twitter
    For Quick Alerts
    ALLOW NOTIFICATIONS  
    For Daily Alerts

    ಎದೆತುಂಬಿ ಮತ್ತೆ ಹಾಡಲಿದ್ದಾರೆ ಗಾಯಕಿ ಕೆ ಎಸ್ ಚಿತ್ರಾ

    By Rajendra
    |

    Singer KS Chitra
    ಇಷ್ಟು ದಿನ ಮೌನವಾಗಿದ್ದ ದಕ್ಷಿಣ ಭಾರತದ ಕೋಗಿಲೆ ಕೆ ಎಸ್ ಚಿತ್ರಾ ಈಗ ಮತ್ತೆ ಹಾಡಲಿದ್ದಾರೆ. ತಮ್ಮ ಏಕೈಕ ಪುತ್ರಿ ನಂದನಾ(8) ಈಜುಕೊಳದಲ್ಲಿ ಮುಳುಗಿ ದುರಂತ ಸಾವಪ್ಪಿದ ಬಳಿಕ ಮೌನಕ್ಕೆ ಶರಣಾಗಿದ್ದರು. ಈಗ ಮಾನಸಿಕವಾಗಿ ಚೇರಿಸಿಕೊಂಡಿರುವ ಅವರು ಎದೆತುಂಬಿ ಹಾಡಿದ್ದಾರೆ.

    ಇತ್ತೆಚೆಗೆ ಅವರು ಚೆನ್ನೈನಲ್ಲಿ ಸಾಂಗ್ ರೆಕಾರ್ಡಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಮಲಯಾಳಂನ 'ಇಷ್ಟಂ + ಇಷ್ಟಂ' ಚಿತ್ರದ ಹಾಡೊಂದನ್ನು ಹಾಡಿದ್ದಾರೆ. ಈ ಹಾಡನ್ನು ಅವರು ತಮ್ಮ ದಿವಂಗತ ಮಗಳು ನಂದನಾಗೆ ಅರ್ಪಿಸಿದ್ದಾರೆ. ಮಲಯಾಳಂ ಸಂಗೀತ ನಿರ್ದೇಶಕ ಎಂ ಜಿ ಶ್ರೀಕುಮಾರ್ ಅವರ ಸಂಗೀತ ಸಂಯೋಜನೆಯಲ್ಲಿ ಈ ಹಾಡನ್ನು ಧ್ವನಿಮುದ್ರಿಸಿಕೊಳ್ಳಲಾಗಿದೆ.

    ಚಿತ್ರಾ ಮತ್ತು ವಿಜಯಶಂಕರ್ ಅವರು ಮದುವೆಯಾದ ಎಂಟು ವರ್ಷಗಳ ಬಳಿಕ ಮಗಳು ನಂದನಾ ಜನಿಸಿದ್ದರು. ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಡುವ ಸಲುವಾಗಿ ಚಿತ್ರಾ ಅವರು ತಮ್ಮ ತಂಡದೊಡನೆ ದುಬೈಗೆ ಹೋಗಿದ್ದರು. ಆಗ ಅವರ ಮಗಳು ಈಜುಕೊಳದಲ್ಲಿ ಮುಳುಗಿ ಸಾವಪ್ಪಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Playback singer K.S. Chitra has come back to the world of music, after the accident, which led to parting her only daughter Nandhana, for a song recorded in Vadapalani Krishna D.G. Design studio at Chennai last day. She dedicated the song to Nandhana. Singer and music director M.G. Sree Kumar gave her a lullaby for the film Ishtam+ Ishtam', directed by Jayachandran Ailara.
    Thursday, July 7, 2011, 17:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X