ಕೊಲೆವರಿ ಡಿ ಹಾಡಿಗೆ ಯೂಟ್ಯೂಬ್ ಗೋಲ್ಡ್ ಪ್ರಶಸ್ತಿ

By Rajendra

Why this Kolaveri Di
ರಜನಿಕಾಂತ್ ಅಳಿಯ ಧನುಷ್ ರಚಿಸಿ, ಹಾಡಿರುವ Why this kolaveri di ಹಾಡು ಜನಪ್ರಿಯತೆಯ ತುತ್ತತುದಿ ತಲುಪಿದೆ. ಈ ಹಾಡಿಗೆ ಮತ್ತೊಂದು ಪ್ರಶಸ್ತಿಯೂ ಲಭ್ಯವಾಗಿದೆ. ಯೂಟ್ಯೂಬ್‌ನಲ್ಲಿ ಈ ಹಾಡಿಗೆ ಜನ ಮುಗಿಬಿದ್ದು ನೋಡಿ, ಕೇಳಿ ಆನಂದಿಸುತ್ತಿದ್ದಾರೆ. ಈಗಾಗಲೆ ಅವರ ಸಂಖ್ಯೆ 1.6 ಕೋಟಿ ದಾಟಿದೆ.

ಈ ಹಾಡನ್ನು ಯೂಟ್ಯೂಬ್ ತನ್ನ 'Recently Most Popular (Gold)' ವಿಡಿಯೋ ಪಟ್ಟಿಯಲ್ಲಿ ಸ್ಥಾನ ನೀಡಿದೆ. "ಏಳು ದಿನಗಳ ಅವಧಿಯಲ್ಲಿ ಯಾವ ವಿಡಿಯೋ Views, likes ಇತ್ಯಾದಿ ಅಂಶಗಳ ಮೂಲಕ ಅತ್ಯಂತ ಜನಪ್ರಿಯವಾಗುತ್ತದೋ ಅಂತಹ ಹಾಡಿಗೆ ಈ ಗೌರವ ನೀಡಲಾಗುತ್ತದೆ" ಎಂಬ ಸಣ್ಣ ಸಂದೇಶವನ್ನೂ ಯೂಟ್ಯೂಬ್ ಬಿತ್ತರಿಸಿದೆ.

ಇತ್ತೀಚೆಗೆ ಧನುಷ್ ಮುಂಬೈಗೆ ಭೇಟಿ ನೀಡಿ ಅಮಿತಾಬ್‌ರ ಆಶೀರ್ವಾದವನ್ನೂ ಪಡೆದದ್ದು ಗೊತ್ತೇ ಇದೆ. ಕೊಲವೆರಿ ಡಿ ಹಾಡಿಗೆ ತಾವೂ ಅಭಿಮಾನಿಯಾಗಿರುವುದಾಗಿ ಬಿಗ್ ಬಿ ತಿಳಿಸಿದ್ದರು. ಒಟ್ಟಿನಲ್ಲಿ ಒಂದು ಹಾಡನ್ನು ಹೇಗೆ ಜನಪ್ರಿಯಗೊಳಿಸಬಹುದು ಎಂಬುದಕ್ಕೆ ಕೊಲವೆರಿ ಡಿ ಅತ್ಯುತ್ತಮ ಉದಾಹರಣೆ. (ಏಜೆನ್ಸೀಸ್)

More from Filmibeat

English summary
Why this kolaveri di, written and sung by Dhanush for his upcoming movie 3 has achieved another feat.The song has been listed by YouTube under 'Recently Most Popular (Gold)' videos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X