twitter
    For Quick Alerts
    ALLOW NOTIFICATIONS  
    For Daily Alerts

    ಯೋಗರಾಜ್ ಭಟ್ಟರ ಲೇಖನಿಯಿಂದ ಇಂಥಾ ಹಾಡೇ!

    By Rajendra
    |

    ಚಿತ್ರ ನಿರ್ದೇಶಕ ಯೋಗರಾಜ್ ಭಟ್ಟರ ಹೃದಯದೊಳಗೆ ಅವಿತು ಕೂತಿರುವ ಕವಿ ಇಲ್ಲಿ ಜಾಗೃತನಾಗಿದ್ದಾನೆ. ಅವರ ಲೇಖನಿಯಿಂದ ಹೊರಬಂದಿರುವ ಈ ಗೀತೆಯಲ್ಲಿ ಲವಲವಿಕೆಯಲ್ಲಿದೆ. 'ಜಾಕಿ' ಧ್ವನಿಸುರುಳಿ ಬಿಡುಗಡೆಗೂ ಮುನ್ನ ಈ ಹಾಡು ಅಂತರ್ಜಾಲದಲ್ಲಿ ಸೋರಿಕೆಯಾಗಿದ್ದು ಈ ಹಾಡು ಸಾಕಷ್ಟು ಸುದ್ದಿಯಾಗಿದೆ.

    ಗುಂಡು ಪ್ರಿಯರು, ಗುಂಡ್ರುಗೊವಿಗಳು, ಇಸ್ಪೀಟ್ ಪ್ರಿಯರನ್ನು ಉದ್ದೇಶವಾಗಿಟ್ಟುಕೊಂಡು ಭಟ್ಟರು ಈ ಹಾಡಿನ ಸಾಹಿತ್ಯವನ್ನು ಹೆಣೆದಿದ್ದಾರೆ. ಭಟ್ಟರ ಲೇಖನಿಯಿಂದ ಇಂಥಾ ಹಾಡಾ ಎಂದು ಚಿತ್ರರಸಿಕರು ಉದ್ಗಾರ ತೆಗೆದಿದ್ದಾರೆ. ತುಂಟತನ ಜೊತೆಗೆ ಈ ಹಾಡಿನಲ್ಲಿ ಸಂದೇಶವೂ ಮಿಳಿತವಾಗಿದೆ.

    ಟಿಪ್ಪು ಹಾಡಿರುವ ಈ ಹಾಡಿಗೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಆಗಸ್ಟ್ 20ರಂದು ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಲಿದೆ. ಭಟ್ಟರ ಉಳಿದ ಹಾಡುಗಳಂತೆ ಈ ಹಾಡಿನ ಸಾಹಿತ್ಯವೂ ಜನಪ್ರಿಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ಯಾಕೆ ತಡ ಓದಿ ಒಂದು ಕಾಮೆಂಟ್ ವಗೀರಿ!

    ಯಕ್ಕಾ ರಾಜ ರಾಣಿ ನನ್ನ ಕೈಯೊಳಗೆ
    ಹಿಡಿ ಮಣ್ಣು ನಿನ್ನ ಬಾಯೊಳಗೆ
    ಆಡ ಬೇಡ ನನ್ನ ಜೊತೆ ಸ್ವಲ್ಪ ಕುಡಿ
    ಕೈ ಮುಗಿವೆ ಮನೆಗೆ ನಡಿ.

    ಯಕ್ಕಾ ರಾಜ ರಾಣಿ ನನ್ನ ಕೈಯೊಳಗೆ
    ಹಿಡಿ ಮಣ್ಣು ನಿನ್ನ ಬಾಯೊಳಗೆ
    ಆಡ ಬೇಡ ನನ್ನ ಜೊತೆ ಸ್ವಲ್ಪ ಕುಡಿ
    ಕೈ ಮುಗಿವೆ ಮನೆಗೆ ನಡಿ
    ಕೈ ಮುಗಿವೆ ಮನೆಗೆ ನಡಿ, ಕೈ ಮುಗಿವೆ ಮನೆಗೆ ನಡಿ

    ಒಳ್ಳೆ ಕಾರ್ಡು ಬಿತ್ತು ಅಂದ್ರೆ, ಒಳ್ಳೆ ಕಾರ್ಡು ಬಿತ್ತು ಅಂದ್ರೆ
    ಒಳ್ಳೆ ಕಾರ್ಡು ಬಿತ್ತು ಅಂದ್ರೆ ಕತ್ತೆ ಕೂಡ ಗೆಲ್ಲುವುದು
    ಸತ್ತರೂನು ಬೀಳೊದಿಲ್ಲ ಬೋಳಿ ಮಗಂದು
    ನಾವ್ ಆಡಬೇಕು ದೇವರನ್ನೆ ನೆಚ್ಚಿಕೊಂಡು

    ಒಂದೆ ಆಟ, ಒಂದೆ ಆಟ,
    ಒಂದೆ ಆಟ ಒಂದೆ ಆಟ ಎಂದು ಕೊಂಡು ಎಂಡಿನಲ್ಲಿ
    ಸೇರಬೇಕು ಸಾಲ ಎಂಬ ಸುಡುಗಾಡು ನಾವ್
    ನಮ್ಮ ಹೆಣ ನಾವುಗಳೆ ಹೊತ್ತುಕೊಂಡು
    ಸಾಯಬೇಡ ಅಷ್ಟು ಬೇಗ ಸ್ವಲ್ಪ ತಡಿ,
    ಸಾಯಬೇಡ ಅಷ್ಟು ಬೇಗ ಸ್ವಲ್ಪ ತಡಿ,
    ದೇವರವ್ನೆ ನೀ ನೈಂಟಿ ಹೊಡಿ
    ನೈಂಟಿ ಹೊಡಿ, ನೈಂಟಿ ಹೊಡಿ

    ಯಕ್ಕಾ ರಾಜ ರಾಣಿ ನನ್ನ ಕೈಯೊಳಗೆ
    ಹಿಡಿ ಮಣ್ಣು ನಿನ್ನ ಬಾಯೊಳಗೆ
    ಆಡ ಬೇಡ ನನ್ನ ಜೊತೆ ಸ್ವಲ್ಪ ಕುಡಿ
    ಕೈ ಮುಗಿವೆ ಮನೆಗೆ ನಡಿ
    ಕೈ ಮುಗಿವೆ ಮನೆಗೆ ನಡಿ, ಕೈ ಮುಗಿವೆ ಮನೆಗೆ ನಡಿ

    ಯಾವ್ದು ಇಲ್ಲಿ ಅಂದರ್ ಆಯ್ತು, ಯಾವ್ದು ಇಲ್ಲಿ ಬಾಹರ್ ಆಯ್ತು
    ಯಾವ್ದು ಇಲ್ಲಿ ಅಂದರ್ ಆಯ್ತು, ಯಾವ್ದು ಇಲ್ಲಿ ಬಾಹರ್ ಆಯ್ತು
    ಹೇಳುವುದು ಹೇಗೆ ಲೆಕ್ಕ ಇಟ್ಟುಕೊಂಡು, ನಾವ್
    ಆಡ ಬೇಕು ಗ್ಯಾಪು ಕೊಡದೆ ಮುಚ್ಚು ಕೊಂಡು

    ಜೋಕಿಗಂತ, ಜೋಕಿಗಂತ,
    ಜೋಕಿಗಂತ ಆಡುತ್ತೀವಿ ಸಾವ್ರ ಪಾಲು ಬಿಟ್ರು ನಾವು
    ಹೆದೊರೊದಿಲ್ಲ ಮನೆ ಮಠ ಕಳ್ಕೊಂಡು
    ಪಾಪ ಪಾಂಡವರು ಹೆಂಡ್ತಿಯನ್ನೆ ಮಾರಿಕೊಂಡ್ರು
    ಸಾಲ ಜಾಸ್ತಿ ಆದರೆ ಆಗ್ಲಿ ಬಿಡಿ, ಸಾಲ ಜಾಸ್ತಿ ಆದರೆ ಆಗ್ಲಿ ಬಿಡಿ
    ದೇವರವ್ನೆ ಮನೆ ಮಾರಿಬಿಡಿ.
    ಮಾರಿಬಿಡಿ, ಮಾರಿಬಿಡಿ ,ಮಾರಿಬಿಡಿ

    ಯಕ್ಕಾ ರಾಜ ರಾಣಿ ನನ್ನ ಕೈಯೊಳಗೆ
    ಹಿಡಿ ಮಣ್ಣು ನಿನ್ನ ಬಾಯೊಳಗೆ
    ಆಡ ಬೇಡ ನನ್ನ ಜೊತೆ ಸ್ವಲ್ಪ ಕುಡಿ
    ಕೈ ಮುಗಿವೆ ಮನೆಗೆ ನಡಿ
    ಕೈ ಮುಗಿವೆ ಮನೆಗೆ ನಡಿ, ಕೈ ಮುಗಿವೆ ಮನೆಗೆ ನಡಿ

    Tuesday, August 10, 2010, 17:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X