»   » ಗೀತಾ ಚಿತ್ರದ ಜೊತೆಜೊತೆಯಲಿ ಹಾಡು

ಗೀತಾ ಚಿತ್ರದ ಜೊತೆಜೊತೆಯಲಿ ಹಾಡು

Subscribe to Filmibeat Kannada

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಸಕಲಕಲಾವಲ್ಲಭ ಶಂಕರನಾಗ್ ಅವರು ನಮ್ಮನ್ನು ಅಗಲಿ 18 ವರ್ಷ ಗತಿಸಿವೆ. ಅವರ ಮನೋಜ್ಞ ಅಭಿನಯ ಇಂದಿಗೂ ಕನ್ನಡ ಚಿತ್ರಪ್ರೇಮಿಗಳನ್ನು ಕಾಡುತ್ತಿದೆ. ಅಂತಹ ಮೇರು ನಟನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಿರಿಯ ವಯಸ್ಸಿನಲ್ಲಿಯೇ ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದ ಶಂಕರನಾಗ್ ಅವರಿಗೆ ಶಂಕರ್ ನಾಗ್ ಅವರೇ ಸಾಟಿ. ಅವರ ಚಿತ್ರಗಳು ಮತ್ತೊಮ್ಮೆ ಮಗದೊಮ್ಮೆ ನೋಡಬೇಕೆನಿಸುತ್ತದೆ.

ಶಂಕರ್ ನಾಗ್ ಜನಪ್ರಿಯ ಚಿತ್ರಗಳಲ್ಲಿ 1981ರಲ್ಲಿ ತೆರೆಕಂಡ 'ಗೀತಾ'ಚಿತ್ರವೂ ಒಂದು. ಆ ಚಿತ್ರದ 'ಜೊತೆಯಲಿ ಜೊತೆಯಲಿ' ಹಾಡು ಸಾಕಷ್ಟು ಜನಪ್ರಿಯ. ಇಳಯರಾಜ ಸಂಗೀತ, ಚಿ.ಉದಯಶಂಕರ್ ರಚನೆ ಹಾಗೂ ಎಸ್ಪಿಬಿ ಹಾಗೂ ಎಸ್.ಜಾನಕಿ ಕಂಠ ಮಾಧುರ್ಯ ಇಂದಿಗೂ ಪುಳಕಗೊಳಿಸುತ್ತದೆ.

ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೇ ಎಂದು
ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಹೊಸ ಹರುಷವ ತರುವೆನು ಇನ್ನು ಎಂದು

ಎಂಥ ಮಾತಾಡಿದೆ ಇಂದು ನೀ ಎಂಥ ಮಾತಾಡಿದೆ
ನನ್ನ ಮನಸಿನ ಭಾವನೆ ನೀನೆ ಹೇಳಿದೆ
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೇ ಎಂದು

ಆssss ಆssss....

ಪ್ರೀತಿ ಎಂದರೇನುಯೆಂದು ಈಗ ಅರಿತೆನು
ಸವಿ ನುಡಿಯಲಿ ತನು ಅರಳಿತು
ಸವಿಗನಸಲಿ ಮನ ಕುಣಿಯಿತು
ಒಲವಿನ ಈ ಮಾತಿಗೆ ಕರಗಿ ಹೋದೆ ನೋಟಕೆ
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ

ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೇ ಎಂದು

ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ
ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ
ಕಾಮನ ಬಿಲ್ಲೇರುವ ಜಾರುತ ನಾವಾಡುವ
ಹಗಲು ಇರುಳು ಒಂದಾಗಿ ಹಾಡುವ

ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೇ ಎಂದು
ಹೊಸ ಹರುಷವ ತರುವೆನು ಇನ್ನು ಎಂದು

ಎಂಥ ಮಾತಾಡಿದೆ ಇಂದು ನೀ ಎಂಥ ಮಾತಾಡಿದೆ
ನನ್ನ ಮನಸಿನ ಭಾವನೆ ನೀನೆ ಹೇಳಿದೆ
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೇ ಎಂದು

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada