ಸಕಲೇಶಪುರದಲ್ಲಿ ಐವರು ಮೂರ್ಖರ ಹಂಗಾಮ

By Rajendra

5 ಈಡಿಯಟ್ಸ್ ಚಿತ್ರದ ಮೂಲಕ 'ಫ್ರೆಂಡ್ಸ್ ' ಚಿತ್ರದಲ್ಲಿ ನಟಿಸಿದ್ದ ವಾಸು ಮತ್ತು ಆನಂದ್ ಮತ್ತೆ ಸ್ನೇಹಿತರಾಗಿದ್ದಾರೆ. ಈ ಚಿತ್ರದಲ್ಲಿ ಪೆಟ್ರೋಲ್ ಪ್ರಸನ್ನ, ನವೀನ್ ಕೃಷ್ಣ, ಹರ್ಷಿಕಾ ಪೂಣಚ್ಚ ಹಾಗೂ ನಮ್ರತ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದು ಸಂಪೂರ್ಣ ಹೊಸಥರದ ಹಾಸ್ಯ ಕಥೆ ಎನ್ನುತ್ತಾರೆ ನಿರ್ದೇಶಕ ಆನಂದ್. ಈ ಚಿತ್ರವನ್ನು ಲೋಕೇಶ್ ಮೂರ್ತಿ, ಮೋಹನ್ ಹಾಗೂ ಶಿವರೆಡ್ಡಿ ಜಂಟಿಯಾಗಿ ನಿರ್ಮಿಸಿದ್ದಾರೆ.

ಇತ್ತೀಚೆಗೆ '5 ಈಡಿಯಟ್ಸ್' ಚಿತ್ರಕ್ಕೆ 5 ದಿವಸಗಳ ಅವಧಿಯಲ್ಲಿ ಸಕಲೇಶಪುರ ಹಾಗೂ ಮಡಿಕೇರಿ ಸುತ್ತ ಮುತ್ತ ಹಾಡೊಂದನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಈ ಹಾಡಿನ ದೃಶ್ಯದಲ್ಲಿ ನಟ ವಾಸು ಹಾಗೂ ನಾಯಕಿ ಹರ್ಷಿಕಾ ಪಾಲ್ಗೊಂಡಿದ್ದರು. ಈ ವಾರದಲ್ಲಿ ಈ ಚಿತ್ರಕ್ಕೆ ಮೊದಲ ಪ್ರತಿ ಸಿದ್ಧವಾಗಲಿದ್ದು ಈ ತಿಂಗಳ ಅಂತ್ಯದಲ್ಲಿ ಸೆನ್ಸಾರ್ ಮುಂದೆ ಹೋಗಲಿದ್ದು ಮುಂದಿನ ತಿಂಗಳು ಈ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ ಎಂದು ಚಿತ್ರದ ನಿರ್ದೇಶಕ ಆನಂದ್ ತಿಳಿಸಿದ್ದಾರೆ.

'5 ಈಡಿಯಟ್ಸ್" ಚಿತ್ರದ ಧ್ವನಿಸುರುಳಿಯನ್ನು ಜಿಲ್ಲಾವಾರು ಮಟ್ಟದಲ್ಲಿ ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ಬಿಡುಗಡೆ ಮಾಡಿ ಚಿತ್ರಕ್ಕೆ ಪ್ರಚಾರವನ್ನು ಪಡೆದಿರುವ ಶ್ವೇತ ಕ್ರೀಯೇಶನ್ಸ್ ಲಾಂಛನದಲ್ಲಿ "5 ಈಡಿಯಟ್ಸ್" ಚಿತ್ರಕ್ಕೆ ಬಾಲನಟನಾಗಿ ಗಮನ ಸೆಳೆದ ಆನಂದ್ ಪ್ರಥಮ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಈ ಚಿತ್ರಕ್ಕೆ ದೇವ ಸಂಗೀತ್ ಸಂಯೋಜನೆ ಮಾಡಿದ್ದು, ರೇಣು ಅವರ ಛಾಯಾಗ್ರಹಣ, ವಿ.ಮನೋಹರ, ಕೆ. ಕಲ್ಯಾಣ್‌ರ ಸಾಹಿತ್ಯ ರಚನೆ ಇದೆ. ನವ್ಯಶ್ರೀ, ಕರಿಬಸವಯ್ಯ, ಚಿದಾನಂದ, ದಯಾನಂದ, ಟನ್ನಿಸ್‌ಕೃಷ್ಣ, ಬ್ಯಾಂಕ್ ಜನಾರ್ಧನ, ಹೀಗೆ ಹಾಸ್ಯ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X