For Quick Alerts
  ALLOW NOTIFICATIONS  
  For Daily Alerts

  ಶಿವನೊಲಿದರೆ ಭಯವಿಲ್ಲ! ಗತಿಯಾರುನಮಗಿಲ್ಲ

  By Staff
  |

  ಶಿವನೊಲಿದರೆ ಭಯವಿಲ್ಲ! ಶಿವನೆಂದರೆ ನಿರಾಕರಣ. ಈ ನಿರಾಕರಣದ ನಾಭಿಯಲ್ಲಿ ಮೊಳೆಯುವ ಸತ್ಯದ ಪೂರ್ಣಕುಂಭವೇ ಶಿವ. ಪ್ರತಿ ತಿಂಗಳೂ ಚತುರ್ದಶಿಯಂದು ಮಾಸ ಶಿವರಾತ್ರಿ. ಆದರೆ, ಮಾಘ ಕೃಷ್ಣ ಚತುರ್ದಶಿಯಂದು ಮಹಾಶಿವರಾತ್ರಿ. ಮಹಾಶಿವರಾತ್ರಿಯಂದು ಲಯಕರ್ತನಾದ ಶಿವ ಹುಟ್ಟಿದನೆಂಬ ನಂಬಿಕೆ ಕೆಲವರದು. ಇಲ್ಲ ಇಲ್ಲ, ಸಮುದ್ರ ಮಂಥನ ಕಾಲದಲ್ಲಿ ಶಿವನು ಹಾಲಾಹಲ ಕುಡಿದ ದಿನವೇ ಶಿವರಾತ್ರಿ ಎಂಬುದು ಇನ್ನು ಕೆಲವರ ವಾದ. ಮತ್ತೆ ಕೆಲವರು ಶಿವ - ಪಾರ್ವತಿಯನ್ನು ವರಿಸಿದ ದಿನ ಶಿವರಾತ್ರಿ ಎನ್ನುತ್ತಾರೆ. ಆದರೆ, ಶಿವರಾತ್ರಿಯ ದಿನ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ರಾತ್ರಿಯಿಡೀ ಪೂಜಿಸುವುದು ವಾಡಿಕೆ. ಇದಕ್ಕೆ ಬೇಡರ ಕಣ್ಣಪ್ಪನ ತ್ಯಾಗದ ಕತೆಯೂ ಪೂರಕವಾಗಿದೆ.

  ಡಾ.ರಾಜ್‌ಕುಮಾರ್ ನಟಿಸಿದ ಪ್ರ ಪ್ರಥಮ ಕನ್ನಡ ಚಲನಚಿತ್ರ 'ಬೇಡರ ಕಣ್ಣಪ್ಪ' ಬಿಡುಗಡೆಯಾಗಿದ್ದು1954ರಲ್ಲಿ. ಈ ಚಿತ್ರವನ್ನು ಗುಬ್ಬಿ ಕರ್ನಾಟಕ ಫಿಲಂಸ್ ನಿರ್ಮಿಸಿತ್ತು. ರಾಜ್‌ಕುಮಾರ್ ಹಾಗೂ ಪಂಡರೀಬಾಯಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಪೋಷಕ ಪಾತ್ರಗಳಲ್ಲಿ ಸಂಧ್ಯಾ, ರಾಜಾಸುಲೋಚನ, ಜಿ.ವಿ.ಅಯ್ಯರ್, ನರಸಿಂಹರಾಜು, ಹೆಚ್.ಆರ್.ಶಾಸ್ತ್ರಿ ನಟಿಸಿದ್ದರು. ಆರ್. ಸುದರ್ಶನಂ ಅವರ ಸಂಗೀತ, ಎಸ್.ಮಾರ್ಕಂಡೇಯ ಅವರ ಛಾಯಾಗ್ರಹಣ ಹಾಗೂ ಹೆಚ್.ಎಲ್.ಎನ್. ಸಿಂಹ ಅವರ ನಿರ್ದೇಶನದಲ್ಲಿ ಕಪ್ಪು-ಬಿಳುಪು ಚಿತ್ರ ಅದ್ಭುತವಾಗಿ ಮೂಡಿಬಂದಿತ್ತು. 50 ದಶಕದಲ್ಲೇ 'ಬೇಡರ ಕಣ್ಣಪ್ಪ' ಶತ ದಿನೋತ್ಸವವನ್ನು ಆಚರಿಸಿತ್ತು.

  ಶರಣು ಶಂಕರ ಶಂಭೋ
  ಓಂಕಾರನಾದ ರೂಪಾ
  ಮೊರೆಯ ನೀ ಆಲಿಸೀ
  ಪಾಲಿಸೋ ಸರ್ವೇಶಾ

  ಶಿವಪ್ಪ ಕಾಯೋ ತಂದೆ
  ಮೂರುಲೋಕ ಸ್ವಾಮಿ ದೇವಾ
  ಹಸಿವೆಯನ್ನು ತಾಳಲಾರೆ
  ಕಾಪಾಡೆಯ ಹರನೇ ಕಾಪಾಡೆಯಾ

  ಶಿವಪ್ಪ ಕಾಯೋ ತಂದೆ
  ಮೂರುಲೋಕ ಸ್ವಾಮಿ ದೇವಾ
  ಹಸಿವೆಯನ್ನು ತಾಳಲಾರೆ ಕಾಪಾಡೆಯಾ

  ಭಕ್ತಿಯಂತೆ ಪೂಜೆಯಂತೆ
  ಒಂದೂ ಅರಿಯೆ ನಾ
  ಭಕ್ತಿಯಂತೆ ಪೂಜೆಯಂತೆ
  ಒಂದೂ ಅರಿಯೆ ನಾ
  ಪಾಪವಂತೆ ಪುಣ್ಯವಂತೆ
  ಕಾಣೆನಯ್ಯ ನಾ
  ಪಾಪವಂತೆ ಪುಣ್ಯವಂತೆ
  ಕಾಣೆನಯ್ಯ ನಾ ಹರನೇ

  ಶಿವಪ್ಪ ಕಾಯೋ ತಂದೆ
  ಮೂರುಲೋಕ ಸ್ವಾಮಿ ದೇವಾ
  ಹಸಿವೆಯನ್ನು ತಾಳಲಾರೆ
  ಕಾಪಾಡೆಯಾ

  ಶುದ್ಧನಾಗಿ ಪೂಜೆಗೈವೆ
  ಒಲಿವೆಯಂತೆ ನೀ
  ಶುದ್ಧನಾಗಿ ಪೂಜೆಗೈವೆ
  ಒಲಿವೆಯಂತೆ ನೀ
  ಶುದ್ಧವೋ ಅಶುದ್ಧವೋ
  ನಾ ಕಾಣೆ ದೇವನೇ
  ಶುದ್ಧವೋ ಅಶುದ್ಧವೋ
  ನಾ ಕಾಣೆ ದೇವನೇ
  ನಾದವಂತೆ ವೇದವಂತೆ
  ಒಂದು ತಿಳಿಯೇ ನಾ
  ನಾದವಂತೆ ವೇದವಂತೆ
  ಒಂದು ತಿಳಿಯೇ ನಾ
  ಬೆಂದ ಜೀವ ನೊಂದು
  ಕೂಗೆ ಬಂದು ನೋಡೆಯಾ
  ಬೆಂದ ಜೀವ ನೊಂದು
  ಕೂಗೆ ಬಂದು ನೋಡೆಯಾ ಹರನೇ

  ಶಿವಪ್ಪ ಕಾಯೋ ತಂದೆ
  ಮೂರುಲೋಕ ಸ್ವಾಮಿ ದೇವಾ
  ಹಸಿವೆಯನ್ನು ತಾಳಲಾರೆ
  ಕಾಪಾಡೆಯಾ

  ಏಕಚಿತ್ತದಿ ನಂಬಿದವರ
  ನೀ ಸಾಕಿ ಸಲಹುವೆ ಎಂತಪ್ಪಾ
  ಏಕಚಿತ್ತದಿ ನಂಬಿದವರ
  ನೀ ಸಾಕಿ ಸಲಹುವೆ ಎಂತಪ್ಪಾ
  ಶೋಕವ ಹರಿಸುವ
  ದೇವ ನೀನಾದರೆ
  ಶೋಕವ ಹರಿಸುವ
  ದೇವ ನೀನಾದರೆ
  ಬೇಟೆಯ ತೋರೋ ಎನ್ನಪ್ಪಾ
  ಲೋಕವನಾಳುವ ನೀನಪ್ಪಾ
  ಬೇಟೆಯ ತೋರೋ ಎನ್ನಪ್ಪಾ
  ಲೋಕವನಾಳುವ ನೀನಪ್ಪಾ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X