twitter
    For Quick Alerts
    ALLOW NOTIFICATIONS  
    For Daily Alerts

    ಸಿರಿಕಂಠದ ಗಾಯಕ ಪಿ ಬಿ ಶ್ರೀನಿವಾಸ್ ಬೆಳ್ಳಿ ಹೆಜ್ಜೆ

    By Rajendra
    |

    P B Srinivas at Belli Hejje
    ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಡುತ್ತಿರುವ ವಿಭಿನ್ನ ಕಾರ್ಯಕ್ರಮ 'ಬೆಳ್ಳಿ ಹೆಜ್ಜೆ'. ಈ ಬಾರಿ ಈ ವಿಭಿನ್ನ ಕಾರ್ಯಕ್ರಮಕ್ಕೆ ಸಿರಿಕಂಠದ ಗಾಯಕ ಪಿ ಬಿ ಶ್ರೀನಿವಾಸ್ ಆಗಮಿಸುತ್ತಿದ್ದಾರೆ. ಅವರೊಂದಿಗೆ ಶನಿವಾರ (ಸೆ.4) ಸಂವಾದ ನಡೆಸಬಹುದು. ಅವರ ಪೂರ್ಣ ಹೆಸರು ಪ್ರತಿವಾದಿ ಭಯಂಕರ ಶ್ರೀನಿವಾಸ್.

    ಕನ್ನಡ ಚಿತ್ರಗೀತೆಗಳಿಗೆ ಮಾಧುರ್ಯದ ಸ್ಪರ್ಶ ನೀಡಿದ ಪಿ ಬಿ ಶ್ರೀನಿವಾಸ್ ಕಂಠದಿಂದ 3450ಕ್ಕೂ ಹೆಚ್ಚು ಕನ್ನಡ ಗೀತೆಗಳನ್ನು ಹೊರಹೊಮ್ಮಿವೆ. ತಮ್ಮ ಶಾಲಾ ದಿನಗಳಲ್ಲೆ ಸಂಗೀತದ ಮೋಹ ಬೆಳಸಿಕೊಂಡವರು ಪಿ ಬಿ ಶ್ರೀನಿವಾಸ್. ಓದಿದ್ದು ಬಿ.ಕಾಂ ಆದರೆ ಹೆಸರು ಮಾಡಿದ್ದು ಸಂಗೀತ ಕ್ಷೇತ್ರದಲ್ಲಿ.

    ಸ್ವತಃ ಗೀತರಚನೆಕಾರರಾದ ಪಿಬಿಎಸ್ ಕನ್ನಡ ಮಾತ್ರವಲ್ಲದೆ ಎಂಟು ಭಾಷೆಯ ಗೀತೆಗಳನ್ನು ಹಾಡಿದ್ದಾರೆ. ಸಂಸ್ಕೃತದಲ್ಲಿ ಅನೇಕ ಕಾವ್ಯಗಳನ್ನು ರಚಿಸಿ ಅವಕ್ಕೆ ಧ್ವನಿ ನೀಡಿದ್ದಾರೆ. ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗೆ ಅವರು ಭಾಜನರಾದವರು. ಬೆಳ್ಳಿ ಹೆಜ್ಜೆ ಕಾರ್ಯಕ್ರಮದ ಸ್ಥಳ: ಬಾದಾಮಿ ಹೌಸ್, ಮಹಾನಗರ ಪಾಲಿಕೆ ಪ್ರಧಾನ ಕಚೇರಿ ಎದುರು. ಸಮಯ ಸಂಜೆ 4.30ಕ್ಕೆ ಸರಿಯಾಗಿ.

    ಸತಿ ಸಾವಿತ್ರಿ, ಬಂಗಾರದ ಹೂವು, ಸೋತು ಗೆದ್ದವಳು, ನಮ್ಮ ಸಂಸಾರ, ಸಾಕ್ಷಾತ್ಕಾರ, ಕಸ್ತೂರಿ ನಿವಾಸ, ಕುಲಗೌರವ, ಭಲೇ ಹುಚ್ಚ, ಸಿಪಾಯಿ ರಾಮು, ಕ್ರಾಂತಿವೀರ, ಬಂಗಾರದ ಮನುಷ್ಯ, ಎರಡು ಕನಸು, ಭಕ್ತ ಕುಂಬಾರ...ಹೀಗೆ ಅವರ ಹಿನ್ನೆಲೆ ಗಾಯನದಲ್ಲಿ ಮೂಡಿಬಂದ ಚಿತ್ರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

    Saturday, September 4, 2010, 11:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X