ದಕ್ಷಿಣ ಭಾರತದಲ್ಲೇ ಪರಮಾತ್ಮ ಹಾಡು ನಂಬರ್ ಒನ್!

ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯ, ಹರಿಕೃಷ್ಣ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳ ಬಗ್ಗೆ ಎಲ್ಲೆಡೆಯಲ್ಲೂ ಅತ್ಯತ್ತಮ ಪ್ರತಿಕ್ರಿಯೆ ಈಗಾಗಲೇ ವ್ಯಕ್ತವಾಗಿತ್ತು. ಸರಳ ಸಾಹಿತ್ಯ, ಸುಲಲಿತವಾದ ಸಂಗೀತ ಈ ಹಾಡುಗಳು ಜನಸಾಮಾನ್ಯರು ಮೆಚ್ಚಿ ಗುನುಗಿಸುವಂತೆ ಮಾಡಿದೆ. ಚಿತ್ರನೋಡುವುದಕ್ಕೂ ಮುನ್ನವೇ ಪ್ರೇಕ್ಷಕರಿಗೆ ಹಾಡುಗಳು ಬಾಯಿಪಾಠವಾದಂತಾಗಿದೆ.
ಇನ್ನೇನು ಚಿತ್ರ ಬಿಡುಗಡೆಕಾಣುತ್ತಿದೆ. ಜನರ ನಿರೀಕ್ಷೆಗೂ ಮೀರಿ ಸಿನಿಮಾ ಯಾವ ಮಟ್ಟಕ್ಕೆ ಓಡಬಹುದು ಎಂಬುದು ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಬಿಸಿಬಿಸಿ ಚರ್ಚೆಯ ವಿಷಯ. ಇದೀಗ ಟಾಪ್ ಸ್ಥಾನದಲ್ಲಿರುವ ನಿರ್ದೇಶಕ, ನಟ ಹಾಗೂ ಸಂಗೀತ ನಿರ್ದೇಶಕರ ಸಂಗಮ ಈ ಚಿತ್ರ ಎನ್ನುವುದು ಎಲ್ಲರಿಗೂ ಎಲ್ಲಿಲ್ಲದ ಕುತೂಹಲಕ್ಕೆ ಕಾರಣವಾಗಿದೆ. ಉತ್ತರಕ್ಕಾಗಿ ಕೆಲವೇ ದಿನ ಕಾಯಬೇಕಷ್ಟೇ!
More from Filmibeat
English summary
Sandalwood most expectation movie Paramathma's Songs became No.1 in South India on Nokia Online Report. Audio Super Hit in every corner. The Movie is releasing very very shortly and will be give answer to the expectation of all.


Click it and Unblock the Notifications











