twitter
    For Quick Alerts
    ALLOW NOTIFICATIONS  
    For Daily Alerts

    ಪುಕ್ಕಟೆಯಾಗಿ ಪಡೆಯಿರಿ ಮಂದಹಾಸ ಧ್ವನಿಸುರುಳಿ

    By Rajendra
    |

    ಹೆಸರಿಗೆ ತಕ್ಕಂತೆ ಪ್ರೇಕ್ಷಕರ ಮುಖದಲ್ಲಿ ಮಂದಹಾಸ ಮೂಡಿಸಲಿದೆ 'ಮಂದಹಾಸ' ಧ್ವನಿಸುರುಳಿ. ಕಾರಣ ಚಿತ್ರದ ಧ್ವನಿಸುರುಳಿಯನ್ನು ಪುಕ್ಕಟೆಯಾಗಿ ನೀಡಲು ಚಿತ್ರದ ನಿರ್ಮಾಪಕ ಬಸವಾರೆಡ್ಡಿ ಮುಂದಾಗಿದ್ದಾರೆ. ಈ ಧ್ವನಿಸುರುಳಿ ಅವರದೇ ಹೊಸ ಆಡಿಯೋ ಕಂಪನಿ ಅದ್ವಿಕ್ ಆಡಿಯೋ ಮೂಲಕ ಮಾರುಕಟ್ಟೆಗೆ ದಾಂಗುಡಿಯಿಟ್ಟಿದೆ.

    ಮುದ್ರಣ ಮಾಧ್ಯಮ, ದೂರದರ್ಶನ ಮತ್ತು ರೇಡಿಯೋ ವಾಹಿನಿಗಳ ಮೂಲಕ 'ಮಂದಹಾಸ' ಧ್ವನಿಸುರುಳಿಯನ್ನು ಉಚಿತವಾಗಿ ವಿತರಿಸಲು ಮುಂದಾಗಿರುವುದಾಗಿ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕೆ ಎಂ ವೀರೇಶ್ ತಿಳಿಸಿದ್ದಾರೆ. ಒಟ್ಟು 30,000 ಆಡಿಯೋ ಸಿಡಿಗಳನ್ನು ಉಚಿತವಾಗಿ ವಿತರಿಸಲು ಸಿದ್ಧತೆ ನಡೆದಿದೆ.

    ಚಿತ್ರದ ಹಾಡುಗಳು ಜನಪ್ರಿಯವಾಗುವುದರ ಜೊತೆಗೆ ಚಿತ್ರಕ್ಕೂ ಉತ್ತಮ ಪ್ರಚಾರ ಸಿಗುತ್ತದೆ ಎಂಬುದು ವೀರೇಶ್ ಅವರ ಲೆಕ್ಕಾಚಾರ. ಅಂದಹಾಗೆ 'ಮಂದಹಾಸ' ಚಿತ್ರಕ್ಕೆ ಆಕ್ಷನ್,ಕಟ್ ಹೇಳುತ್ತಿರುವುದು ರಾಜೇಶ್ ನಾಯರ್. ವೀರ್ ಸಮರ್ಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ತಾರಾಬಳಗದಲ್ಲಿ ಹೊಸಬರಾದ ಚೇತನ್, ನಿಕ್ಕಿ, ರಾಕೇಶ್, ಅಲೋಕ್ ಅಭಿನಯಿಸಿದ್ದಾರೆ.

    English summary
    Mandahaasa audio cds will be distributed free of cost. Around 30,000 audio albums are released to people directly through Print media, Television channels and also Radio Channels. Veera Samarth has scored music.
    Tuesday, December 7, 2010, 17:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X