»   » ಜೀ ಕನ್ನಡದಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ಫೈನಲ್

ಜೀ ಕನ್ನಡದಲ್ಲಿ ಸರಿಗಮಪ ಲಿಟ್ಲ್ ಚಾಂಪ್ಸ್ ಫೈನಲ್

Subscribe to Filmibeat Kannada

ಜೀ ಕನ್ನಡದ ಕಾರ್ಯಕ್ರಮ ಪುಟಾಣಿಗಳ ಸರಿಗಮಪ ಲಿಟ್ಲ್ ಚಾಂಪ್ಸ್ ಸಂಗೀತ ಸ್ಪರ್ಧೆಯ ಅಂತಿಮ ಸುತ್ತು ಭಾನುವಾರ ಅಕ್ಟೋಬರ್ 5ರಂದು ಸಂಜೆ 4.30ರಿಂದ ಪ್ರಸಾರವಾಗಲಿದೆ. ಕಾರ್ಯಕ್ರಮದ ಅಂತಿಮ ಸುತ್ತಿಗೆ ಮೂರು ಹುಡುಗರು ಹಾಗೂ ಮೂರು ಹುಡುಗಿಯರು ಆಯ್ಕೆಯಾಗಿದ್ದಾರೆ. ಅಂತಿಮ ಹಣಾಹಣಿಯಲ್ಲಿ ಮನೋಜವಂ, ಅಶ್ವಿನ್, ಮಧ್ವೇಶ್ ಹಾಗೂ ಕಾವ್ಯ, ಶಿಲ್ಪ, ಪಲ್ಲವಿ ತಮ್ಮ ಅದ್ಭುತ ಗಾಯನದಿಂದ ಜನಮನಸೂರೆಗೊಳ್ಳಲಿದ್ದಾರೆ. ವಿಶೇಷ ಅತಿಥಿಯಾಗಿ ವಾಣಿ ಜಯರಾಂ ಭಾಗವಹಿಸಲಿದ್ದಾರೆ.

ಜೀ ಕನ್ನಡ, ಸರಿಗಮಪ ಲಿಟ್ಲ್‌ಚಾಂಪ್ ಸ್ಪರ್ಧೆಗೆ ಕರ್ನಾಟಕದಾದ್ಯಂತದಿಂದ ಪುಟಾಣಿ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಂಡಿತ್ತು. ಇವರಲ್ಲಿ ಈಗ ಆರು ಜನರನ್ನು ಅಂದರೆ ಮೂರು ಜೋಡಿಗಳನ್ನು ಫೈನಲ್‌ಗೆ ಆಯ್ಕೆ ಮಾಡಲಾಗಿದೆ. ಅಂತಿಮ ಸುತ್ತಿಗೆ ಇಬ್ಬರು ಹುಡುಗರು ಮತ್ತು ಇಬ್ಬರು ಹುಡುಗಿಯರನ್ನು ಮಾತ್ರ ಆಯ್ಕೆ ಮಾಡಬೇಕಾಗಿತ್ತು. ಆದರೆ, ಕಣದಲ್ಲಿದ್ದ ಆರು ಮಕ್ಕಳೂ ಅತ್ಯುತ್ತಮ ಹಾಡುತ್ತಿದ್ದರಿಂದ ಆರು ಜನರನ್ನೂ ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ.

ಕಂಡು ಕೇಳರಿಯದ ಬಹುಮಾನ : ವಿಜೇತರಿಗೆ 40x60 ನಿವೇಶನ, ಫಸ್ಟ್ ರನ್ನರ್ ಅಪ್ ಜೋಡಿಗೆ 30x40 ನಿವೇಶನ ಹಾಗೂ ಎರಡನೇ ರನ್ನರ್ ಅಪ್ ಜೋಡಿಗೆ ಸುಮಾರು ಮೂರು ಲಕ್ಷ ಮೌಲ್ಯದ ಶಿಷ್ಯವೇತನ ನೀಡಲಾಗುತ್ತದೆ. ಇಂಥ ರಿಯಾಲಿಟಿ ಶೋಗಳಲ್ಲಿ ಗೆದ್ದವರಿಗೆ, ಅದರಲ್ಲೂ ಮಕ್ಕಳಿಗೆ ನಿವೇಶನಗಳನ್ನು ನೀಡಿದ ನಿದರ್ಶನ ಸಿಗಲಿಕ್ಕಿಲ್ಲ.

ರಿಯಾಲಿಟಿ ಶೋಗಳಿಗೆ ಪ್ರಸಿದ್ಧವಾಗಿರುವ ಜೀ ಕನ್ನಡ ಕರ್ನಾಟಕದ ಎಲೆಮರೆಯ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ನಿರತವಾಗಿದೆ. ವಾಹಿನಿಯ ಕಾಮಿಡಿ ಕಿಲಾಡಿಗಳು, ಕುಣಿಯೋಣು ಬಾರಾ ಮತ್ತು ಸರಿಗಮಪ ಕಲಾವಿದರಿಗೆ ಒಂದು ಉತ್ತಮ ವೇದಿಕೆಯಾಗಿದೆ ಎಂದು ಜೀ ಕನ್ನಡ ವ್ಯವಹಾರ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ಹೇಳಿದ್ದಾರೆ. ಸರಿಗಮಪ ಲಿಟ್ಲ್ ಚಾಂಪ್ಸ್ ಸ್ಫರ್ಧೆಯ ತೀರ್ಪುಗಾರರಾಗಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಗೂ ನಿರೂಪಕರಾಗಿ ಅರ್ಚನಾ ಉಡುಪ ಕಾರ್ಯನಿರ್ವಹಿಸುತ್ತಿದ್ದಾರೆ.

ಪೂರಕ ಓದಿಗೆ
ಸಂಗೀತದ ನೆಪದಲ್ಲಿ ಜಿದ್ದಿಗೆ ಬಿದ್ದ ಟಿವಿ ಮಾಧ್ಯಮ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada