»   » ಬೊಂಬಾಟ್ ಚಿತ್ರ ಧ್ವನಿ ಸುರಳಿ ವಿಮರ್ಶೆ

ಬೊಂಬಾಟ್ ಚಿತ್ರ ಧ್ವನಿ ಸುರಳಿ ವಿಮರ್ಶೆ

Posted By: Staff
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಲಕ್ಕಿ ಸ್ಟಾರ್ ರಮ್ಯಾ ಅಭಿನಯದ ಬೊಂಬಾಟ್ ಚಿತ್ರದ ಧ್ವನಿಸುರಳಿ ಜುಲೈ 2 ರಂದು ಬಿಡುಗಡೆ ಮಾಡಲಾಯಿತು.ಅಂದು ರೇಡಿಯೊ ಮಿರ್ಚಿ ಎಫ್ ಎಂ ವಾಹಿನಿಯಲ್ಲಿ  ಹುಟ್ಟು ಹಬ್ಬದ ಪ್ರಯುಕ್ತ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣೇಶ್  ಧ್ವನಿಸುರಳಿಯನ್ನು  ಅನಾವರಣಗೊಳಿಸಿದರು.ರಾಕ್ ಲೈನ್ ವೆಂಕಟೇಶ್ ಅವರ ಬ್ಯಾನರ್ ನಲ್ಲಿ ತಯಾರಾಗಿರುವ ಈ ಚಿತ್ರವನ್ನು ಡಿ. ರಾಜೇಂದ್ರ ಬಾಬು ನಿರ್ದೇಶಿಸಿದ್ದಾರೆ.

*ಚೇತನ್.ಬಿ.ಎಸ್, ಬೆಂಗಳೂರು

ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಈ  ಚಿತ್ರದಲ್ಲಿ ಮತ್ತೆ  ಸಂಗೀತ ನಿರ್ದೇಶಕ ಮನೋಮೂರ್ತಿ, ಸಾಹಿತಿ ಜಯಂತ್ ಕಾಯ್ಕಿಣಿ ಹಾಗೂ ಗಾಯಕ ಸೋನು ನಿಗಂ  ಜನಪ್ರಿಯ ಜೋಡಿ ಒಂದಾಗಿ ಕೆಲಸ ಮಾಡಿದ್ದಾರೆ.

'ಮಾತಿನಲ್ಲಿ ಹೇಳಲಾರೆನು..' ಜಯಂತ್ ಕಾಯ್ಕಿಣಿ ಅವರ ಸರಳ ಸಾಹಿತ್ಯದಲ್ಲಿ ಕಾಣದ ಪ್ರೇಮಿಯನ್ನು ಕುರಿತಾದ ಹಾಡನ್ನು ಸುಶ್ರಾವ್ಯವಾಗಿ ಸೋನು ನಿಗಂ ಹಾಡಿದ್ದಾರೆ.

'ಸ್ಟ್ರಾಬೇರಿ ಕೆನ್ನೆ......'  ರಾಜೇಶ್ ಹಾಗೂ ಸುಪ್ರಿಯಾ ರಾಮಕೃಷ್ಣಯ್ಯ ಕಂಠದಲ್ಲಿ ಮೂಡಿಬಂದಿದೆ. ಕವಿರಾಜ್ ಬರೆದಿರುವ ಈ ಯುಗಳ ಗೀತೆಯನ್ನು ರಾಜೇಶ್ ವಿವಿಧ ಏರಿಳತಗಳಲ್ಲಿ ಸೊಗಸಾಗಿ ಹಾಡಿದ್ದಾರೆ. ಮನೋ ಮೂರ್ತಿ ಎಂದಿನಂತೆ ಸುಮಧುರ ಸಂಗೀತ ಮನಸೆಳೆಯುತ್ತದೆ.

'ಐಯಾಮ್ ಸೋ ಬೊಂಬಾಟ್ ...'  ಗುರುಕಿರಣ್  ಹಾಡಿರುವ ಈ ಹಾಡು ಗಣೇಶ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತಿದೆ. ಸುಮಧುರ ಹಾಡುಗಳ ಅಲ್ಬಂ ನಲ್ಲಿ ಇದೊಂದೆ ಸ್ವಲ್ಪ ಅಬ್ಬರದ ಗೀತೆ. ಈ ಹಾಡಿಗೆ ಕವಿರಾಜ್ ಸಾಹಿತ್ಯ ಒದಗಿಸಿದ್ದಾರೆ.

'ಮಾತಿನಲ್ಲಿ ಹೇಳಬಲ್ಲೆನು..' ಶ್ರೇಯಾ ಘೋಷಾಲ್ ಕಂಠದಲ್ಲಿ ಹೊರಹೊಮ್ಮಿರುವ ಅದ್ಭುತ ಗೀತೆ ಎನ್ನಬಹುದು. ಇಡೀ ಅಲ್ಬಂನ ಟಾಪ್ ಸ್ಥಾನ ಇದಕ್ಕೆ ಸಲ್ಲುತ್ತದೆ. ಇದೇ ಹಾಡನ್ನು ಸೋನು ಹಾಡಿದ್ದರೂ, ಶ್ರೇಯಾ ಇದರಲ್ಲಿ ಪೂರ್ಣ ಅಂಕಗಳಿಸುತ್ತದೆ.

'ಚಿನ್ನ ಹೇಳೆ ಹೇಗಿರುವೆ..' ಸೋನು ನಿಗಮ್ ಹಾಗೂ ಶ್ರೇಯಾ ಘೋಷಾಲ್ ಧ್ವನಿಯಲ್ಲಿ ಮೂಡಿದ ಮತ್ತೊಂದು ಯುಗಳ ಗೀತೆ. ಸರಳ ಸಾಹಿತ್ಯದ ಮೂಲಕ ಮತ್ತೊಮ್ಮೆ ಕಾಯ್ಕಿಣಿ ಗಮನ ಸೆಳೆಯುತ್ತಾರೆ.

ಒಟ್ಟಾರೆಯಾಗಿ ಈ ಚಿತ್ರದ ಹಾಡುಗಳು ಅಬ್ಬರವಿಲ್ಲದ, ಸರಳ, ಸುಂದರ, ಸುಮಧುರ ಗೀತೆಗಳನ್ನು ಇಷ್ಟ ಪಡುವವರಿಗೆ ಮೀಸಲು. ಮನೋಮೂರ್ತಿ ಎಂದಿನಂತೆ ಉತ್ತಮ ಸಂಗೀತ ನೀಡಿದ್ದರೂ, ವೈವಿಧ್ಯತೆ ನೀಡುವಲ್ಲಿ ವಿಫಲರಾಗಿದ್ದಾರೆ. ಹಾಡುಗಳು ಪ್ರಥಮಬಾರಿಗೆ ಕೇಳುವಾಗ ಮನಸೆಳೆಯದಿದ್ದರೂ, ಕೇಳುತ್ತಾ ಕೇಳುತ್ತಾ ಜನಪ್ರಿಯತೆ ಗಳಿಸುವ ಎಲ್ಲಾ ಅಂಶಗಳನ್ನು ಹೊಂದಿದೆ. ಕೊನೆಯದಾಗಿ ಮನೋಮೂರ್ತಿ ಗಣೇಶ್ ,ಕಾಯ್ಕಿಣಿ ಸೋನು ನಿಗಂ ಜೋಡಿ ಜಾದೂ ಇಲ್ಲಿ ಹೆಚ್ಚಾಗಿ ಫಲಿಸಿಲ್ಲ.ಆದರೆ, ಕೊಟ್ಟ ಕಾಸಿಗೆ  ಮೋಸವಿಲ್ಲ.
ಗಣೇಶ್ ಗೆ ಹುಟ್ಟುಹಬ್ಬದ ಸಂಭ್ರಮ

English summary
Kannada movie Bombat -audio review
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada