'ಕಳ್ ಮಂಜ' ಆಡಿಯೋ ಬಂದಿದೆ ಕೇಳಿ ಆನಂದಿಸಿ!
ಕೋಮಲ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ 'ಕಳ್ ಮಂಜ' ಚಿತ್ರದ ಧ್ವನಿಸುರುಳಿ ಮಾರುಕಟ್ಟೆಗೆ ಬಂದಿದೆ. ಸದ್ಯಕ್ಕೆ 'ಕಳ್ ಮಂಜ' ಚಿತ್ರೀಕರಣಮುಗಿಸಿಕೊಂಡು ಚಿತ್ರಮಂದಿರಕ್ಕೆ ಬರಲು ಸಿದ್ಧತೆ ನಡೆಸಿದ್ದಾನೆ. ಈಗ ನಿರ್ಮಾಣೇತರ ಕೆಲಸಗಳಲ್ಲಿ ಕಳ್ ಮಂಜ ಬ್ಯುಸಿಯೋ ಬ್ಯುಸಿ. ಈ ಚಿತ್ರಕ್ಕೆ ಬಂಡವಾಳ ಹೂಡಿರುವವರು ಕೋಮಲ್ ಪತ್ನಿ ಅನಸೂಯ ಕುಮಾರ್.
ನವರಸ ನಾಯಕ ಜಗ್ಗೇಶ್ ಕೂಡ ಧ್ವನಿಸುರುಳಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರು ಮಾತನಾಡುತ್ತಾ, 'ಕಳ್ ಮಂಜ' ಚಿತ್ರ ಪ್ರೇಕ್ಷಕರನ್ನು ಖಂಡಿತ ಸೆಳೆಯುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಿರ್ಮಾಪಕರಾದ ಅಣಜಿ ನಾಗರಾಜ್, ಸೌಂದರ್ಯ ಜಗದೀಶ್, ಜೈ ಜಗದೀಶ್ ನಿರ್ದೇಶಕಿ ವಿಜಯ ಲಕ್ಷ್ಯ್ಮಿ ಸಿಂಗ್ ಸೇರಿದಂತೆ ಚಿತ್ರರಂಗದ ಬಹುತೇಕ ಮಂದಿ ಉಪಸ್ಥಿತರಿದ್ದರು.
ಈ ಚಿತ್ರವನ್ನು ಪ್ರಭಾಕರ್ ನಿರ್ದೇಶಿಸಿದ್ದು ಥ್ರಿಲ್ಲರ್ ಮಂಜು ಸಾಹಸ ಚಿತ್ರಕ್ಕಿದೆ. 'ಮಠ' ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್ ಕೂಡ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. ಉದಯ ತಾರಾ ಮತ್ತು ಐಶ್ವರ್ಯ ನಾಗ್ ಚಿತ್ರದ ಇಬ್ಬರು ನಾಯಕಿಯರು. ಅಂದಹಾಗೆ 'ಕಳ್ ಮಂಜ' ಚಿತ್ರ ಮಲಯಾಳಂನ 'ಚಂದಿಕಲ್ ಚಂದು' ಚಿತ್ರದ ರೀಮೇಕ್.
'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದಲ್ಲಿ ಬ್ಯುಸಿಯಾಗಿದ್ದರೂ 'ಕಳ್ ಮಂಜ' ಚಿತ್ರದಲ್ಲಿ ಗುರು ಪ್ರಸಾದ್ ಅಭಿನಯಿಸಿರುವುದು ವಿಶೇಷ. 'ನಂಬಿಕೆಗೆ ಇನ್ನೊಂದು ಹೆಸರು' ಎಂಬುದು ಚಿತ್ರದ ಅಡಿಬರಹ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಎಮಿಲ್ ಅವರು ಸಂಗೀತ ಸಂಯೋಜಿಸಿದ್ದಾರೆ.[ಕೋಮಲ್]


Click it and Unblock the Notifications











