ಧ್ವನಿಸುರುಳಿ ವಿಮರ್ಶೆ : ಸುದೀಪ್ ಅಭಿನಯದ ವಿಷ್ಣುವರ್ಧನ

ನಿರ್ದೇಶಕ: ಪಿ ಕುಮಾರ್
ಬ್ಯಾನರ್: ದ್ವಾರಕೀಶ್ ಮೂವೀಸ್
ಬಹು ನಿರೀಕ್ಷೆಯ ಸುದೀಪ್ ಅಭಿನಯದ, ಪ್ರಚಂಡ ಕುಳ್ಳ ದ್ವಾರಕೀಶ್ ನಿರ್ಮಾಣದ 'ವಿಷ್ಣುವರ್ಧನ' ಚಿತ್ರದ ಆಡಿಯೋ ರೈಟ್ಸ್ ಅಂತಾ ಭಾರೀ ಬೆಲೆಗೆನೂ ಮಾರಾಟವಾಗಿಲ್ಲ. ಕೇವಲ 35 ಲಕ್ಷ ರೂಪಾಯಿಗಳಿಗೆ ಅಶ್ವಿನಿ ಮಿಡಿಯಾ ನೆಟ್ವರ್ಕ್ ಆಡಿಯೋ ಹಕ್ಕನ್ನು ಪಡೆದಿತ್ತು. ಇಷ್ಟು ಕಮ್ಮಿ ಬೆಲೆಗೆ ಆಡಿಯೋ ರೈಟ್ಸ್ ಮಾರಾಟವಾಯಿತಲ್ಲ, ಹಾಗಿದ್ದರೆ ಚಿತ್ರದ ಹಾಡುಗಳು ಚೆನ್ನಾಗಿಲ್ವಾ, ವಿಮರ್ಶೆ ಓದಿ..
ದೊಡ್ಡ ಬಜೆಟ್ ನ ಚಿತ್ರವೊಂದಕ್ಕೆ ಬಹಳ ಅಪರೂಪ ಎನ್ನುವಂತೆ ಸೋನು ನಿಗಮ್ ಅಥವಾ ಶ್ರೇಯಾ ಘೋಷಾಲ್ ಅವರನ್ನು ಬಳಸಿ ಕೊಳ್ಳದಿರುವುದು ವಿಶೇಷ. ಆಲ್ಬಮ್ ನಲ್ಲಿ ಒಟ್ಟು ಐದು ಹಾಡುಗಳಿವೆ.
1. 123 ವಿಷ್ಣುವರ್ಧನ
ಹಾಡಿರುವವರು: ನವೀನ್ ಮಾಧವನ್
ಸಾಹಿತ್ಯ: ನಾಗೇಂದ್ರಪ್ರಸಾದ್
ಸಂಸ್ಕೃತ ಶ್ಲೋಕದಿಂದ ಶುರುವಾಗುವ ಈ ಹಾಡು ಫಾಸ್ಟ್ ಬೀಟ್ ನಲ್ಲಿದೆ. ಸಾವಿರ ಕೋಟಿ ಬೇಕು, ಸಣ್ಣದೊಂದು ಮನೆಬೇಕು ಮೈಸೂರು ಪ್ಯಾಲೇಸ್ ಸಾಕು. ಆಸೆಗೆ ಟ್ಯಾಕ್ಸ್ ಇಲ್ಲ. ನಾನೇ ಬೇರೆ ನನ್ನ ಸ್ಟೈಲೇ ಬೇರೆ ವಿಷ್ಣುದಾದ ಫ್ಯಾನ್ ನಾನು ಕರುನಾಡಿನ ಕಿಂಗ್ ನಾನೇನಾ, ಜಂತರ್ ಮಂತರ್ ಎಂದು ಸಾಗುವ ಈ ಹಾಡಿನ ಸಾಹಿತ್ಯ ಕ್ಯಾಚಿಯಾಗಿದೆ. ವಿಶಿಷ್ಟ ರೀತಿಯ ಸಾಹಿತ್ಯವಿರುವ ಈ ಹಾಡು ಬರೆದಿಟ್ಟು ಕೊಳ್ಳಿ ಹಿಟ್ ಆಗುವುದಂತೂ ಗ್ಯಾರಂಟಿ.
2. ಹೇಗಿದ್ದೆ ನಾನು
ಹಾಡಿರುವವರು: ವಿ ಹರಿಕೃಷ್ಣ
ಸಾಹಿತ್ಯ: ಕವಿರಾಜ್
ಮಾಯಾ ಮಾಯಾ, ಅಮ್ಮಮ್ಮಯಾ ಪ್ರೀತಿ ಮಾಯಾ ಹೇಳಿದ್ದೆ ನಾನು, ಹೆಂಗಿದ್ದೆ ನಾನು, ಎಲ್ಲಿ ಇದ್ದೆ ನೀನು, ಏನ್ ಮಾಡ್ದೆ ನೀನು.. ಹರಿಕೃಷ್ಣ ಹಾಡಿರುವ ಈ ಹಾಡಿನ ಟ್ಯೂನ್ ಸುದೀಪ್ ಅಭಿನಯದ ಇತ್ತೀಚಿನ ಕೆಂಪೇಗೌಡ ಚಿತ್ರದ ಒಂದು ಹಾಡಿನ ಟ್ಯೂನ್ ಇದ್ದ ಹಾಗಿದೆ. ವೆಸ್ಟರ್ನ್ ಶೈಲಿಯಲ್ಲಿರುವ ಈ ಹಾಡು ಸೈಕೋ ರಘು ದೀಕ್ಷಿತ್ ಬತ್ತಳಿಕೆಯಿಂದ ಬಂದ ಹಾಡೊಂದನ್ನು ನೆನಪಿಸುತ್ತದೆ.
3. ನಮ್ ರೂಟಲ್ಲಿ
ಹಾಡಿರುವವರು: ವಿಜಯ್ ಪ್ರಕಾಶ್, ಶಂಕರ್ ಮಹಾದೇವನ್, ಅನುರಾಧ ಭಟ್
ಸಾಹಿತ್ಯ: ಯೋಗರಾಜ್ ಭಟ್
ತಾನಾರೆ ತಾನ.. ರೋಡ ಹಂಪ್ ಬಂತಪ್ಪಾ.. ನಮ್ಮೂರಿಗೆ ಹೊಂಟ್ವಿ ಹೆಣ್ಣು ಮಕ್ಳು ಸಿಕ್ಕಿದ್ವು, ನಾವು ದಾರಿ ತಪ್ಪೋದಕೆ ಫೇಮಸ್, ಗೆಜ್ಜೆ ಸದ್ದು ಬಂದರೂ ಡೀಸೆಂಟ್ ಆಗಿದ್ವಿ ಹೀಗೆ ಸಾಗುವ ಹಾಡಿನ ಸಾಹಿತ್ಯ ಡಿಫರೆಂಟ್ ಆಗಿದೆ. ಗ್ರೂಪ್ ಸಾಂಗ್ ಹಾಡು ಇದಾಗಿದ್ದು, ಶಾಸ್ತ್ರೀಯ, ವೆಸ್ಟರ್ನ್ ಮಿಶ್ರಿತ ಸ್ಟೈಲ್ ನಲ್ಲಿದ್ದು ಮತ್ತೆ ಮತ್ತೆ ಕೇಳುವಂತಿದೆ. ಇಂತಹ ಹಾಡು ಬರೆಯುವುದರಲ್ಲಿ ನಿಸ್ಸೀಮರಾಗಿರುವ ಭಟ್ರು ಮತ್ತೆ ತನ್ನ ಕೈಚಳಕ ಮೆರೆದಿದ್ದಾರೆ.
4. ಎದೆಯೊಳಗೆ
ಹಾಡಿರುವವರು: ಟಿಪ್ಪು, ಸೌಮ್ಯ ರಾವ್
ಸಾಹಿತ್ಯ: ನಾಗೇಂದ್ರಪ್ರಸಾದ್
ಎದೆಯೊಳಗೆ ಗಿಟಾರ್ ಡಿಂಗ್ ಡಿಂಗ್ ಅನ್ನುತ್ತೆ. ಇವಳೆದುರು ನಿಂತಾಗ ಹಲ್ಲೆ ಹಾಡು ಕೇಳಿಸುತ್ತೆ,ಬೇಡ ಅನ್ನೋರು ಉನ್ತಾರೆ, ದೂರ ಹೋಗುವವರು ಉಂಟೆ ನೀನು ಎದುರು ಬಂದಾಗ.. ಡುಯಟ್ ಹಾಡು ಇದಾಗಿದ್ದು, ಟ್ಯೂನ್ ನಲ್ಲಿ ಅಂತ ವಿಶೇಷತೆ ಇಲ್ಲ.
5. ಯಾರಪ್ಪನ
ಹಾಡಿರುವವರು: ಲಕ್ಷ್ಮಿ ವಿಜಯ್
ಸಾಹಿತ್ಯ: ಯೋಗರಾಜ್ ಭಟ್
ಡಿಂಗ್ ಡಿಗಾನ.. ಯಾರ್ರಪ್ಪ್ ಗಂಟೆ ಆಗ್ಲಿ, ನೀನದಂತ ಬೇಕು ರೂಪಾಯಿ ಹೆಂಗೆ ಬರಲಿ, ಸುಮ್ನೆ ಎಣಿಸಿ ಇಟ್ಟು ಕೊಂಡಿರಬೇಕು, ಬಿಟ್ಟಿ ಕಾಸನ್ನು ಬಚ್ಚಿಟ್ಟು ಕೊಳ್ವವನು ಯಾರೂ ಇಲ್ಲ. ಐಟಂ ಸಾಂಗ್ ಸ್ಟೈಲ್ ನಲ್ಲಿರುವ ಈ ಹಾಡಿನ ಸಾಹಿತ್ಯ ಮತ್ತು ಟ್ಯೂನ್ ಮಸ್ತಾಗಿದೆ. ಚಿತ್ರದ ಮೂರು ಹಾಡುಗಳಂತೂ ಮಸ್ತಾಗಿದೆ. ಯಾವುದೇ ಮುಲಾಜಿಲ್ಲದೆ ಆಲ್ಬಮ್ ಖರೀದಿಸಬಹುದು.


Click it and Unblock the Notifications











