»   » ಜಾಲಿಡೇಸ್ ನ ಹೃದಯಸ್ಪರ್ಶಿ ಗೀತೆ

ಜಾಲಿಡೇಸ್ ನ ಹೃದಯಸ್ಪರ್ಶಿ ಗೀತೆ

Subscribe to Filmibeat Kannada

ಜಾಲಿಡೇಸ್ ಧ್ವನಿಸುರಳಿ ಸಮಾರಂಭದಲ್ಲಿ ವೇದಿಕೆಯೇರಿ ಗಣ್ಯಾತಿಗಣ್ಯರು ಸಂಭ್ರಮಿಸಿದ್ದು ಹಳೆ ಸಂಗತಿ. ತಮಗೆ ವೇದಿಕೆ ಮೇಲೆ ಕೂರಲು ಗೆ ಸ್ಥಳಾವಕಾಶ ನೀಡದೆ ಅಪಮಾನ ಮಾಡಿದರು ಎಂದು ಚಿತ್ರ ಸಾಹಿತಿ ಕವಿರಾಜ್ ಗೋಳಾಡಿದ್ದು ನಡೆದು ಹೋಯಿತು. ಈ ಕಹಿ ಘಟನೆಯನ್ನು ಮರೆಯುವಂತೆ ಮಾಡುತ್ತದೆ ಅವರು ಈ ಚಿತ್ರಕ್ಕೆ ಬರೆದಿರುವ ಹಾಡುಗಳು.

ತೆಲುಗಿನ ಹ್ಯಾಪಿಡೇಸ್ ನ ಮೂಲ ಟ್ಯೂನ್ ಗಳನ್ನೇ ಕನ್ನಡದ ಜಾಲಿಡೇಸ್ ನಲ್ಲೂ ಬಳಸಿದ್ದರೂ ಸಾಹಿತ್ಯ ಮಾತ್ರ ಹೃದಯಸ್ಪರ್ಶಿಯಾಗಿದೆ. ಇದಕ್ಕೆ ಕವಿರಾಜ್ ರನ್ನು ನೀವು ಅಭಿನಂದಿಸಲೇ ಬೇಕು. ಕಳೆದು ಹೋದ ಕಾಲೇಜು ದಿನಗಳನ್ನು, ಮತ್ತೆ ಮತ್ತೆ ನೆನಸಿಕೊಳ್ಳುವಂತೆ ಮಾಡುತ್ತದೆ ಚಿತ್ರದ ಹಾಡುಗಳು. ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಹಾಡುಗಳು ಮಾತ್ರ ಯುವ ಜನರನ್ನೂ ಕಾಡುತ್ತಿರುವುದು ಸುಳ್ಳಲ್ಲ.

ಚಿತ್ರ: ಜಾಲಿಡೇಸ್
ಸಾಹಿತ್ಯ: ಕವಿರಾಜ್
ಸಂಗೀತ: ಮಿಕ್ಕಿ ಜೆ ಮೇಜರ್
ನಿರ್ದೇಶನ: ಎಂ.ಡಿ.ಶ್ರೀಧರ್

ರಕ್ತ ಸಂಬಂಧಗಳ ಮೀರಿದ ಬಂಧವಿದು
ಯಾವ ಬಿಂದುವಿನಲ್ಲಿ ಸಂಧಿಸಿಹುದು
ಚಾಚಿ ತೋಳುಗಳನ್ನು ಬಿಗಿದಪ್ಪಿಕೊಳ್ಳುವುದು
ನನ್ನ ಪ್ರತಿ ನೋವನ್ನು ತನ್ನದೆಂದು
ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು

ಓ my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ
ಓ my friend ನಮ್ಮ ಸ್ನೇಹವಿದು ಇರಲಿ ಶಾಶ್ವತ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಸೇರಿಕೊಂಡು ನಮ್ಮ ದಾರಿ
ಬದುಕು ಎಷ್ಟು ಚೆಂದವೆಂದು ಸಾರುತಿಹುದು ಸಾರಿ ಸಾರಿ
ನೀವು ನೀವು ಅಂತ ಶುರುವಾಯ್ತು ಮೊದಲು
ಲೊ ಲೊ ಅಂತ ಈಗ ಬದಲು
ನಮ್ಮ ನಡುವೆ ಇಲ್ಲ ಕೊಂಚ ಸಂಕೋಚವೂ

ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು
ಓ my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ
ಓ my friend ನಮ್ಮ ಸ್ನೇಹವಿದು ಇರಲಿ ಶಾಶ್ವತ

ಮಳೆಯು ಬರಲು ಕಾಗದಾನೇ ದೋಣಿ ಮಾಡಿ ಬಿಟ್ಟ ನೆನಪು
ನಿನ್ನ ಕಂಡು ಬಾಲ್ಯದೆಲ್ಲ ಆಟ ಮತ್ತೆ ಆಡೊ ಹುರುಪು
ತುಂಟ ತನವು ಸೇರಿ ನಮ್ಮ ಸಂಘದಲ್ಲಿ ಪಟ್ಟ ಖುಷಿಗೆ ಲೆಕ್ಕಎಲ್ಲಿ
ತಿಲಿಸೊ ಬಗೆಯೆ ಅರಿಯೆ ನಿನಗೆ ಧನ್ಯವಾದವೆ

ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು
ಓ my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ
ಓ my friend ನಮ್ಮ ಸ್ನೇಹವಿದು ಇರಲಿ ಶಾಶ್ವತ

ವಿ.ಸೂ: ತೆಲುಗಿನ ಮೂಲ ಹಾಡನ್ನು ಕನ್ನಡಕ್ಕೆ ಯಥಾವತ್ತಾಗಿ ಕಾಪಿ ಹೊಡೆದಿರುವುದರಿಂದ, ತೆಲುಗು ಹಾಡುಗಳನ್ನು ಕೇಳಿರುವವರಿಗೆ ಈ ಸಾಹಿತ್ಯ ಖಂಡಿತ ರುಚಿಸದು. ಮೊದಲ ಬಾರಿಗೆ ಕನ್ನಡದಲ್ಲಿ ಕೇಳುವವರಿಗೆ, ಸಾಹಿತ್ಯ ಮೆಚ್ಚುಗೆ ಆಗುವುದರಲ್ಲಿ ಸಂಶಯವಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada