಿಗೆ ಅಪಮಾನ ಮಾಡಿದಂತಿದೆ. ಇದು ಒಂಥರಾ ತಂಗ್ಲಿಷ್ (ತಮಿಳು ಮತ್ತು ಇಂಗ್ಲಿಷ್) ಕಲಬೆರಕೆ ಹಾಡು ಎಂದು ಛೇಡಿಸಿದ್ದಾರೆ.

"ಕೊಲಾವರಿ ಡಿ ಹಾಡನ್ನು ಎಲ್ಲರೂ ಹೊಗಳುತ್ತಿದ್ದಾರೆ. ಆದರೆ ಹಾಡಿನ ಟ್ಯೂನ್ ಸಾಧಾರಣವಾಗಿದೆ, ಹಾಡುಗಾರಿಕೆಯಂತೂ ಕೆಳದರ್ಜೆಯಲ್ಲಿದೆ. ಹಾಡಿನಲ್ಲಿರುವ ಪದಗಳು ಅವಮಾನಕರ" ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಖ್ತರ್ ಜಾಡಿಸಿದ್ದಾರೆ.

ಈ ಹಾಡನ್ನು ಧನುಷ್ ತನ್ನ ಮುಂದಿನ ಚಿತ್ರ '3'ಗಾಗಿ ಹಾಡಿದ್ದು ಇದನ್ನು ಯೂಟ್ಯೂಬ್‌ನಲ್ಲೂ ಹಾಕಿದ್ದಾರೆ. ಅಂತರ್ಜಾಲದಲ್ಲಿ ಈ ಹಾಡು ಅಪಾರ ಜನಪ್ರಿಯತೆ ಪಡೆದಿದ್ದು 15 ದಶಲಕ್ಷ ವ್ಯೂವ್ಸ್ ಬಂದಿದೆ. ರಜನಿಕಾಂತ್ ಅಳಿಯ ಎಂಬ ಕಾರಣಕ್ಕೋ ಏನೋ ಈ ಹಾಡಿಗೆ ಈ ಪಾಟಿ ಜನಪ್ರಿಯತೆ ಸಿಕ್ಕಿರುವುದು ದುರಂತ ಸತ್ಯ! (ಪಿಟಿಐ)

More from Filmibeat

English summary
Dhanush’s ‘Kolaveri di’, which has become an online rage and also found a fan in Bollywood mega star Amitabh Bachchan, has failed to impress lyricist Javed Akhtar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X