»   » ಮೈಸೂರಿನಲ್ಲಿ ರಘು ದೀಕ್ಷಿತ್ ಸಂಗೀತ ಸಂಜೆ

ಮೈಸೂರಿನಲ್ಲಿ ರಘು ದೀಕ್ಷಿತ್ ಸಂಗೀತ ಸಂಜೆ

Subscribe to Filmibeat Kannada
Raghu Dixit music concert in Mysuru
'ಸೈಕೋ' ಚಿತ್ರದ ಅಸಲಿ ನಾಯಕ ರಘು ದೀಕ್ಷಿತ್ ಇದೇ ಮೊದಲ ಬಾರಿಗೆ 'ರಸಸಂಜೆ'ಕಾರ್ಯಕ್ರಮವೊಂದನ್ನು ನಡೆಸಿಕೊಡಲಿದ್ದಾರೆ. ರಘು ದೀಕ್ಷಿತ್ ರ ಹುಟ್ಟೂರು ಮೈಸೂರಿನಲ್ಲಿ ಡಿಸೆಂಬರ್ 20ರಂದು ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಮೈಸೂರಿನ 'ವಯಂ'ಮತ್ತು ಬೆಂಗಳೂರಿನ 'ಸಾರಥಿ' ಸಂಸ್ಥೆಗಳು ಜೊತೆಗೂಡಿ ಈ ಅಧ್ಬುತ ಕಾರ್ಯಕ್ರಮವನ್ನು ಆಯೋಜಿಸಿವೆ.

ತಮ್ಮ ತವರೂರಿನಲ್ಲಿ ರಘು ದೀಕ್ಷಿತ್ ಹಾಡಿ, ಕುಣಿದು ಸಂಗೀತ ಪ್ರೇಮಿಗಳನ್ನು ರಂಜಿಸಲಿದ್ದಾರೆ. ರಘು ದೀಕ್ಷಿತ್ ನಡೆಸಿಕೊಡುತ್ತಿರುವ ಪ್ರಥಮ ಮ್ಯೂಸಿಕ್ ಕನ್ಸರ್ಟ್ ಇದಾಗಿದ್ದು ಕಾರ್ಯಕ್ರಮದಿಂದ ಸಂಗ್ರಹವಾಗುವ ಹಣವನ್ನು ಅವರು 'ಆಶಾದಾಯಾಕ' ಟ್ರಸ್ಟ್ ಗೆ ನೀಡಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada