ಈ ವಿಶಿಷ್ಟ ಕಲಾವಿದನಿಗೊಂದು ಅವಕಾಶ ಕೊಡಿ

ಚಲನಚಿತ್ರಗಳಲ್ಲಿ ಕರ್ನಾಟಕ ಮತ್ತು ಕನ್ನಡ ನಾಡು ನುಡಿ ಬಗ್ಗೆ ಹಾಡಿರುತ್ತವೆ. ಆದರೆ ಅವುಗಳನ್ನು ಹಾಡುವವರು ಮಾತ್ರ ಕನ್ನಡದವರಲ್ಲ ಎಂಬುದು ವಿಚಿತ್ರವಾದರೂ ಸತ್ಯ! ಮಾಧ್ಯಮಗಳಲ್ಲಿ ಕನ್ನಡದವರಿಗೆ ಅವಕಾಶ ಕೊಡುವ ಬಗ್ಗೆ ಮಾತನಾಡುವ ಹಲವರು, ವಿಕಾಸನಂಥವರು ಮನೆ ಬಾಗಿಲಿಗೆ ಬಂದರೂ ಮಾತನಾಡಿಸದೇ ಓಡಿಸುವುದು ಮಾತ್ರ ಅಸಹನೀಯ. ಸದ್ಯ ಸಂಸಾರ ನಿರ್ವಹಣೆಗೆ ಮಕ್ಕಳಿಗೆ ತರಬೇತಿ ನೀಡುತ್ತಿರುವ ವಿಕಾಸ, ಯಾಕಾದರೂ ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೋ ಅನಿಸುತ್ತದೆ ಎನ್ನುತ್ತಾರೆ. ಯಾಕೆಂದರೆ ಬರೀ ಕಲೆಯಿಂದಲೇ ಹೊಟ್ಟೆ ತುಂಬಲ್ಲ. ಅವಕಾಶ ಕೊಟ್ಟರೆ ಮಾತ್ರ ಹೊಟ್ಟೆ ತುಂಬುತ್ತದೆ ಎನ್ನುತ್ತಾರೆ.
ಎಷ್ಟೋ ಜನ ನಮ್ಮಂತಹವರ ಪರಿಸ್ಥಿತಿ ನೋಡಿ, ತಾವು ಕೂಡ ಇವರಂತೆ ಊಟಕ್ಕಾಗಿ ಪರದಾಡಬೇಕಾಗುತ್ತದೆ ಎಂದು ಈ ಕ್ಷೇತ್ರಕ್ಕೆ ಬರುತ್ತಿಲ್ಲವೆಂಬುದು ಮಾತ್ರ ಸತ್ಯ ಎಂದು ನೊಂದುಕೊಳ್ಳುತ್ತಾರೆ. ಇನ್ನು ಎಸ್ಪಿಯವರಿಗೆ ನನಗೆ ಅವಕಾಶವಿಲ್ಲದೇ ಊಟಕ್ಕೂ ಪರದಾಡುವಂತಾಗಿದೆ ಎಂದು ಹೇಳಲು ಕೂಡ ಆಗಲ್ಲ. ಯಾಕೆಂದರೆ ಕಲೆಗೆ, ಕಲಾವಿದರಿಗೆ ಕರ್ನಾಟಕದಲ್ಲಿ ಬೆಲೆಯಿಲ್ಲವೆಂದು ಎಸ್ಪಿಯವರ ಮುಂದೆ ಹೇಳಿಕೊಂಡರೆ ನಮ್ಮ ಕರ್ನಾಟಕದ ಮರ್‍ಯಾದೆ ನಾವೇ ಕಳೆದುಕೊಳ್ಳುವ ಇಂತಹ ಇಕ್ಕಟ್ಟಿನ ಪರಿಸ್ಥಿತಿ ನನ್ನದು ಎನ್ನುವ ವಿಕಾಸ, ಎಸ್ಪಿಯವರ ಕಂಠಸಿರಿಗಿಂತಲೂ ನನ್ನ ಸ್ವಂತ ಕಂಠಸಿರಿಯೂ ತುಂಬಾ ಮಾಧುರ್ಯವಾಗಿದೆ ಎಂದು ಎಸ್ಪಿಯವರೇ ಶ್ಲಾಘಿಸಿದ್ದಾರೆ ಆದರೆ ನಮ್ಮವರು ಗುರ್ತಿಸಲಿಲ್ಲ ಎನ್ನುತ್ತಾರೆ.
ವಿಳಾಸ:
ವಿಕಾಸ ಎಂ.ಹುಬ್ಳೀಕರ,
"ಗೀತ ನಿವಾಸ" ನಂ. 28, "ಜಿ" ರೆಸಿಡೆನ್ಸಿ ಎದುರು, 2ನೇ ಮಹಡಿ, ಪಾಪರೆಡ್ಡಿಪಾಳ್ಯ, 2ನೇ ಹಂತ, ನಾಗರಬಾವಿ, ಬೆಂಗಳೂರು-72
ಮೊಬೈಲ್: 98456 82895


Click it and Unblock the Notifications











