ಕೊಲ್ಲೂರಿನಲ್ಲಿ ಗಾಯಕ, ನಟ ರಾಜೇಶ್ ಕೃಷ್ಣನ್ ಮದುವೆ

ರಾಜೇಶ್ ಕೃಷ್ಣನ್ ಮದುವೆ ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ನಡೆಯಿತು. ಕೊಲ್ಲೂರಿನ ಅರ್ಚಕರ ಮನೆಯಲ್ಲಿ ರಾಜೇಶ್ ಹಾಗೂ ರಮ್ಯಾ ಹೊಸ ಜೀವನಕ್ಕ್ಕೆ ಅಡಿಯಿಟ್ಟರು. ಇವರಿಬ್ಬರ ಮದುವೆ ಸಮಾರಂಭ ಬಂಧುಮಿತ್ರರು ಹಾಗೂ ಆಪ್ತರ ಸಮ್ಮುಖದಲ್ಲಿ ನೆರವೇರಿತು.
ಕನ್ನಡದಲ್ಲಿ 5000ಕ್ಕೂ ಹೆಚ್ಚು ಹಾಡುಗಳು ರಾಜೇಶ್ ಕಂಠಸಿರಿಯಲ್ಲಿ ಹೊರಹೊಮ್ಮಿವೆ. ತೆಲುಗಿನಲ್ಲಿ 500 ಪ್ಲಸ್ ಹಾಡುಗಳು ಹಾಗೂ ತಮಿಳು ಮತ್ತು ಹಿಂದಿಯಲ್ಲಿ 250ಕ್ಕೂ ಹಾಡುಗಳನ್ನು ರಾಜೇಶ್ ಹಾಡಿದ್ದಾರೆ. ಹಾಗೆಯೇ 15ಕ್ಕೂ ಹೆಚ್ಚು ಭಾಷೆಗಳ ಭಕ್ತಿಗೀತೆಗಳು, ಜಾಹೀರಾತುಗಳು, ಆಲ್ಪಂಗಳಲ್ಲಿ ತಮ್ಮ ಧ್ವನಿಯನ್ನು ಛಾಪಿಸಿದ್ದಾರೆ.
ಹೋಗ ಬೇಡ ಹುಡುಗಿ ನನ್ನ ಬಿಟ್ಟು (ಅಣ್ಣಾವ್ರ ಮಕ್ಕಳು), ಸುಮ್ ಸುಮ್‌ನೇ ನಗ್ತಾಳೆ (ಎ), ಉಸಿರೇ ಉಸಿರೇ (ಹುಚ್ಚ), ನೂರು ಜನ್ಮಕು (ಅಮೆರಿಕ ಅಮೆರಿಕ), ಕರಿಯಾ ಐ ಲವ್ ಯು (ದುನಿಯಾ), ಒಂದೊಂದೇ ಬಚ್ಚಿಟ್ಟ ಮಾತು (ಇಂತಿ ನಿನ್ನ ಪ್ರೀತಿಯ), ಪ್ರೇಮ ಚಂದ್ರಮ (ಯಜಮಾನ), ಒಂದೇ ಉಸಿರಂತೆ (ಸ್ನೇಹಲೋಕ) ಹೀಗೆ ಹೆಸರಿಸುತ್ತಾ ಹೋದರೆ ರಾಜೇಶ್ ಹಾಡಿದ ಅದೆಷ್ಟೋ ಗೀತೆಗಳು ಕಿವಿಯಲ್ಲಿ ನರ್ತಿಸುತ್ತವೆ. ಹ್ಯಾಪಿ ಮ್ಯಾರೀಡ್ ಲೈಫ್ ರಾಜೇಶ್. (ಒನ್‌ಇಂಡಿಯಾ ಕನ್ನಡ)


Click it and Unblock the Notifications











