ರವಿಚಂದ್ರನ್ ನರಸಿಂಹ ಧ್ವನಿಸುರುಳಿ ವಿಮರ್ಶೆ

By * ಚಕ್ರತೀರ್ಥ, ಕುಂದಾಪುರ

ಸುದೀರ್ಘ ಸಮಯದ ನಂತರ ಕ್ರೇಜಿ ಸ್ಟಾರ್ ರವಿಚಂದ್ರನ್‌ಗೆ ಹಂಸಲೇಖ ಸಾಹಿತ್ಯ ಮತ್ತು ಸಂಗೀತದ ಮೂಲಕ ಸಾಥ್ ನೀಡುತ್ತಿರುವ ಚಿತ್ರ. ಝೇಂಕಾರ್ ಆಡಿಯೋ ಮೂಲಕ ಚಿತ್ರದ ಆಲ್ಬಮ್ ಬಿಡುಗಡೆ ಗೊಂಡಿದೆ. ರವಿಚಂದ್ರನ್‌ಗೆ ನಿಕೇಷಾ ಪಟೇಲ್ ನಾಯಕಿಯಾಗಿ ನಟಿಸುತ್ತಿರುವ ಚಿತ್ರದ ನಿರ್ದೇಶಕ ಎಸ್ ಮೋಹನ್.

1. ಲಂಗುಲಗಾಮಿಲ್ಲ ಲಂಚ ನುಂಗುವವರಿಗೆ
ಎಸ್ ಪಿ ಬಾಲಸುಬ್ರಮಣ್ಯಂ

ಪ್ರಸಕ್ತ ಸಾಮಾಜಿಕ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಮತ್ತು ರಾಜಕೀಯ ವ್ಯವಸ್ಥೆ ಬಗ್ಗೆ ಅತ್ಯುತ್ತಮವಾಗಿ ಸಾಹಿತ್ಯದಿಂದ ರೂಪಿತವಾಗಿರುವ ಹಾಡು. ಎಸ್ಪಿಬಿ ಕಂಠ ಸಿರಿಯಲ್ಲಿ ಸೊಗಸಾಗಿ ಮೂಡಿ ಬಂದ ಈ ಹಾಡು ಟಿಪಿಕಲ್ ಹಂಸಲೇಖ ಸ್ಟೈಲ್‌ನಲ್ಲಿದೆ.

2. ದಹನ ದಹನ ಸುಖ ಸಯನ
ಕಾರ್ತಿಕ್, ಸುಚಿತ್ರಾ

ಸ್ಲೋ ಟ್ರ್ಯಾಕ್‌ನಲ್ಲಿ ಸಾಗುವ ಮೆಲೋಡಿಯಸ್ ಹಾಡು. ಹಾಡಿನ ವಿಶಿಷ್ಟತೆ ಏನೆಂದರೆ ರವಿಚಂದ್ರನ್ ಹಂಸಲೇಖ ಜೋಡಿಯ ಹಳೆ ಹಾಡಿನ ಹಾಗೆ ಟ್ಯೂನ್ ಆಯ್ಕೆ ಮಾಡಲಾಗಿದೆ. ಹಾಡಿನ ಬ್ಯಾಕ್‌ಗ್ರೌಂಡ್ ಸಂಗೀತ ಇಂಪಾಗಿದೆ.

3. ಬಂದೆ ನಾನು ಭೂಮಿಗೆ, ಅಮ್ಮಾ ಕರೆದ ಕೂಗಿಗೆ
ಕೆ ಜೆ ಯೇಸುದಾಸ್

ತಾಯಿ ಮತ್ತು ಮಗನ ಸೆಂಟಿಮೆಂಟ್ ಮೇಲೆ ಹೆಣೆದಿರುವ ಹಾಡು. ಸ್ಲೋ ಪಿಚ್‌ನಲ್ಲಿ ಸಾಗುವ ಸ್ಯಾಡ್ ಸಾಂಗ್. ಉತ್ತಮ ಸಂಗೀತ ನೀಡುವ ಮೂಲಕ ಹಂಸಲೇಖಾ ಈ ಕ್ಷೇತ್ರದಲ್ಲಿ ತನಗಿರುವ ಪಾಂಡಿತ್ಯವನ್ನು ಮತ್ತೆ ಮೆರೆದಿದ್ದಾರೆ.

4. ಸಿಮ್ ಗಿಮ್ ಇಲ್ಲಾ ಹೃದಯಯದ ಮೊಬೈಲ್ ಇದು..
ಶ್ರೇಯಾ ಘೋಷಾಲ್

ಶ್ರೇಯಾ ಇದುವರೆಗೆ ಹಾಡಿರುವ ಕನ್ನಡ ಹಾಡಿನಲ್ಲಿ ಈ ರೀತಿಯ ಟ್ಯೂನ್ ಬಹುಶಃ ಕೇಳಿರಕಿಲ್ಲ. ಪಾಶ್ಚಿಮಾತ್ಯ ಶೈಲಿಯಲ್ಲಿ ಸಾಗುವ ಮೊದಲ ಪ್ಯಾರಾ ನಂತರ ಹಂಸಲೇಖಾ ಡಿಫರೆಂಟ್ ಶೈಲಿಯಲ್ಲಿ ಸಂಗೀತ ನೀಡಿದ್ದಾರೆ.

5. ನರಸಿಂಹ ಸ್ವಾಮಿ ನಿನ್ನ ಹೃದಯದಲ್ಲಿ ಜಾಗ ಕೊಡು ಸ್ವಾಮಿ...
ಟಿಪ್ಪು, ಅನುರಾಧಾ ಶ್ರೀರಾಮ್

ಟಪಾಂಗುಚಿ ಹಾಡು. ಅನುರಾಧಾ ಕನ್ನಡ ಉಚ್ಚಾರಣೆ ದೇವರಿಗೇ ಪ್ರೀತಿ.

6. ವಿಷಾ.. ವಿಷಾ..ಎಂತಾ ವಿಷಯ
ಹೇಮಂತ್, ಸುನೀತಾ

ಆಲ್ಬಂನಲ್ಲಿರುವ ಮತ್ತೊಂದು ಟಪಾಂಗುಚಿ ಹಾಡು. ಐಟಂ ಸಾಂಗ್ ರೀತಿಯಲ್ಲಿ ಹಾಡಿನ ಸಾಹಿತ್ಯ ಮತ್ತು ಟ್ಯೂನ್ ಇದೆ. ಹೇಮಂತ್ ಮತ್ತು ಸುನೀತಾ ಈ ಹಾಡಿಗೆ ಉತ್ತಮ ಆಯ್ಕೆ ಎನ್ನಬಹುದು.

ಆಲ್ಬಂನಲ್ಲಿರುವ ಆರು ಹಾಡುಗಳಲ್ಲಿ ಮೂರು ಹಾಡು ಚೆನ್ನಾಗಿದ್ದು, ರವಿ ಮತ್ತು ಹಂಸಲೇಖಾ ಜೋಡಿ ಈ ಚಿತ್ರದ ಮೂಲಕ ಭರ್ಜರಿ ರೀಎಂಟ್ರಿ ಕೊಡಬಹುದನ್ನುವ ನಿರೀಕ್ಷೆ ಒಸಿ ಹುಸಿಯಾಗಬಹುದು.

More from Filmibeat

English summary
Crazy Star Ravichandran, Nikesha Patel lead Kannada movie Narasimha audio has been released. S Mohan directed the movie and Hamsalekha has composed the music. Read the review of Kannada album Shayloo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X