ರೆಹಮಾನ್‌ಗೆ ಇಂದಿರಾಗಾಂಧಿ ರಾಷ್ಟ್ರೀಯ ಏಕತಾ ಪ್ರಶಸ್ತಿ
ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಅವರು 25ನೇ ವರ್ಷದ ಇಂದಿರಾ ಗಾಂಧಿ ರಾಷ್ಟ್ರೀಯ ಏಕತಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 2009ನೇ ಸಾಲಿನ ಈ ಪ್ರಶಸ್ತಿಯನ್ನು ನಾರಾಯಣಪುರದ ಛತ್ತೀಸ್ ಗಡದ ರಾಮಕೃಷ್ಣ ಮಿಶನ್ ಜೊತೆ ರೆಹಮಾನ್ ಹಂಚಿಕೊಂಡಿದ್ದಾರೆ.
ರಾಷ್ಟ್ರೀಯ ಏಕತೆಯನ್ನು ದೇಶದೆಲ್ಲೆಡೆ ವ್ಯಾಪಿಸುವಂತೆ ಮಾಡಿದ ಸೇವೆಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಪತ್ರ ಹಾಗೂ ರು.2.5 ಲಕ್ಷ ನಗದು ಬಹುಮಾನವನ್ನು ಪ್ರಶಸ್ತಿ ಒಳಗೊಂಡಿದೆ. ಅಕ್ಟೋಬರ್ 31ರ ಇಂದಿರಾ ಗಾಂಧಿ ಅವರ ಪುಣ್ಯತಿಥಿಯಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಈ ಹಿಂದೆ ಇಂದಿರಾಗಾಂಧಿ ಪ್ರಶಸ್ತಿ ದಿವಂಗತ ರಾಜೀವ್ ಗಾಂಧಿ,ಪಂಜಾಬ್ ಮುಖ್ಯಮಂತ್ರಿ ದಿವಂಗತ ಬಿಯಾಂತ್ ಸಿಂಗ್, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಮತ್ತು ಶಂಕರ್ ದಯಾಳ್ ಶರ್ಮ, ಚಿತ್ರ ನಿರ್ಮಾಪಕ ಶ್ಯಾಮ್ ಬೆನಗಲ್, ಗೀತ ಸಾಹಿತಿ ಜಾವೇದ್ ಅಕ್ತರ್ ಹಾಗೂ ಸಾಹಿತಿ ಮಹಾಶ್ವೇತಾ ದೇವಿ ಅವರಿಗೆ ಕೊಡಲಾಗಿದೆ.
More from Filmibeat
ಎ ಆರ್ ರೆಹಮಾನ್ ಇಂದಿರಾಗಾಂಧಿ ರಾಷ್ಟ್ರೀಯ ಏಕತಾ ಪ್ರಶಸ್ತಿ ರಾಮಕೃಷ್ಣ ಮಿಶನ್ ಜೈ ಹೋ ಸೋನಿಯಾ ಗಾಂಧಿ a r rahman indira gandhi national integration award ramkrishna mission sonia gandhi


Click it and Unblock the Notifications











