»   »  ಮಾರುಕಟ್ಟೆಗೆ ಬಂದೇ ಬರ್ತಾಳೆ ಧ್ವನಿಸುರುಳಿ

ಮಾರುಕಟ್ಟೆಗೆ ಬಂದೇ ಬರ್ತಾಳೆ ಧ್ವನಿಸುರುಳಿ

Subscribe to Filmibeat Kannada
Supretha in Bandhe Barthale
'ಬಂದೇ ಬರ್ತಾಳೆ' ಚಿತ್ರದ ನಿರ್ಮಾಪಕ ಎಂ.ರೆಡ್ಡಿ ಮಟ ಮಟ ಮಧ್ಯಾಹ್ನ ಪತ್ರಿಕಾಗೋಷ್ಠಿ ಆಯೋಜಿದ್ದರು. ಚಿತ್ರಕಥೆ ಏನು ಎಂದು ಸುದ್ದಿ ಮಿತ್ರರು ಕೇಳದಿದ್ದರೂ ನಿರ್ಮಾಪಕರು ಸಂಪೂರ್ಣ ಕಥೆಯನ್ನು ಹೇಳಿದರು. ಇದೇ ಸಂದರ್ಭದಲ್ಲಿ ಬಂದೇ ಬರ್ತಾಳೆ ಚಿತ್ರದ ಧ್ವನಿಸುರುಳಿ ಸಹ ಬಿಡುಗಡೆಯಾಯಿತು.

ಗುತ್ತಿಗೆದಾರರು ಹಾಗೂ ರಿಯಲ್ ಎಸ್ಟೇಟ್ ವ್ಯಾಪಾರಿಯಾದ ಅವರು ಮಾತನಾಡುತ್ತಾ, ಬಂದೇ ಬರ್ತಾಳೆ ಅಪ್ರಾಪ್ತ ವಯಸ್ಕರ ಪ್ರೇಮ, ಬಾಲ್ಯ ವಿವಾಹ ಹಾಗೂ ಕಾನೂನು ಕಟ್ಟಳೆಗಳನ್ನು ಒಳಗೊಂಡ ಕಥೆ. ಈ ಚಿತ್ರ ಯಶಸ್ವಿಯಾದರೆ ಮುಂದೆ ಮತ್ತ್ತಷ್ಟು ಸಾಮಾಜಿಕ ಚಿತ್ರಗಳನ್ನು ನಿರ್ಮಿಸುವುದಾಗಿ ಅವರು ತಿಳಿಸಿದರು.

ಗೊರವನ ಲಕ್ಷ್ಮಿ ದೇವಸ್ಥಾನದ ಪ್ರಧಾನ ಅರ್ಚಕ ಪ್ರಸನ್ನ ಕುಮಾರ್ ಚಿತ್ರದ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಭಕ್ತಿ ಗೀತೆಗಳ 'ಶುಭ ಮಂಗಳ ಶ್ರೀ ಲಕ್ಷ್ಮಿ' ಸಿಡಿಯನ್ನು ಬಿಡುಗಡೆ ಮಾಡಲಾಯಿತು. ಬಂದೇ ಬರ್ತಾಳೆ ಚಿತ್ರವನ್ನು ದೇವದಾಸ್ ನಿರ್ದೇಶಿಸುತ್ತಿದ್ದಾರೆ. ಸ್ಲಂ ಹುಡುಗನ ಪಾತ್ರದಲ್ಲಿ ಸೂರ್ಯ ನಟಿಸುತ್ತಿದ್ದಾರೆ. ಚಿತ್ರದ ನಾಯಕಿ ಸುಪ್ರೀತಾ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada