ಗಂಧದ ಗುಡಿ ಚಿತ್ರದ ಈ ಹಾಡು ಕೇಳದ ಕನ್ನಡಿಗನಿಲ್ಲ

By Rajendra

ಕಣ್ಣಿಗೆ ಮುದ ನೀಡುವ ಕಿವಿಗೆ ಇಂಪಾದಕೆಲವೇ ಕೆಲವು ಹಾಡುಗಳಲ್ಲಿ 'ಗಂಧದ ಗುಡಿ' (1973)ಚಿತ್ರದ "ನಾವಾಡುವ ನುಡಿಯೇ..." ಅತ್ಯುತ್ತಮವಾದ ಹಾಡು ಎಂದು ಹೇಳಬಹುದು. ಈ ಹಾಡನ್ನು ಕೇಳದ ಕನ್ನಡಿಗನೇ ಇಲ್ಲ. ಈ ಹಾಡು ಕೇಳಿಲ್ಲ ಎಂದರೆ ಅವನು ಕನ್ನಡಿಗನೇ ಅಲ್ಲ. ಪಿ. ಬಿ ಶ್ರೀನಿವಾಸ ಅವರ ಸಿರಿಕಂಠದಿಂದ ಹೊರ ಹೊಮ್ಮಿದ ಈ ಹಾಡಿನಲ್ಲಿ ವರನಟ ರಾಜಕುಮಾರ್ ಅವರ ಅಭಿನಯದ ಅಮೋಘ.

ಈ ಹಾಡು ಕನ್ನಡಿಗರ ಅಚ್ಚು ಮೆಚ್ಚಿನ ಹಾಡು. ಕೇಳಿದಾಗ ಕನ್ನಡ ನಾಡಿನ ಮೇಲೆ ಪ್ರೀತಿ ಉಕ್ಕಿ ಹರಿಯುತ್ತದೆ. ಬೆಂಗಳೂರಿನಲ್ಲೇ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಸಂಚಕಾರ ಎದುರಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಸಾಹಿತ್ಯ ಜಾತ್ರೆ ನೆರೆದಿದೆ. ಸಂದರ್ಭೋಚಿತವಾಗಿ ದಟ್ಸ್ ಕನ್ನಡ ಓದುಗರಿಗೆ ಈ ಹಾಡಿನ ಸಾಹಿತ್ಯವನ್ನು ನೀಡುತ್ತಿದೆ. ಚಿ ಉದಯಶಂಕರ್ ಸಾಹಿತ್ಯ, ರಾಜನ್ ನಾಗೇಂದ್ರ ಸಂಗೀತ ಮೋಡಿ ಹಾಡಿ ಆನಂದಿಸಿ!

ಆ ಆಹ ಆಹ ಆಹಹಾ .. ಓಹೊಹೋ ಓ ಹೊಹೊಹೊಹೋ
ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ

ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು
ಆಹಹಾ ಓ ಹೊ ಹೋ..ಆ‌ಆ ಓ ಹೋ
ಹರಿಯುವ ನದಿಯಲಿ ಈಜಾಡಿ ಹೂಬನದಲಿ ನಲಿಯುತ ಓಲಾಡಿ
ಚೆಲುವಿನ ಬಲೆಯ ಬೀಸಿದಳು ಈ ಗಂಧದ ಗುಡಿಯಲಿ ನೆಲೆಸಿದಳು
ಇದು ಯಾರ ತಪಸಿನ ಫಲವೋ ಈ ಕಂಗಳು ಮಾಡಿದ ಪುಣ್ಯವೋ ಓ ಹೊ ಹೋ..ಹಾಹ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಓ ಹೊ ಹೋ.. ಓ ಹೊ ಹೋ ..ಓಹೋಹೋ..

ಆ ಆಹ ಆಹ ಆಹಹಾ .. ಓಹೊಹೋ ಓ ಹೊಹೊಹೊಹೋ
ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದ ಗುಡಿ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಆಹಹಾ..ಆಹಹಾ ಆಹಹಾ ಆಹಹಾ

ಆ.. ಆಹ.. ಆಹ ಆ‌ಅ. ಆಹ.. ಹಾಹ..
ಚಿಮ್ಮುತ ಓಡಿವೆ ಜಿಂಕೆಗಳು ಕುಣಿದಾಡುತ ನಲಿದಿವೆ ನವಿಲುಗಳು
ಆಹಹಹಾ ಮುಗಿಲನು ಚುಂಬಿಸುವಾಸೆಯಲಿ
ತೂಗಾಡುತ ನಿಂತ ಮರಗಳಲಿ ಹಾಡುತಿರೆ ಬಾನಾಡಿಗಳು
ಎದೆಯಲ್ಲಿ ಸಂತಸದಾ ಹೊನಲು
ಇದು ವನ್ಯ ಮೃಗಗಳ ಲೋಕವೋ ಈ ಭೂಮಿಗೆ ಇಳಿದ ನಾಕವೋ ಆಹಹಾ.ಓಹೋ
ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ
ಆಹಹಾ ಆಹಹಾ ಓ ಹೊ ಹೋ.. ಓ ಹೊ ಹೋ ..ಓಹೋ.ಹೋ..

More from Filmibeat

English summary
Here is the Kannada lyrics of 1970's box office-hit Gandada Gudi. Kannada Matinee Idol Dr.Rajkumar is a range forest officer who goes to the Nagarhole National forest to protect the natural resources. The film has brilliant lyrics by Chi Udayashankar, Enjoy the song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X