twitter
    For Quick Alerts
    ALLOW NOTIFICATIONS  
    For Daily Alerts

    ಮಾಡೆಲಿಂಗ್ ಕ್ಷೇತ್ರಕ್ಕೆ ಶ್ರೇಯಾ ಘೋಷಾಲ್ ಬೆಕ್ಕಿನ ಹೆಜ್ಜೆ

    By Rajendra
    |

    Shreya Ghoshal
    ಜನಪ್ರಿಯ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಕಂಠದಷ್ಟೇ ಸೊಗಸಾಗಿದೆ ಅವರ ಮುದ್ದು ಮುಖ. ತೆರೆಯ ಮೇಲೆ ಇವರು ಕಾಣಸಿಗುವುದು ಬಲು ಅಪರೂಪ. ಈಗವರು ಮಾಡೆಲಿಂಗ್ ಕ್ಷೇತ್ರಕ್ಕೆ ಅಡಿಯಿಟ್ಟಿದ್ದು ಚಿನ್ನಾಭರಣ ಜಾಹೀರಾತಿನಲ್ಲಿ ಕಾಣಿಸಲಿದ್ದಾರೆ.

    ಇಪ್ಪತ್ತೆಂಟರ ಹರೆಯಕ್ಕೇ ಶ್ರೇಯಾ ಪ್ರತಿಭೆಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಾಯವಾಗಿವೆ. 41 ಸೆಕೆಂಡುಗಳ ಈ ಜಾಹೀರಾತು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿದೆ. ಎಲ್ಲಾ ಭಾಷೆಯ ಜಾಹೀರಾತಿಗೆ ಅವರದೇ ಕಂಠ ಎಂಬುದು ವಿಶೇಷ.

    "ತಾನು ಇದೇ ಮೊದಲ ಬಾರಿಗೆ ಜಾಹೀರಾತಿನಲ್ಲಿ ಅಭಿನಯಿಸುತ್ತಿದ್ದೇವೆ. ನಿಜಕ್ಕೂ ತುಂಬಾ ಸಂತಸವಾಗುತ್ತಿದೆ" ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶ್ರೇಯಾ ಹೇಳಿಕೊಂಡಿದ್ದಾರೆ. ಚಿನ್ನದಂತೆ ಸಂಗೀತ ಕೂಡ ಶುದ್ಧವಾದದ್ದು ಎಂಬುದು ಜಾಹೀರಾತಿನ ಡೈಲಾಗ್. ಜಾಹೀರಾತು ಕ್ಲಿಕ್ ಆದರೆ ಶ್ರೇಯಾ ಮುಂದಿನ ಭವಿಷ್ಯ ಮತ್ತೊಂದು ತಿರುವು ಪಡೆಯಲಿದೆ. (ಏಜೆನ್ಸೀಸ್)

    English summary
    Renowned playback singer Shreya Goshal has got a prime offer to take part in the Jewelry ad! The ad in Kannada, Hindi, Tamil, Telugu and Malayalam is of 41 seconds duration. The pure gold I like as much as I like music she delivers a dialogue.
    Friday, August 5, 2011, 15:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X