»   » ಉಪೇಂದ್ರ ಭೀಮೂಸ್ ಧ್ವನಿ ಸುರುಳಿ ಬಿಡುಗಡೆ

ಉಪೇಂದ್ರ ಭೀಮೂಸ್ ಧ್ವನಿ ಸುರುಳಿ ಬಿಡುಗಡೆ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ' ಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮ ಭಾನುವಾರ ಸಂಜೆ ಗ್ರಾಂಡ್ ಅಶೋಕ ಹೋಟೆಲ್ ನಲ್ಲಿ ನಡೆಯಿತು.

ಚಿತ್ರದ ನಿರ್ಮಾಪಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರು ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಸಮಾರಂಭಕ್ಕೆ ನಟ, ಮಾಜಿ ಸಂಸದ ಅಂಬರೀಷ್,ಅಶೋಕ್ ಖೇಣಿ, ಅನಿಲ್ ಲಾಡ್, ಚಿತ್ರದ ನಾಯಕ ನಟ ಉಪೇಂದ್ರ, ಸಂಗೀತ ನಿರ್ದೇಶಕ ಗುರುಕಿರಣ್, ಹಂಚಿಕೆದಾರ ಪಾಲ್ ಚಂದಾನಿ, ಸಾಹಿತಿ ಶೇಕರಪ್ಪ ಹುಲಿಗೆರೆ ಮುಂತಾದವರು ಹಾಜರಿದ್ದರು. ಆದರೆ ಚಿತ್ರದ ನಟಿಯರಾದ ರಮ್ಯಾ ಮತ್ತು ಪಾರ್ವತಿ ಮೆಲ್ಟನ್ ಗೈರುಹಾಜರಾಗಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದ ರಾಜೇಂದ್ರ ಸಿಂಗ್ ಬಾಬು, ಈ ಚಿತ್ರದ ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸಕ್ಕೆ ಸುಮಾರು 1 ಕೋಟಿ ರುಪಾಯಿ ಖರ್ಚು ಮಾಡಿದ್ದೇವೆ ಹಾಗೂ 120 ದಿನಗಳ ಕಾಲ ಶೂಟಿಂಗ್ ನಡೆಸಿದ್ದೇವೆ ಎಂದರು.ಉದ್ಯಮಿ ಅಶೋಕ್ ಖೇಣಿ ಅವರ ಹೋರಾಟ ಮನೋಭಾವ ನನಗೆ ಸ್ಫೂರ್ತಿ. ತನ್ನ ಮತ್ತು ಅಂಬರೀಷ್ ಅವರ ಸ್ನೇಹ ಬಹಳ ಹಳೆಯದು ಎಂದು ತಮ್ಮ ಸ್ನೇಹ ಸಂಬಂಧವನ್ನು ನೆನೆದರು.

ಚಿತ್ರದಲ್ಲಿ ಒಟ್ಟು 8ಹಾಡುಗಳಿದ್ದು ಗುರುಕಿರಣ್, ಸೋನು ಖಕ್ಕರ್, ಶ್ರೀನಿ, ಚೈತ್ರಾ, ಎಸ್ ಪಿ ಬಾಲಸುಬ್ರಮಣ್ಯಂ, ಮನು, ಮಾಲ್ಗುಡಿ ಶುಭ, ನಂದಿತಾ, ಅಪೂರ್ವ ಮತ್ತು ರಾಜೇಶ್ ಕೃಷ್ಣನ್ ಹಾಡಿದ್ದಾರೆ. ಸಾಹಿತ್ಯ ಕವಿರಾಜ್, ಶೇಕರಪ್ಪ ಹುಲಿಗೆರೆ ಮತ್ತು ಸಿದ್ಧಕಟ್ಟಿ ಚಂದ್ರ ರಾಜ ಶೆಟ್ಟಿ ಅವರದು. ಉಪೇಂದ್ರ ದ್ವಿಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದಲ್ಲಿ ರಮ್ಯಾ ಮತ್ತು ಪಾರ್ವತಿ ಮೆಲ್ಟನ್ ನಾಯಕಿಯರಾಗಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada