»   » ಫೆಬ್ರವರಿ 11ರಂದು ಬೆಂಗಳೂರಿನಲ್ಲಿ ಸೋನು ಮಳೆ

ಫೆಬ್ರವರಿ 11ರಂದು ಬೆಂಗಳೂರಿನಲ್ಲಿ ಸೋನು ಮಳೆ

Posted By:
Subscribe to Filmibeat Kannada

ಸುದೀರ್ಘ ಸಮಯದ ಬಳಿಕ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಮತ್ತೊಮ್ಮೆ ಬೆಂಗಳೂರಿಗೆ ಮಿಂಚಿನಂತೆ ಆಗಮಿಸಿದ್ದು, ತಮ್ಮ ಗಾನಸುಧೆಯನ್ನು ಹರಿಸಲಿದ್ದಾರೆ. ಫೆಬ್ರವರಿ 11, 2012ರಂದು ಬೆಂಗಳೂರು ಅರಮನೆಯ ತ್ರಿಪುರ ವಾಸಿನಿ ಮೈದಾನದಲ್ಲಿ ಲೈವ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ತಮಗೆ ಹಿಂದಿ ಗೀತೆಗಳಿಗಿಂತ ಕನ್ನಡ ಹಾಡುಗಳೇ ಇಷ್ಟ ಎನ್ನುವ ಸೋನು ಕೇಳುಗರ ಹೃನ್ಮನ ತಣಿಸಲಿದ್ದಾರೆ. ಸಂಗೀತ ಸಂಜೆ ಕಾರ್ಯಕ್ರಮ 6.30ರ ಬಳಿಕ ಕಾರ್ಯಕ್ರಮ ಆರಂಭವಾಗಲಿದೆ. ಟಿಕೆಟ್ ಬೆಲೆ 1000, 500 ಹಾಗೂ 300 ರೂಪಾಯಿಗಳು.

ಈ ರಸಸಂಜೆ ಕಾರ್ಯಕ್ರಮಕ್ಕೆ "Tunes of Treasure Sonu Nigam in Namma Bengaluru" ಎಂದು ಹೆಸರಿಡಲಾಗಿದೆ. ಟಿಕೆಟ್‌ಗಳಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು ಹೀಗಿವೆ: 98860 76691, 98450 62336, 080-3292 3191. (ಒನ್‌ಇಂಡಿಯಾ ಕನ್ನಡ)

English summary
Bollywood playback singer Sonu Nigam loves singing Kannada songs compared to Hindi ones. He will be performing live once again for the Bangalore crowd. Tunes of Treasure Sonu Nigam programme held on Saturday the 11th February 2012 at Tripuravasini, Palace Grounds, Bangalore. Time 6.30 pm onwards.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X