»   » ಮಾದೇಶ ಚಿತ್ರದ ಕಾಯ್ಕಿಣಿ ಸಾಹಿತ್ಯಕ್ಕೆ ಶ್ರೇಯಾ ಗಾನ

ಮಾದೇಶ ಚಿತ್ರದ ಕಾಯ್ಕಿಣಿ ಸಾಹಿತ್ಯಕ್ಕೆ ಶ್ರೇಯಾ ಗಾನ

Subscribe to Filmibeat Kannada

ಚಿತ್ರ : ಮಾದೇಶ
ಸಂಗೀತ : ಮನೋ ಮೂರ್ತಿ
ಸಾಹಿತ್ಯ : ಜಯಂತ್ ಕಾಯ್ಕಿಣಿ
ಗಾಯಕಿ : ಶ್ರೇಯಾ ಘೋಷಾಲ್

ಕನ್ನಡದ ಇತ್ತೀಚಿನ ಚಿತ್ರಗಳಲ್ಲಿ ಯುಗಳ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಹೆಸರುವಾಸಿಯಾಗಿರುವ ಸೋನು ನಿಗಂ ಹಾಗೂ ಶ್ರೇಯಾ ಘೋಷಾಲ್ ಅವರು ಪ್ರತ್ಯೇಕವಾಗಿ ಹಾಡಿರುವ ಲಹರಿ..ಲಹರಿ ಹಾಡು.. ಕೇಳುಗರನ್ನು ವಿಸ್ಮಿತಗೊಳಿಸಿ ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಮನೋಮೂರ್ತಿ ಹಾಗೂ ಜಯಂತ್ ಕಾಯ್ಕಿಣಿ ಜೋಡಿಯ ಮತ್ತೊಂದು ಸುಮಧುರ ಗೀತೆಯ ಸಾಹಿತ್ಯ ಇಲ್ಲಿದೆ.

ಲಹರಿ ಮೋಹ ಲಹರಿ ನನ್ನ ಮನವ ಸವರಿ
ಮೌನ ಮುರಿದಾಗಿದೆ ಮಾತು ಬರದಾಗಿದೆ
ಹೇಳು ಬರಲೇನು ನಿನ್ನೊಂದಿಗೆ
ಮೌನ ಮುರಿದಾಗಿದೆ ಮಾತು ಬರದಾಗಿದೆ
ಹೇಳು ಬರಲೇನು ನಿನ್ನೊಂದಿಗೆ
ಲಹರಿ ಭಾವ ಲಹರಿ ಹೃದಯ ಗರಿಯ ಗೆದರಿ
ಲೋಕ ಮರೆಯಾಗಿದೆ ನೋಟ ಸೆರೆಯಾಗಿದೆ
ಹೇಳು ಇರಲೇನು ನಿನ್ನೊಂದಿಗೆ
ಲೋಕ ಮರೆಯಾಗಿದೆ ನೋಟ ಸೆರೆಯಾಗಿದೆ
ಹೇಳು ಇರಲೇನು ನಿನ್ನೊಂದಿಗೆ
ಲಹರಿ ಮೋಹ ಲಹರಿ

ಒಮ್ಮೆ ಒಂದು ಸಲ ನೀನು ಸೋಕಿದರೆ ನಾನು ಪುಳಕಗಳ ಸಂಕಲನ
ನನ್ನ ರಾಗದ ಮನದ ಮಾತುಗಳ ಕಣ್ಣ ನೋಟದಲಿ ಸಂಚಲನ
ಅಂದಹಾಗೆ ನೀ ಅಂದವಾಗಿಯೇ ಚಂದಗಾಣಿಸೋ ಸಮ್ಮಿಲನ
ಚಂದ್ರ ಬಂದಾಗಿದೆ ಎಲ್ಲಾ ಅಂದಾಗಿದೆ ನೀ ನಡೆದಿರಲು ನನ್ನೊಂದಿಗೆ
ಲಹರಿ ಮೋಹ ಲಹರಿ ನನ್ನ ಮನವ ಸವರಿ
ಮೌನ ಮುರಿದಾಗಿದೆ ಮಾತು ಬರದಾಗಿದೆ
ಹೇಳು ಬರಲೇನು ನಿನ್ನೊಂದಿಗೆ
ಮೌನ ಮುರಿದಾಗಿದೆ ಮಾತು ಬರದಾಗಿದೆ
ಹೇಳು ಬರಲೇನು ನಿನ್ನೊಂದಿಗೆ

ನಿನ್ನ ಕಿರುನಗೆಯ ಸಣ್ಣ ದೀಪಗಳ ದಾರಿ ತೋರುತಿದೆ ಸಂಗಾತ
ಮತ್ತೆ ಮತ್ತೆ ನೀ ನನ್ನ ಕೂಗಿದರೆ ನನ್ನ ಪಾಲಿಗದು ಸಂಗೀತ
ನೋವು ನಲಿವುಗಳ ಲೆಖ್ಖ ಮೀರುವುದೇ ಜೀವದೊಲುಮೆಯ ಸಂಕೇತ
ನಲ್ಮೆ ಹಸುನಾಗಿದೆ ನಾಳೆ ಹೊಸದಾಗಿದೆ ನನ್ನ ಮರುಜನ್ಮ ನಿನ್ನೊಂದಿಗೆ
ಲಹರಿ ಭಾವ ಲಹರಿ ಹೃದಯ ಗರಿಯ ಗೆದರಿ
ಲೋಕ ಮರೆಯಾಗಿದೆ ನೋಟ ಸೆರೆಯಾಗಿದೆ
ಹೇಳು ಇರಲೇನು ನಿನ್ನೊಂದಿಗೆ
ಲೋಕ ಮರೆಯಾಗಿದೆ ನೋಟ ಸೆರೆಯಾಗಿದೆ
ಹೇಳು ಇರಲೇನು ನಿನ್ನೊಂದಿಗೆ
ಲಹರಿ ಮೋಹ ಲಹರಿ

ಮಾದೇಸ ಚಿತ್ರದ ನಾಯಕಿ ಸೋನು ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada