ಹರಿಕೃಷ್ಣರ 'ಹರಿಮೋನಿಯಮ್ ಬೀಟ್ಸ್' ಸರಿಗಮಪ

ಇಂತಹ ಹರಿಕೃಷ್ಣ ಸಂಗೀತ ಬಿಟ್ಟು ಹೊಸದೊಂದು ವಿಷಯಕ್ಕೆ ಸುದ್ದಿಯಾಗಿದ್ದಾರೆ. ಅವರೀಗ ನಿರ್ಮಾಪಕ ಆಗುತ್ತಿದ್ದಾರೆ. ಅವರ ಬ್ಯಾನರ್ ಹೆಸರು 'ಹರಿಮೋನಿಯಮ್ ಬೀಟ್ಸ್'. ಹಾರ್ಮೋನಿಯಮ್ ಎಂಬ ಪದಕ್ಕೆ ಹತ್ತಿರವಾಗಿದ್ದರಿಂದಲೋ ಏನೋ ಕೇಳುವುದಕ್ಕೆ ಹಿತವಾಗಿದೆ. ಹರಿಕೃಷ್ಣರ ವೃತ್ತಿಗೂ ಹತ್ತಿರವಾಗಿದೆ. ಅದು ಜನರ ಕಿವಿಗೆ 'ಹರಿಮೇನಿಯಾ' ಎಂದು ಕೇಳಿದರೂ ಸರಿಯೇ.
ಮೊದಲು ಯಾವ ಸಿನಿಮಾ ಶುರು ಮಾಡುತ್ತಾರೆ? ನಿರ್ದೇಶಕರು ಯಾರು, ನಟ-ನಟಿಯರು ಯಾರು, ಯಾವಾಗ? ಮುಂತಾದ ಪ್ರಶ್ನೆಗಳಿಗೆ ಇನ್ನೂ ಅವರಿಂದ ಉತ್ತರ ಬಂದಿಲ್ಲ. ಸದ್ಯಕ್ಕೆ ಅವರ ಸಂಗೀತ ನಿರ್ದೇಶನದ ಚಿತ್ರ 'ವಿಷ್ಣುವರ್ಧನ' ಬಿಡುಗಡೆ ಕ್ಷಣ ಸಮೀಪಿಸಿದೆ. ಅದನ್ನು ಚೆನ್ನಾಗಿ ಮಾಡಿ ಮುಗಿಸಿ ತೃಪ್ತಿಯಲ್ಲಿರುವ ಹರಿಕೃಷ್ಣ, ತಮ್ಮ ಮುಂದಿನ ಯೋಜನೆ ಬಗ್ಗೆ ಯೋಚಿಸುತ್ತಾ ತಣ್ಣಗೆ ನಗುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)
English summary
Music Director Harikrishna starts Production House, under the banner name Harimoniyam Beets.


Click it and Unblock the Notifications