ಹಿನ್ನೆಲೆ ಗಾಯಕಿ ಸುನೀತಾಗೆ ಅಸಭ್ಯ ಕರೆಗಳ ಕಿರಿಕಿರಿ

By Rajendra

Singer Sunitha
ಕನ್ನಡ, ತೆಲುಗು, ತಮಿಳು ಚಿತ್ರಗಳ ಜನಪ್ರಿಯ ಹಿನ್ನೆಲೆ ಗಾಯಕಿ ಸುನೀತಾ ಅವರಿಗೆ ಕಳೆದ ಎರಡು ದಿನಗಳಿಂದ ಅನುಚಿತ ಕರೆಗಳು ಕಿರಿಕಿರಿ ಶುರುವಾಗಿದೆ. ತೆಲುಗು ನಟ ನಾಗಾರ್ಜುನ ಪತ್ರಕರ್ತೆಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಆಕೆಗೆ ಕೊಲೆ ಬೆದರಿಕೆ ಹಾಕಿದ ಸುದ್ದಿ ಟಾಲಿವುಡ್‌ನಲ್ಲಿ ಟಾಂ ಟಾಂ ಆದ ಮೇಲೆ ಸುನೀತಾಗೆ ಅಸಭ್ಯ ಕರೆಗಳ ಕಾಟ ಶುರುವಾಗಿದೆ.

ಪತ್ರಕರ್ತೆಗೆ ನಟ ನಾಗಾರ್ಜುನ ಆವಾಜ್ ಹಾಕುವುದಕ್ಕೂ ಹಿನ್ನೆಲೆ ಗಾಯಕಿ ಸುನೀತಾಗೂ ಏನು ಸಂಬಂಧ? ಎಂಬ ಗಂಭೀರ ಪ್ರಶ್ನೆ ಸ್ವತಃ ಸುನೀತಾ ಅವರಿಗೂ ಅರ್ಥವಾಗಿಲ್ಲವಂತೆ. ಆದರೆ ನಾಗಾರ್ಜುನ ಆವಾಜ್ ಹಾಕಿದ ಪತ್ರಕರ್ತೆ ಹೆಸರು ಸುನೀತಾ ಚೌಧರಿ.

ನಾಗಾರ್ಜುನ ಫ್ಯಾನ್ಸ್ ಸುನೀತಾಗೆ ಕರೆಮಾಡಿ ಅಸಭ್ಯವಾಗಿ ಮಾತನಾಡುತ್ತಿದ್ದಾರಂತೆ. ಬಹುಶಃ ಅವರು ಪತ್ರಕರ್ತೆ ಸುನೀತಾಗೆ ಬದಲಾಗಿ ಗಾಯಕಿ ಸುನೀತಾ ಎಂದು ತಪ್ಪಾಗಿ ಅರ್ಥೈಸಿ ಕರೆಗಳನ್ನು ಮಾಡುತ್ತಿದ್ದಾರೋ ಏನೋ ಗೊತ್ತಾಗಿಲ್ಲ. ಒಟ್ಟಿನಲ್ಲಿ ಅವರ ಸುನೀತಾ ಮುಗ್ಧ ಮನಸ್ಸಿಗಂತೂ ನೋವಾಗಿದೆ.

ಅಂದಹಾಗೆ ಸುನೀತಾ ಅವರ ಕಂಠ ಕೇಳಲು ಎಷ್ಟು ಸುಮಧುರವಾಗಿದೆಯೋ ಅವರು ಕೂಡ ಅಷ್ಟೇ ಚೆಲುವಿನ ಬೆಡಗಿ. ಕನ್ನಡದಲ್ಲಿ ಭೂಮಿಗೀತೆ, ಸವಿಸವಿ ನೆನಪು, ಅಭಯ್, ಚೆಲುವೆಯೇ ನಿನ್ನೇ ನೋಡಲು ಮುಂತಾದ ಚಿತ್ರಗಳಲ್ಲಿ ಹಾಡಿದ್ದಾರೆ. (ಏಜೆನ್ಸೀಸ್)

More from Filmibeat

English summary
Playback singer Suneetha has been getting many wrong calls over the past two days. Well, the reason for that is Nagarjuna and his controversy with journalist Sunitha Chowdary. The moment many heard about a clash between Nag and Sunitha, many presumed it was singer Suneetha and started calling her to know the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X